ಪೋಕ್ಸೋ ಎರಡನೇ ಪ್ರಕರಣದಲ್ಲೂ ಮುರುಘಾ ಮಠದ ಮಾಜಿ ಪೀಠಾಧಿಪತಿ ಶಿವಮೂರ್ತಿ ಖುಲಾಸೆಗೊಂಡಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿ ವಿರುದ್ಧ ಪೊಲೀಸರು A&B ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ಎರಡನೇ ಸಂತ್ರಸ್ತೆಯ ಚಾರ್ಜಶೀಟ್‌ನಲ್ಲಿ ಅತ್ಯಾಚಾರ ನಡೆದಿದೆ ಎಂದು ಉಲ್ಲೇಖಗೊಂಡಿರುವ ದಿನಾಂಕದಂದು ಮಠದ ಮಾಜಿ ಪೀಠಾಧಿಪತಿ ಶಿವಮೂರ್ತಿ ದೇಶದಲ್ಲೇ ಇರಲಿಲ್ಲ. 24-7-2022 ರಂದು ಅತ್ಯಾಚಾರ ನಡೆದಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಿದೆ.
ಮಾಜಿ ಪೀಠಾಧಿಪತಿ ಶಿವಮೂರ್ತಿ ಪರ ವಕೀಲರು ಸಂತ್ರಸ್ತೆಯ ಸಾಕ್ಷಿಯ ಕ್ರಾಸ್ ಎಕ್ಸಾಮಿನ್ ಮಾಡಿ ಅತ್ಯಾಚಾರ ನಡೆದಿದೆ ಎಂದ ದಿನ ಅವರು ವಿದೇಶ ಪ್ರವಾಸದಲ್ಲಿದ್ದರು ಎಂದು ಕೋರ್ಟ್ ಗಮನಕ್ಕೆ ತಂದಿದರು.
ಸಂತ್ರಸ್ತೆಯ ವ್ಯತಿರಿಕ್ತ ಹೇಳಿಕೆ, ಸಂಶಯಾಸ್ಪದ ಸಾಕ್ಷಿಗಳ ಹಿನ್ನೆಲೆ ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸುವುದಾಗಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶ ಜಿಸಿ ಹಡಪದ ಖುಲಾಸೆಗೊಳಿಸಿ ತೀರ್ಪು ನೀಡಿದರು.
ಶಿವಮೂರ್ತಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಬಾಲಕಿಯರು 2022ರ ಆಗಸ್ಟ್‌ನಲ್ಲಿ ಆರೋಪಿಸಿದ್ದರು. 2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾ ಗಿತ್ತು. ಆಗಸ್ಟ್ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು.
2022ರ ಅ.13 ರಂದು ಮಠದ ಅಡುಗೆ ಸಹಾಯಕಿ ಮತ್ತೊಂದು ದೂರು ನೀಡಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದರು. 2023ರ ಜ.10ರಂದು 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.


