Menu

ಪ್ರಧಾನಿ ಮೋದಿಗೆ ಉಡುಪಿ ಮಠದಿಂದ ‘ಭಾರತ ಭಾಗ್ಯವಿಧಾತ’ ಬಿರುದು ನೀಡಿ ಸನ್ಮಾನ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಾರತ ಭಾಗ್ಯವಿಧಾತ’ ಬಿರುದು ನೀಡಿ ಉಡುಪಿ ಶ್ರೀ ಕೃಷ್ಣಮಠದಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿಗೆ ಬೆಳ್ಳಿಯ ಕಡೆಗೋಲು ನೀಡಿ ಗೌರವಿಸಲಾಯಿತು. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶುಕ್ರವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀ ಕೃಷ್ಣನ ದರ್ಶನ ಪಡೆದು, ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದರು. ಬಳಿಕ ಅವರು ಲಕ್ಷ

ಡಿಸೆಂಬರ್ 4-5ರಂದು ಭಾರತಕ್ಕೆ ಭೇಟಿ ನೀಡಲಿರುವ ರಷ್ಯಾ ಅಧ್ಯಕ್ಷ ಪುಟಿನ್

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿಸೆಂಬರ್ 4 ಮತ್ತು5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ- ರಷ್ಯಾ 23ನೇ ದ್ವಿಪಕ್ಷೀಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಎರಡು ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ

ಕಾಸಾಗ್ರಾಂಡ್ ಪ್ರಾಫಿಟ್‌ ಶೇರ್‌: ಉದ್ಯೋಗಿಗಳಿಗೆ ಒಂದು ವಾರ ಲಂಡನ್‌ ಪ್ರವಾಸ

ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಕಂಪನಿ ಕಾಸಾಗ್ರಾಂಡ್‌ ತನ್ನ ಉದ್ಯೋಗಿಗಳಿಗೆ ನೀಡುವ ವಾರ್ಷಿಕ ಪ್ರಾಫಿಟ್‌ ಶೇರ್‌ ಬೋನಾಂಜಾ ಸ್ಕೀಮ್‌ನಡಿ 1,000 ಉದ್ಯೋಗಿಗಳನ್ನು ಲಂಡನ್‌ಗೆ ಒಂದು ವಾರದ ಪ್ರವಾಸಕ್ಕೆ ಕಳಿಸುತ್ತಿರುವುದಾಗಿ ಪ್ರಕಟಿಸಿದೆ. ಹಲವು ಸಂಸ್ಥೆಗಳು , ಕಂಪೆನಿಗಳು ನಾನಾ ರೂಪಗಳಲ್ಲಿ ವಾರ್ಷಿಕ ಬೋನಸ್‌

10,000 ಕ್ಯಾಲೊರಿ ಜಂಕ್ ಫುಡ್ ತಿಂದ ಫಿಟ್ನೇಸ್ ಕೋಚ್ ಸಾವು

ರಷ್ಯಾದ ಫಿಟ್ನೆಸ್ ಕೋಚ್ ಹಾಗೂ ಇನ್ ಫ್ಲ್ಯೂಯೆನ್ಸರ್ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಜಂಕ್ ಫುಡ್ ತಿನ್ನುವ ಸ್ಪರ್ಧೆ ನಂತರ ರಾತ್ರಿ ಮಲಗಿದ್ದಾಗ ಚಿರನಿದ್ರೆಗೆ ಜಾರಿದ್ದಾರೆ. 30 ವರ್ಷದ ರಷ್ಯಾದ ಫಿಟ್ನೆಸ್ ಕೋಚ್ ಡಿಮಿಟ್ರಿ ನ್ಯೂಯಾಜಿನ್ ರಷ್ಯಾದ ಓರೆನ್ ಬರ್ಗ್ ನಗರದಲ್ಲಿ ಜಂಕ್

