Featured
ಬೆಂಗಳೂರಿನಲ್ಲಿ 2 ಸ್ಲೀಪರ್ ಕೋಚ್ ಬಸ್ ಡಿಕ್ಕಿ: ನಾಲ್ವರಿಗೆ ಗಾಯ
ಬೆಂಗಳೂರು: ಆನೇಕಲ್ ತಾಲೂಕಿನ ಚಂದಾಪುರ ಫ್ಲೈಓವರ್ ಮೇಲೆ ಎರಡು ಸ್ಲೀಪರ್ ಕೋಚ್ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಚೆನ್ನೈ ಕಡೆಗೆ ಹೊರಟಿದ್ದ ಎರಡು ಸ್ಲೀಪರ್ ಬಸ್‌ಗಳು ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಂದಾಪುರದ ಬಳಿ ಡಿಕ್ಕಿ ಹೊಡೆದಿವೆ. ಮುಂಬದಿ ಸಾಗುತ್ತಿದ್ದ ಸ್ಲೀಪರ್ ಬಸ್‌ಗೆ ಹಿಂಬದಿಯಿಂದ ಮತ್ತೊಂದು ಸ್ಲೀಪರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿ
ಪಡಿಕ್ಕಲ್, ಮಯಾಂಕ್ ಶತಕ: ಪುದುಚೇರಿ ಮಣಿಸಿದ ಕರ್ನಾಟಕ
ಆರಂಭಿಕರಾದ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಸಿಡಿಸಿದ ಶತಕಗಳ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಪುದುಚೇರಿ ತಂಡವನ್ನು 67 ರನ್ ಗಳಿಂದ ಮಣಿಸಿದೆ. ಜೈಪುರದಲ್ಲಿ ಬುಧವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು
ಕೋಮಾಗೆ ಜಾರಿದ ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್!
ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೆಮಿಯನ್ ಮಾರ್ಟಿನ್ ಕೋಮಾಗೆ ಜಾರಿದ್ದಾರೆ. ಆಸ್ಟ್ರೇಲಿಯಾ ಪರ 208 ಏಕದಿನ ಮತ್ತು 67 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ 54 ವರ್ಷದ ಡೇಮಿಯನ್ ಮಾರ್ಟಿನ್ ಮೆಲ್ಬೋರ್ನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋಮಾಗೆ ಜಾರಿದ್ದಾರೆ ಎಂದು ವೈದ್ಯರು
ಚಲಿಸುವ ವಾಹನದಲ್ಲಿ ಮಹಿಳೆ ಮೇಲೆ 2 ಗಂಟೆ ಅತ್ಯಾಚಾರ ಎಸಗಿ ರಸ್ತೆಯಲ್ಲಿ ಎಸೆದು ಹೋದ ಕಿಡಿಗೇಡಿಗಳು!
ಚಲಿಸುವ ವ್ಯಾನ್ ನಲ್ಲಿ 28 ವರ್ಷದ ಮಹಿಳೆ ಮೇಲೆ 2 ಗಂಟೆಗಳ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ನಂತರ ರಸ್ತೆಯಲ್ಲಿ ಬಿಸಾಕಿ ಹೋದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ನಡೆದಿದೆ. ಸೋಮವಾರ ಮತ್ತು ಮಂಗಳವಾರದ ನಡುವೆ ರಾತ್ರಿ
ಕೋಗಿಲು ಪ್ರಕರಣ: ಹೊರ ರಾಜ್ಯದವರಿಗೆ ಮನೆ ಕೊಟ್ಟರೆ ಸಹಿಸಲ್ಲವೆಂದು ಎಚ್ಚರಿಕೆ ನೀಡಿದ ಕರವೇ
