Featured
ಬೆಂಗಳೂರಿನಲ್ಲಿ 26 ರ ಮಹಿಳೆ, 52 ವರ್ಷದ ಪುರುಷ ಲಿವ್ ಇನ್ ಟುಗೆದರ್: ಹೊಸ ಸ್ನೇಹಿತನೊಂದಿಗಿದ್ದ ಮಹಿಳೆಯ ಕೊಲೆಗೈದ ಪಾರ್ಟ್‌ನರ್
ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯ ಜೊತೆ 52 ವರ್ಷದ ಪುರುಷ ಸಹಜೀವನ ನಡೆಸುತ್ತಿದ್ದು, ಈ ಸಂಬಂಧವು ಮಹಿಳೆಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಪೆಟ್ರೊಲ್ ಎರಚಿ ಮಹಿಳೆಯನ್ನು ಸಂಗಾತಿಯಾಗಿದ್ದ ವ್ಯಕ್ತಿ ಬರ್ಬರವಾಗಿ ಸಾಯಿಸಿದ್ದಾನೆ. ವನಜಾಕ್ಷಿ ಕೊಲೆಯಾದ ಮಹಿಳೆ, ಕ್ಯಾಬ್ ಚಾಲಕ ವಿಠಲ ಕೊಲೆಗಾರನಾಗಿದ್ದು, ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳು, ವನಜಾಕ್ಷಿಗೆ ಮದುವೆಯಾಗಿ ಗಂಡ ಮೃತಪಟ್ಟಿದ್ದರು, ಆರೋಪಿ ವಿಠ್ಠಲನಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ
ಸಚಿವ ಜಮೀರ್‌ಗೆ 2.5 ಕೋಟಿ ರೂ. ಸಾಲ: ರಾಧಿಕಾ ಕುಮಾರಸ್ವಾಮಿಯ ವಿಚಾರಣೆ ನಡೆಸಿದ ಲೋಕಾಯುಕ್ತ
ವಸತಿ ಸಚಿವ ಜಮೀರ್ ಅಹ್ಮದ್‌ಗೆ 2.5 ಕೋಟಿ ಸಾಲ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ಜಮೀರ್ ಆದಾಯದ ಮೂಲಗಳನ್ನು ಪರಿಶೀಲಿಸಿದಾಗ ಪತ್ತೆಯಾಗಿರುವ
ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಸರ್ಕಾರದ ಗುರಿ: ಸಿಎಂ ಸಿದ್ದರಾಮಯ್ಯ
ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ಕೊಡಲು ಅಂದು ಭಾಗ್ಯಗಳು-ಇಂದು ಗ್ಯಾರಂಟಿಗಳು ವರದನವಾಗಿವೆ. ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲಾಡಳಿತ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ,
ಓಣಂ: ಬೆಂಗಳೂರಿನಿಂದ ಕೇರಳಕ್ಕೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ
ಓಣಂ ಹಬ್ಬದ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 4 ರವರೆಗೆ ಬೆಂಗಳೂರು-ಕೇರಳ ಮಧ್ಯೆ ಕೆಎಸ್‌ಆರ್‌ಟಿಸಿಯಿಂದ 90 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ಮೈಸೂರು ರಸ್ತೆ ಮತ್ತು ಶಾಂತಿನಗರ ಬಸ್ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ ಟರ್ಮಿನಲ್‌ಗಳಿಂದ ಹೊರಡಲಿವೆ. ಹಬ್ಬದ ಮುಗಿದು
ವೃತ್ತಿಪರ ಕೋರ್ಸ್‌ಗಳ ಪ್ರವೇಶ 2 ನೇ ಸುತ್ತಿನ ಸೀಟು ಪ್ರಕಟ: ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಪ್ರಕಟಿಸಿದ್ದು, ಸೀಟು ಹಂಚಿಕೆಯಾದವರು ಸೆ.3ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೂಚನೆ ನೀಡಿದೆ. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಎರಡನೇ ಸುತ್ತಿನ
ಲಕ್ನೋ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ : ಏಳು ಮಂದಿ ಸಾವು
ಲಕ್ನೋದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕಾರ್ಖಾನೆ ಮಾಲೀಕ ಆಲಂ ಸೇರಿ ಏಳು ಮಂದಿ ಮೃತಪಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆತೆರಳಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದ ಆಲಂ, ಅವರ ಪತ್ನಿ ಮತ್ತು
ರಾಜ್ಯದಲ್ಲಿ ಏಳು ದಿನ ಭಾರಿ ಮಳೆ, ಕರಾವಳಿಯಲ್ಲಿ ವ್ಯಾಪಕ ವರ್ಷಧಾರೆ
ರಾಜ್ಯದಲ್ಲಿ ಏಳು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಬೆಂಗಳೂರಿನಲ್ಲಿ ಕೆಲವು ಕಡೆ ಸೆಪ್ಟೆಂಬರ್ 4 ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಕರಾವಳಿ
ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕ ಕಟ್ಟಿದ ಹಿರಿಮೆ ಅರಸು ಸಮುದಾಯದ್ದು: ಡಿಕೆ ಶಿವಕುಮಾರ್
ಮನುಷ್ಯ ಧರ್ಮವನ್ನು ಮೂಲವಾಗಿಟ್ಟುಕೊಂಡು ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಭಾನುವಾರ ನಡೆದ
ಭಾರತ ಮತ್ತು ಚೀನಾ ಅಭಿವೃದ್ಧಿಯ ಪಾಲುದಾರರು: ಪ್ರಧಾನಿ ಮೋದಿ
ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಚೀನಾದೊಂದಿಗಿನ ಸಂಬಂಧಗಳ ಬಲಪಡಿಸುವಿಕೆ ಮತ್ತು ಮುಂದುವರಿಸುವಿಕೆ ಭಾರತದ ಬದ್ಧತೆಯಾಗಿದೆ. ಭಾರತ ಮತ್ತು ಚೀನಾ ಅಭಿವೃದ್ಧಿಯ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ
ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ‘ಚಾಮುಂಡೇಶ್ವರಿ ಚಲೋ’ : ಆರ್.ಅಶೋಕ
ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ‘ಧರ್ಮಸ್ಥಳ ಚಲೋ’ ಮಾದರಿಯಲ್ಲಿ ‘ಚಾಮುಂಡೇಶ್ವರಿ ಚಲೋ’ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಚಾಮುಂಡಿ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ




