Menu

ಕೋರ್ಟ್‌ ಆದೇಶ ಉಲ್ಲಂಘಿಸಿ ಮಠದ ಆಸ್ತಿ ಮಾರಾಟ: ಶಿವಮೂರ್ತಿ ಮುರುಘಾ ಶ್ರೀ ವಿರುದ್ಧ ಆರೋಪ

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎರಡು ಕೋಟಿ ರೂ. ಮೌಲ್ಯದಮುರುಘಾ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಡಾ. ಶಿವಮೂರ್ತಿ ಮುರುಘಾ ಶರಣ ಮಾರಾಟ ಮಾಡಿದ್ದಾ ರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಮಠದ ಆಡಳಿತ ಸಮಿತಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಮಠದ ಹಾಸ್ಟೆಲ್​​ನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಆರೋಪದಡಿ ಒಂದು ಪೋಕ್ಸೋ ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್

ಕಡೂರಿನಲ್ಲಿ ಸಾಕುನಾಯಿ, ಜಾನುವಾರುಗಳ ಹೊತ್ತೊಯ್ಯುತ್ತಿದ್ದ ಚಿರತೆ ಬೋನಿಗೆ

ಜಾನುವಾರು,ಸಾಕು ನಾಯಿಗಳನ್ನು  ಹೊತ್ತೊಯ್ಯುತ್ತಿದ್ದ ಚಿರತೆಯು ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಂಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ, ಮುಸ್ಲಾಪುರ ಭಾಗದಲ್ಲಿ ಚಿರತೆ ಸಂಚರಿಸುತ್ತಿತ್ತು. ಚಿರತೆ ಸಂಚಾರದಿಂದಈ ಭಾಗಗಳ ಜನ ಆತಂಕಗೊಂಡಿದ್ದರು. ಚಿರತೆ ಸೆರೆ‌

ನನ್ನ ದೇಹದ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನೇ ಕೇಳುವೆ: ಟ್ರೋಲರ್ಸ್‌ಗೆ ಸುದೀಪ್‌ ಮಗಳು ಸಾನ್ವಿ ತಿರುಗೇಟು

“ನನ್ನ ದೇಹದ ಬಗ್ಗೆ ಮಾತನಾಡುವುದು ಚರ್ಚೆಯ ವಿಷಯವಲ್ಲ, ಆ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನೇ ಕೇಳುತ್ತೇನೆ ಎಂದು ಕಿಚ್ಚ ಸುದೀಪ್‌ ಪುತ್ರಿ ಸಾನ್ವಿ ತಮ್ಮ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡುವ ಟ್ರೋಲರ್ಸ್‌ಗೆ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ತಿರುಗೇಟು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ

ರಾಜ್ಯದಲ್ಲಿ ಡ್ರಗ್ಸ್‌ ದಂಧೆ ನಿಗ್ರಹಕ್ಕೆ ಕಾಂಗ್ರೆಸ್‌ ಸರ್ಕಾರ ವಿಫಲ: ಆರ್‌ ಅಶೋಕ ಕಿಡಿ

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ನಮ್ಮ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ “ಡ್ರಗ್ಸ್ ದಂಧೆ ಎಲ್ಲ ರಾಜ್ಯಗಳಲ್ಲಿಯೂ ಇದೆ” ಎಂದು ಇದರ

ಚಲಿಸುತ್ತಿದ್ದ ಕಾರಿನಲ್ಲೇ ಸಿಇಒ ಸೇರಿ ಮೂವರಿಂದ ಮಹಿಳಾ ಮ್ಯಾನೇಜರ್ ಮೇಲೆ ಗ್ಯಾಂಗ್‌ ರೇಪ್‌

ಡ್ರಾಪ್‌ ನೆಪದಲ್ಲಿ ಕರೆದು ಚಲಿಸುತ್ತಿದ್ದ ಕಾರಿನಲ್ಲೇ ಕಂಪನಿ ಸಿಇಒ ಸೇರಿದಂತೆ ಮೂವರು ಮಹಿಳಾ ಮ್ಯಾನೇಜರ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಪ್ರಕರಣ ರಾಜಸ್ಥಾನದ ಉದಯ್‌ಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜಿಕೆಎಂ ಕಂಪನಿಯೂ ಮಹಿಳಾ ಸ್ನೇಹಿ ಮಾನದಂಡದ ವಿಚಾರದಲ್ಲಿ 5ರಲ್ಲಿ 4.7 ರೇಟಿಂಗ್

