Menu

ಲಿವರ್‌ ದಾನ ಮಾಡಿ ಅಮ್ಮನ ಉಳಿಸಿಕೊಂಡ ಮಗ ಚೇತರಿಸಿಕೊಳ್ಳದೆ ಸಾವು

ತಾಯಿಯ ಜೀವ ಉಳಿಸುವುದಕ್ಕೆಂದು ಮಗ ಆಕೆಗೆ ಲಿವರ್‌ ದಾನ ಮಾಡಿದ ಬಳಿಕ ಮೃತಟ್ಟಿರುವ ಹೃದಯವಿದ್ರಾವಕ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದ್ದು, ಭಾರೀ ವೈರಲ್‌ ಆಗಿದೆ. ಅಮ್ಮನಿಗಾಗಿ ಲಿವರ್‌ ದಾನಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಚೇತರಿಸಿಕೊಳ್ಳದೆ ಪ್ರಾಣ ಹೋಗಿದೆ.

ಮಗನ ಸಾವಿನ ಆಘಾತವನ್ನು ಸಹಿಸಲಾಗದೆ ತಾಯಿ ಒದ್ದಾಡುತ್ತಿದ್ದಾರೆ. ಇದರಿಂದ ಮಗನ ಜೀವ ಹೋಗಬಹುದು ಎಂಬ ಸಣ್ಣ ಶಂಕೆ ಬಂದಿದ್ದರೂ ತಾನು ಈ ಆಪರೇಷನ್‌ಗೆ ಒಪ್ಪಿಕೊಳ್ಳುತ್ತಿರಲಿಲ್ಲವೆಂದು ತಾಯಿ ಸಂಕಟಪಡುತ್ತಿದ್ದಾರೆ.

ಪಾಕಿಸ್ತಾನದ ಸರ್ಗೋಧಾ ನಿವಾಸಿಯಾದ ಉಮರ್ ಫಾರೂಕ್ ಬಜ್ವಾ ಅವರ ತಾಯಿಗೆ ಲಿವರ್‌ನಲ್ಲಿ ಸಮಸ್ಯೆಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ಯಕೃತ್‌ನ ಒಂದು ಭಾಗವನ್ನು ತಾಯಿಗೆ ದಾನ ನೀಡಲು ಪುತ್ರ ಉಮರ್ ಫಾರೂಕ್ ನಿರ್ಧರಿಸಿದ್ದರು. ಇವರು ನೀಡಿದ ಯಕೃತ್ತಿನಿಂದ ತಾಯಿ ಚೇತರಿಸಿಕೊಂಡರು. ಮಗ ಮಾತ್ರ ಆಸ್ಪತ್ರೆಯಿಂದ ವಾಪಸ್ ಬರಲಿಲ್ಲ, ಯಕೃತ್‌ನ ದಾನದ ನಂತರ ಉಂಟಾದ ಸೋಂಕಿನಿಂದಾಗಿ ಉಮರ್ ಫಾರೂಕ್ ಆಸ್ಪತ್ರೆಯಲ್ಲೇ ಅಸು ನೀಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಯುವಕನ ತ್ಯಾಗದ ಬಗ್ಗೆ ಸಾಕಷ್ಟು ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ಬಹಳಷ್ಟು ಮಂದಿ ವಿಷಯ ತಿಳಿದು ಆಘಾತಗೊಂಡಿದ್ದಾರೆ. ತಾಯಿಗೆ ದೇವರು ಈ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.

ಜೀವಂತವಾಗಿರುವಾಗಲೇ ಯಕೃತ್‌ ದಾನ ಪ್ರಕ್ರಿಯೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ದಾನಿಯ ಜೀವ ಹೋಗುವ ಅಪಾಯವಿದೆ. 2024ರಲ್ಲಿ ಮಂಗಳೂರಿನಲ್ಲಿ ಪತಿಯ ಸಂಬಂಧಿಯೊಬ್ಬರಿಗೆ ಲಿವರ್ ದಾನ ನೀಡಿದ ಯುವ ಉಪನ್ಯಾಸಕಿ ಅರ್ಚನಾ ಕಾಮತ್ ಮೃತಪಟ್ಟಿದ್ದರು.

ಅರ್ಚನಾ ಅವರ ಪತಿಯ ಸಂಬಂಧಿ ಮಹಿಳೆಗೆ ಲಿವರ್‌ನ ಅಗತ್ಯವಿತ್ತು. ಲಿವರ್ ದಾನ ಮಾಡಲೆಂದು ಹಲವರನ್ನು ತಪಾಸಣೆಗೆ ಒಳಪಡಿಸಿದಾಗ ಯಾರೊಬ್ಬರ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಉಪನ್ಯಾಸಕಿ ಅರ್ಚನಾರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಅರ್ಚನಾ ಲಿವರ್ ಭಾಗದ ದಾನಕ್ಕೆ ಒಪ್ಪಿದ್ದರು. ಆದರೆ ಆಕೆ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳದೆ ಮೃತಪಟ್ಟಿದ್ದರು.

 

Related Posts

Leave a Reply

Your email address will not be published. Required fields are marked *