Featured
ಮತಗಳವು ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಡಿಕೆ ಶಿವಕುಮಾರ್
“ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ ಸಹಿಸಂಗ್ರಹ ಅಭಿಯಾನದಲ್ಲಿ ಸಕ್ರಿಯರಾಗದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿಕೆ.ಶಿವಕುಮಾರ್ ಅವರು ಎಚ್ಚರಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಹರಿಯಾಣದಲ್ಲಿ ನಡೆದಿರುವ ಮತಗಳ್ಳತನ ವಿಚಾರವಾಗಿ ಕರ್ನಾಟಕ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಮಾಡುತ್ತೇವೆ. ಈಗಾಗಲೇ ಲಕ್ಷಾಂತರ ಸಹಿಸಂಗ್ರಹ ಮಾಡಿದ್ದೇವೆ. ಅದನ್ನು ನ.9 ರಂದು ದೆಹಲಿಗೆ ತೆಗೆದುಕೊಂಡು ಬರುತ್ತೇವೆ. ಬ್ಲಾಕ್ ಅಧ್ಯಕ್ಷರ ಜೊತೆ ಚರ್ಚೆ ಮಾಡಲಿದ್ದೇನೆ. ಈ ಅಭಿಯಾನದಲ್ಲಿ ಯಾರು
ಭುಜನೋವೆಂದು ಕ್ಲಿನಿಕ್ನಲ್ಲಿ ಇಂಜೆಕ್ಷನ್: ಕೊಡಗಿನಲ್ಲಿ ಯುವಕ ಸಾವು
ಕೊಡಗಿನ ಸುಂಟಿಕೊಪ್ಪದಲ್ಲಿ ಭುಜ ನೋವು ಎಂದು ಖಾಸಗಿ ಕ್ಲಿನಿಕ್ಗೆ ಹೋಗಿ ಇಂಜೆಕ್ಷನ್ ಪಡೆದುಕೊಂಡ ಯುವಕ ಮೃತಪಟ್ಟಿದ್ದಾನೆ. ವಿನೋದ್ (34) ಮೃತಪಟ್ಟ ಯುವಕ. ವಿನೋದ್ ಭುಜ ನೋವು ಬಾಧಿಸುತ್ತಿದೆಯೆಂದು ಸಂಜೆ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್ಗೆ ಹೋಗಿದ್ದರು. ಈ ವೇಳೆ ಅಲ್ಲಿ ವೈದ್ಯರು ಅವರಿಗೆ
ಸರ್ಕಾರ ಪ್ರತಿ ಟನ್ ಕಬ್ಬಿಗೆ 500 ರೂ. ಸಹಾಯಧನ ನೀಡಲಿ: ಆರ್. ಅಶೋಕ
ಕಬ್ಬು ಬೆಳೆಗಾರರ ಬದುಕಿನ ಜತೆ ರಾಜ್ಯ ಸರ್ಕಾರ ಚೆಲ್ಲಾಟ ಆಡುತ್ತಿದೆ, ಇದೇ ವರ್ತನೆ ಮುಂದುವರಿದರೆ ರೈತರ ಹೋರಾಟದ ಕಿಚ್ಚು ಸರ್ಕಾರವನ್ನೇ ಆಹುತಿ ತೆಗೆದುಕೊಳ್ಳದೇ ಬಿಡುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಎಂಟು ದಿನಗಳಿಂದ ಬೆಳಗಾವಿ,
ನಿರ್ಲಜ್ಜತೆಯಿಂದ ಸುಳ್ಳು ಹೇಳುವಾಗ ಪ್ರಹ್ಲಾದ್ ಜೋಷಿ ಸಚಿವ ಸ್ಥಾನದ ಮರ್ಯಾದೆ ಗಮನಿಸಬೇಕಿತ್ತು: ಸಿಎಂ
ಇಂತಹದ್ದೊಂದು ಬೆತ್ತಲೆ ಸುಳ್ಳನ್ನು ನಿರ್ಲಜ್ಜತೆಯಿಂದ ರಾಜಾರೋಷವಾಗಿ ಹೇಳುವಾಗ ತಾನು ಹೊಂದಿರುವ ಸಚಿವ ಸ್ಥಾನದ ಮರ್ಯಾದೆಯನ್ನಾದರೂ ಜೋಷಿ ಗಮನದಲ್ಲಿಡಬೇಕಿತ್ತು. ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ಎಥೆನಾಲ್ ಹಂಚಿಕೆ ನಿಗದಿ ಆಗಿರುವುದು 116.30 ಕೋಟಿ ಲೀಟರ್ ಹೊರತು 47 ಕೋಟಿ ಲೀಟರ್ ಅಲ್ಲ. ಮುಖ್ಯಮಂತ್ರಿ
ಬಿಹಾರ ವಿಧಾನಸಭೆ ಚುನಾವಣೆ: ಮೊದಲ ಹಂತದಲ್ಲಿ ಶೇ.60.13 ಮತದಾನ
ಪಾಟ್ನಾ: ಭಾರೀ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆಗೆ ಗುರುವಾರ ನಡೆದ ಮತದಾನದಲ್ಲಿ ಶೇ.60.13ರಷ್ಟು ಮತದಾನವಾಗಿದ್ದು, ಕಳೆದ 20 ವರ್ಷಗಳಲ್ಲೇ ಗರಿಷ್ಠ ಮತದಾನದ ದಾಖಲೆ ಬರೆದಿದೆ. ಕೇಂದ್ರ ಚುನಾವಣಾ ಆಯೋಗ ಈ ಮಾಹಿತಿ ನೀಡಿದ್ದು ಸಂಜೆ 5 ಗಂಟೆವರೆಗೆ ಬಿಹಾರದಲ್ಲಿ ಒಟ್ಟಾರೆ ಶೇ.60.13ರಷ್ಟು