ಮಹಾರಾಷ್ಟ್ರ ANTF ದಾಳಿ: ಬೆಂಗಳೂರಿನಲ್ಲಿ ನಾಲ್ಕು ಡ್ರಗ್ಸ್‌ ಫ್ಯಾಕ್ಟರಿ, 55.88 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಪತ್ತೆ

ಮಹಾರಾಷ್ಟ್ರದ ಡ್ರಗ್ಸ್‌ ನಿಗ್ರಹ ಕಾರ್ಯಪಡೆಯ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಿನ ಹಲವೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿ, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್

ವಿವಾಹಿತನ ಲಿವ್‌ ಇನ್‌ ರಿಲೇಷನ್‌ಶಿಪ್‌: ಯುವತಿಯಿಂದ ಹಣ, ಚಿನ್ನ ಲೂಟಿ, ಆಕೆ ತಂಗಿ ಮೇಲೂ ರೇಪ್‌

ತಾನು ಮದುವೆಯಾಗಿರುವುದನ್ನು ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾತ ಬೆದರಿಸಿ ಆಕೆಯಿಂದ 37 ಲಕ್ಷ ರೂ. ಪಡೆದು ಮನೆಯಿಂದ 559 ಗ್ರಾಂ ಚಿನ್ನಾಭರಣ ಕದ್ದು, ಆಕೆ ತಂಗಿ ಮೇಲೂ ಅತ್ಯಾಚಾರ ಎಸಗುತ್ತಿದ್ದ ಪ್ರಕರಣ ಬೆಂಗಳೂರಿನ ಬಾಗಲಗುಂಟೆ ಪೊಲೀಸ್

ಎಲ್ಲರಿಗೂ ಒಳಿತಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ: ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಡಿಕೆ ಶಿವಕುಮಾರ್

“ಎಲ್ಲರಿಗೂ ಒಳಿತಿಗಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ, ಲೋಕಕಲ್ಯಾಣವಾಗಲಿ. ನಿಮಗೂ (ಮಾಧ್ಯಮ) ಒಳ್ಳೆಯದಾಗಲಿ ಎಂದು‌ ಶ್ರೀನಿವಾಸನಲ್ಲಿ ಬೇಡಿಕೊಂಡಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕವಲುದಾರಿಯಲ್ಲಿ ದೋಸ್ತಿಗಳ ರಾಜಕೀಯ ಮೈತ್ರಿ

ದೇಶದಲ್ಲಿಂದು ಮೈತ್ರಿ ರಾಜಕಾರಣ ಅನಿವಾರ್ಯ. ಆದರೆ ಇದನ್ನು ಯಾವ್ಯಾವ ಸಮಯದಲ್ಲಿ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಮತ್ತು ಮುರಿಯಬೇಕೆಂಬ ತೀರ್ಮಾನಗಳಿಗೆ ದೇವೇಗೌಡ, ನಿತೀಶ್‌ಕುಮಾರ್ ಶರತ್ ಪವಾರ್ ಮತ್ತು ಚಂದ್ರಬಾಬು ನಾಯಡು ಅವರೇ ಸಾಟಿ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಕವಲುದಾರಿಯಲ್ಲಿದೆ ! ಮಾಜಿ

ಬಸವನಗುಡಿ ಅವರೆಬೇಳೆ ಮೇಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ!

ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಬಸವನಗುಡಿ ಅವರೇಬೇಳೆ ಮೇಳದ 26ನೇ ಆವೃತ್ತಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಅವರೇಬೇಳೆ ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, “ಹಣ್ಣುಗಳ ರಾಜ ಮಾವು ಹೇಗೋ ಅದೇ ರೀತಿ ಕಾಳುಗಳ ರಾಜ ಅವರೆಕಾಳು. ವಿಶೇಷವಾಗಿ