ಕೋಗಿಲು ಲೇಔಟ್ ಹಾಗೂ ಫಕೀರ್ ಕಾಲೊನಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರನ್ನು ತೆರವುಗೊಳಿಸಿರುವ ಪ್ರಕರಣ ಸಂಬಂಧ ಹೊರ ರಾಜ್ಯದವರಿಗೆ ಫ್ಲ್ಯಾಟ್ ಕೊಟ್ಟರೆ ಸಹಿಸುವುದಿಲ್ಲ, ಹೋರಾಟ ಮಾಡುತ್ತೇವೆ, ಮೂಲ ಕನ್ನಡಿಗರಿಗೆ ಮನೆಗಳನ್ನು ಕೊಡಿ ಎಂದು ಕರವೇ ರಾಜಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾವೆಂದ ಚೀನಾ: ಮೂರನೆಯವರು ಭಾಗಿಯಾಗಿಲ್ಲವೆಂದ ಭಾರತ
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಿಲ್ಲಿಸುವ ಸಂಧಾನ ಮಾಡಿದ್ದು ನಾವು ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಕದನ ವಿರಾಮ ನಿರ್ಧಾರದಲ್ಲಿ ಮೂರನೆಯವರು ಭಾಗಿಯಾಗಿಲ್ಲ ಎಂದು ಹೇಳಿದೆ. ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು
ಪೊಲೀಸ್ ವಿರುದ್ಧ ವಿಜಯಲಕ್ಷ್ಮೀ ಆರೋಪ: ಆಯುಕ್ತರು ಹೇಳಿದ್ದೇನು
“ಪೊಲೀಸರು ಕೇವಲ ಕೆಲವರಿಗಲ್ಲ, ಎಲ್ಲರಿಗಾಗಿಯೂ ಇದ್ದಾರೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಮಾಡಿದ್ದ ಆರೋಪಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು
ಹೊಸ ವರ್ಷಾಚರಣೆಯಲ್ಲಿ ಕುಡಿದು ಬಿದ್ದವರನ್ನು ಮನೆಗೆ ಬಿಡುವುದಿಲ್ಲ: ಸಚಿವ ಪರಮೇಶ್ವರ್
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ತುಂಬಾ ಕುಡಿದು ನಡೆಯಲು ಆಗದಿರುವವರನ್ನು ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡುವುದಿಲ್ಲ ಎಂದು ಗೃಹ ಪರಮೇಶ್ವರ್ ಸ್ಪಷ್ಟವಾಗಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದು ನಡೆಯಲು ಆಗದಿರುವವರನ್ನು
ಚಾಮರಾಜನಗರದಲ್ಲಿ ರಾತ್ರಿ ಕಾರ್ಯಾಚರಣೆಯಲ್ಲಿ ಗಂಡು ಹುಲಿ ಸೆರೆ
ಚಾಮರಾಜನಗರದಲ್ಲಿ ಹೆಚ್ಚಾಗಿರುವ ಹುಲಿಗಳ ಹಾವಳಿ ನಿಯಂತ್ರಣಕ್ಕೆ ನಡೆಯುತ್ತಿರುವ ಆಪರೇಷನ್ 5 ಟೈಗರ್ಸ್ ಕಾರ್ಯಾಚರಣೆಯಲ್ಲಿ ಮಂಗಳವಾರ ರಾತ್ರಿ ಒಂದು ಗಂಡು ಹುಲಿ ಸೆರೆ ಸಿಕ್ಕಿದೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ತಾಯಿ ಹುಲಿಯೊಂದಿಗೆ ನಾಲ್ಕು ಮರಿ ಹುಲಿಗಳು ಬೀಡುಬಿಟ್ಟಿರುವ ಚಾಮರಾಜನಗರ ತಾಲೂಕಿನ
ಬಸ್‌ನಲ್ಲಿ ಕಾಮುಕನ ಕಿರುಕುಳ: ಸೋಷಿಯಲ್ ಮೀಡಿಯಾದಲ್ಲಿ ಆತನ ವೀಡಿಯೊ ಶೇರ್ ಮಾಡಿದ ಯುವತಿ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುವ ಬಸ್‌ನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಯುವತಿ ಸೀಟಲ್ಲಿ ಕುಳಿತಿದ್ದ ಆತನ ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಯುವತಿ ಕಾರವಾರದಿಂದ ಅಂಕೋಲಾ ಕಡೆಗೆ