ಶ್ರೀಲಂಕಾದಲ್ಲಿ ಭೀಕರ ಮಳೆ, ಭೂಕುಸಿತಕ್ಕೆ 56 ಮಂದಿ ಬಲಿ

ಶ್ರೀಲಂಕಾದಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಪ್ರವಾಹ, ಅಲ್ಲಲ್ಲಿ ಭೂಕುಸಿತಗಳುಂಟಾಗಿ 56 ಮಂದಿ ಮೃತಪಟ್ಟಿದ್ದಾರೆ. ಜನಜೀವನ ದುಸ್ತರವಾಗಿ ಪರಿಣಮಿಸಿದೆ. ನಿರಂತರ ಮಳೆಯಿಂದಾಗಿ ಎಲ್ಲೆಡೆ ನೀರು ಆವರಿಸಿದ್ದು, 600ಕ್ಕೂ ಹೆಚ್ಚು ಮನೆಗಳು ತೀವ್ರ ಹಾನಿಗೊಂಡಿವೆ. ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್‌ ಆಗುತ್ತಾ?

ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಕೆ ಮಾಡಿದೆ. ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸಮಿತಿ ರಚಿಸಲಾಗಿತ್ತು. ಸಮಿತಿಯಿಂದ ಬೈಕ್

ಹಿರಿಯೂರಿನಲ್ಲಿ ರಸ್ತೆ ಅಪಘಾತ: ಇಬ್ಬರ ಸಾವು

ಚಿತ್ರದುರ್ಗದ ಹಿರಿಯೂರು ತಾಲೂಕಿನ ಇಂಡಸ್‌ ಕಟ್ಟೆಯಲ್ಲಿ ಕಬ್ಬಿಣ ತುಂಬಿದ ಲಾರಿಗೆ ಹಿಂಬದಿಯಿಂದ ಕೋಳಿ ತುಂಬಿದ ಬುಲೆರೊ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಮಕೂರಿನ ತಿಪಟೂರು ನಿವಾಸಿಗಳಾದ ಚಂದನ್ ಗೌಡ( 22), ಕುಮಾರ್ (17) ಮೃತಪಟ್ಟವರು. ಬುಲೆರೊ ಚಾಲಕನ ಅತಿ ವೇಗ

ಬೆಂಗಳೂರಿನಲ್ಲಿ ಲಾಕಪ್ ಡೆತ್: ಹೊಡೆದು ಮದ್ಯ ರಿಹ್ಯಾಬ್ ಸೆಂಟರ್‌ಗೆ ಸೇರಿಸಿದ್ದರಾ ಪೊಲೀಸರು?

ಬೆಂಗಳೂರಿನ ವಿವೇಕ ನಗರ ಪೊಲೀಸ್‌ ಕಸ್ಟಡಿಯಲ್ಲಿ ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಮದ್ಯ ರಿಹ್ಯಾಬ್ ಸೆಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಸಿಂಗಮಲೆ ಮೃತಪಟ್ಟವರು. ಕಸ್ಟಡಿಯಲ್ಲಿರುವಾಗ ಪೊಲೀಸರು ಸಂಗಮಲೆಗೆ ಹೊಡೆದಿದ್ದು, ಬಳಿಕ ಮಾದಕನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯ ರಿಹ್ಯಾಬ್ ಸೆಂಟರ್‌ಗೆ ದಾಖಲಿಸಿದ್ದರು. ಅಲ್ಲಿಗೆ

ಕೋಲಾರದಲ್ಲಿ ಶಿಕ್ಷಕಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂ. ವಂಚಿಸಿದ ದಂಪತಿ ಆರೆಸ್ಟ್‌

ಕೋಲಾರದ ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂಪಾಯಿ ವಂಚನೆ ಮಾಡಿರುವ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ‌ ನಡೆಸಿ ವಂಚಕ ದಂಪತಿಯನ್ನು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಧ/ಪಾವನ ಹಾಗೂ ಸತೀಶ್

ಕಗ್ಗಲಿಪುರದಲ್ಲಿ ಬಾಲಕಿಯ ಕೊಲೆ

ಬೆಂಗಳೂರು ದಕ್ಷಿಣ ತಾಲೂಕಿನ ಬೋಳಾರೆ ಗ್ರಾಮದ ಬಳಿ 15 ವರ್ಷದ ಬಾಲಕಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಮನೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಕವನಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಕವನ ಸಂಜೆಯಾದರೂ ಮನೆಗೆ ವಾಪಸ್