ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಿಬ್ಬಂದಿ ಕ್ವಾರ್ಟರ್ಸ್ ಒಳಗೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಬಿಡದಿ ಮೂಲದ ಬಿ ಮಂಜುನಾಥ್ (40) ಆತ್ಮಹತ್ಯೆ ಮಾಡಿಕೊಂಡವರು. ಮಂಜುನಾಥ್ ಅವಿವಾಹಿತರಾಗಿದ್ದು, ಗುತ್ತಿಗೆ ಆಧಾರದ ಹೆಚ್‌ಎಎಲ್‌ನಲ್ಲಿ ಮೇಲೆ ಕೆಲಸ ಮಾಡುತ್ತಿದ್ದರು. ಅವರು ವಾಸವಿದ್ದ ಎಫ್‌ಎ 244 ಕ್ವಾರ್ಟರ್ಸ್‌ನಲ್ಲಿ ಾತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್‌ನೋಟ್ ಬರೆದಿಟ್ಟಿರುವ ಅವರು, ಕುಟುಂಬ ಸದಸ್ಯರಲ್ಲಿ ಕ್ಷಮೆ ಯಾಚಿಸಿದ್ದಾರೆ.
ಸಾವಿನ ಹಿಂದಿನ ನಿಖರವಾದ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲಸದ ವಿಚಾರಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಎಂಬುದರ ಕುರಿತುತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಿಬ್ಬರ ಜತೆ ತಾಯಿ ಕಾಣೆ
ಹೆಚ್ಎಎಲ್ ಬಳಿಯ ಅಣ್ಣಸಂದ್ರದಲ್ಲಿ ಹದಿನೈದು ದಿನದ ಮತ್ತು ಐದು ವರ್ಷದ ಮಕ್ಕಳೊಂದಿಗೆ ತಾಯಿ ಕಾಣೆಯಾಗಿದ್ದು, ಮೂರು ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಷ್ಟೇ ಹುಡುಕಿದರೂ ತಾಯಿ ಮಗು ಪತ್ತೆಯಾಗಿಲ್ಲ.
ನವೆಂಬರ್ 24ರ ಬೆಳಗ್ಗೆ 9.30ಕ್ಕೆ ಮಗುವನ್ನು ಶಾಲೆಗೆ ಬಿಟ್ಟು ಬರುವುದಾಗಿ ಹೇಳಿದ್ದ ತಾಯಿ ರಂಜಿತಾಮಕ್ಕಳೊಂದಿಗೆ ಕಾಣೆಯಾಗಿದ್ದಾರೆ. ಹೆರಿಗೆಗೆಂದು ಬಂದಿದ್ದ ರಂಜಿತಾ ತಾಯಿ ಮಣ್ಣಿಯಮ್ಮ ಮನೆಯಲ್ಲಿದ್ದರು. ರಂಜಿತಾ ಪತಿ ಮೋಹನ್ ನೀಡಿರುವ ದೂರಿನ ಅನ್ವಯ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