ಕಬ್ಬು ಬೆಳೆಗೆ 3200 ರೂ. ನಿಗದಿಗೆ ರಾಜ್ಯ ಸಚಿವ ಸಂಪುಟ ಅಸ್ತು: ನಾಳೆ ಮಾತುಕತೆಗೆ ಆಹ್ವಾನ
ಕಬ್ಬು ಬೆಳೆಗೆ ಗರಿಷ್ಠ 3500 ರೂ. ನಿಗದಿಪಡಿಸುವಂತೆ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಬ್ಬು ಪ್ರತಿ ಟನ್ ಗೆ ಗರಿಷ್ಠ 3200 ರೂ. ನಿಗದಿಪಡಿಸಿರುವುದಾಗಿ ಘೋಷಿಸಿದೆ. ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ತುರ್ತು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ
ಆಸ್ಟ್ರೇಲಿಯಾಗೆ 48 ರನ್ ಸೋಲುಣಿದ ಭಾರತ, ಟಿ-20 ಸರಣಿಯಲ್ಲಿ 2-1ರಿಂದ ಮುನ್ನಡೆ
ಭಾರತದ ಸ್ಪಿನ್ ದಾಳಿಗೆ ನಾಟಕೀಯ ಕುಸಿತ ಅನುಭವಿಸಿದ ಆಸ್ಟ್ರೇಲಿಯಾ ತಂಡವನ್ನು 48 ರನ್ ಗಳಿಂದ ಮಣಿಸಿದ ಭಾರತ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಕ್ವೀನ್ಸ್ಲ್ಯಾಂಡ್ನ ಕೆರಾರ ಓವಲ್ ಮೈದಾನದಲ್ಲಿ ನಡೆದ 4ನೇ ಪಂದ್ಯದಲ್ಲಿ ಟಾಸ್ ಸೋತು
ಬಿಹಾರ ಡಿಸಿಎಂ ಕಾರಿನ ಮೇಲೆ ಕಲ್ಲುತೂರಾಟ!
ಬಿಹಾರ ವಿಧಾನಸಭೆಯ ಮತದಾನದ ವೇಳೆ ಕ್ಷೇತ್ರಕ್ಕೆ ಭೇಟಿ ನೀಡಿದ ಡಿಸಿಎಂ ಅವರ ಕಾರಿನ ಮೇಲೆ ಸ್ಥಳೀಯರು ಚಪ್ಪಲಿ ಹಾಗೂ ಕಲ್ಲುತೂರಾಟ ನಡೆಸಿದ್ದಾರೆ. ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆ ಗುರುವಾರ ನಡೆಯುತ್ತಿದ್ದು, ಬಿಜೆಪಿ ಮುಖಂಡ ಹಾಗೂ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ
2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದೇ ಕ್ರಾಂತಿ: ಡಿಕೆ ಶಿವಕುಮಾರ್
“ನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ, ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನವೆಂಬರ್
ನ್ಯಾಯಾಲಯ ನ್ಯಾಯದ ದೇವಾಲಯವೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ : ಸಿಜೆಐ ಭೂಷಣ್ ಗವಾಯಿ
ನ್ಯಾಯಾಲಯ ನ್ಯಾಯದ ದೇವಾಲಯವಾಗಬೇಕೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ, ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಾಂಬೆ ಹೈಕೋರ್ಟ್ ಸಂಕೀರ್ಣವು ದುಂದುಗಾರಿಕೆಯನ್ನು ತಪ್ಪಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಹೇಳಿದ್ದಾರೆ. ಬಾಂದ್ರಾ (ಪೂರ್ವ)ದಲ್ಲಿ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಿದ ಮಾತನಾಡಿದ ಗವಾಯಿ, ಹೊಸ




