Tuesday, December 02, 2025
Menu

ಲೆಜೆಂಡ್ಸ್ ಪ್ರೋ T20 ಲೀಗ್: ಆಟಗಾರರ ಪಟ್ಟಿ ಪ್ರಕಟ

dinesh kartik

ಗೋವಾ: ಲೆಜೆಂಡ್ಸ್ ಪ್ರೋ T20 ಲೀಗ್ ತನ್ನ ಮುಂದಿನ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಬಾರಿ ಲೀಗ್‌ಗೆ ದಿನೇಶ್ ಕಾರ್ತಿಕ್, ಶಾನ್ ಮಾರ್ಶ್, ಅಮಿತ್ ಮಿಶ್ರಾ, ವಿನಯ್ ಕುಮಾರ್ ಮತ್ತು ಇಂಗ್ಲೆಂಡ್‌ನ ಪ್ರಸಿದ್ಧ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್ ಸೇರಿಕೊಂಡಿದ್ದು, ಗೋವಾದಲ್ಲಿ ನಡೆಯಲಿರುವ ಈ ಲೀಗ್‌ನಲ್ಲಿ ಅವರು ಭಾಗವಹಿಸಲಿದ್ದಾರೆ.

ಭಾರತದ ಪ್ರಸಿದ್ಧ ಫಿನಿಷರ್‌ಗಳಲ್ಲೊಬ್ಬರಾದ ದಿನೇಶ್ ಕಾರ್ತಿಕ್ 2018ರ ನಿಧಾಹಾಸ್ ಟ್ರೋಫಿ ಫೈನಲ್‌ನಲ್ಲಿ ಆಡಿದ ನೆನಪಿನ ಪ್ರದರ್ಶನಕ್ಕಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. 2024ರಲ್ಲಿ ತಮ್ಮ T20 ವೃತ್ತಿಜೀವನವನ್ನು ಮುಗಿಸಿದ ಅವರು ಮತ್ತೆ ಮೈದಾನಕ್ಕೆ ಮರಳುತ್ತಿರುವುದು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ.

ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ ಹೇಳಿದರು: “ಭಾರತವನ್ನು ಪ್ರತಿನಿಧಿಸಿರುವ ವರ್ಷಗಳು ನನಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಕೊಟ್ಟಿವೆ. ಮತ್ತೆ ಆಡುವ ಅವಕಾಶ ಸಿಕ್ಕಿರುವುದು ನನಗೆ ತುಂಬಾ ವಿಶೇಷ. ಲೆಜೆಂಡ್ಸ್ ಪ್ರೋ T20 ಲೀಗ್ ನಮ್ಮಂತಹ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತಿದೆ. ಗೋವಾದಂತಹ ಅದ್ಭುತ ಸ್ಥಳದಲ್ಲಿ ಮತ್ತೆ ಅಭಿಮಾನಿಗಳ ಎದುರು ಆಡುವುದಕ್ಕಾಗಿ ನಾನು ತುಂಬಾ ಉತ್ಸುಕರಾಗಿದ್ದೇನೆ ಎಂದಿದ್ದಾರೆ.

ಭಾರತದ ಪ್ರೀಮಿಯರ್ T20 ಲೀಗ್‌ನ ಮೊದಲ ‘ಆರೇಂಜ್ ಕ್ಯಾಪ್’ ವಿಜೇತರಾಗಿರುವ ಶಾನ್ ಮಾರ್ಶ್ ಹಲವು ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಮರಳಲಿದ್ದಾರೆ. ಮಾರ್ಶ್ ಮಾತನಾಡಿ “ಬಹಳ ವರ್ಷಗಳ ನಂತರ ಭಾರತಕ್ಕೆ ಮರಳುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಲೆಜೆಂಡ್ಸ್ ಪ್ರೋ T20 ಲೀಗ್ ಮತ್ತೆ ಇಲ್ಲಿ ಆಡಲು ಅವಕಾಶ ನೀಡಿರುವುದು ವಿಶೇಷ’ ಎಂದಿದ್ದಾರೆ.

ಭಾರತದ ಅತ್ಯುತ್ತಮ ಲೆಗ್-ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಅಮಿತ್ ಮಿಶ್ರಾ, ಭಾರತದ ಪ್ರಮುಖ T20 ಟೂರ್ನಿಯಲ್ಲಿ ಮೂರು ವಿಭಿನ್ನ ತಂಡಗಳ ಪರವಾಗಿ ಮೂರು ಹ್ಯಾಟ್-ಟ್ರಿಕ್‌ಗಳನ್ನು ಪಡೆದ ಏಕೈಕ ಬೌಲರ್. ಈ ಬಗ್ಗೆ ಮಾತನಾಡಿದ ಅವರು “25 ವರ್ಷಗಳ ವೃತ್ತಿಜೀವನದ ನಂತರ ಇದು ನನ್ನ ಕ್ರಿಕೆಟ್‌ನ ಎರಡನೇ ಇನ್ನಿಂಗ್ಸ್ ಎಂಬ ಭಾವನೆ ಇದೆ. ದಿಗ್ಗಜರ ಜೊತೆ ಮತ್ತೆ ಸ್ಪರ್ಧಿಸುವ ಅವಕಾಶ ದೊರೆತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದಾರೆ.

ವಿನಯ್ ಕುಮಾರ್ ಕೂಡ ಈ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದು“ಲೆಜೆಂಡ್ಸ್ ಪ್ರೋ T20 ಲೀಗ್‌ನ ಭಾಗವಾಗಿರುವುದು ನನಗೆ ನಿಜವಾದ ಸಂತೋಷ” ಎಂದಿದ್ದಾರೆ.

ಇಂಗ್ಲೆಂಡ್‌ನ ಅತ್ಯಂತ ಪ್ರೀತಿಸಲ್ಪಡುವ ಎಡಗೈ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಮಾಂಟಿ ಪನೇಸರ್ ಕೂಡ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, “ಭಾರತದಲ್ಲಿ ಆಡುವುದು ಯಾವಾಗಲೂ ಅದ್ಭುತ ಅನುಭವ. ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಮತ್ತೆ ಮೈದಾನಕ್ಕಿಳಿಯಲು ನಾನು ಕಾತರರಾಗಿದ್ದೇನೆ ಎಂದಿದ್ದಾರೆ.

ಲೆಜೆಂಡ್ಸ್ ಪ್ರೋ T20 ಲೀಗ್‌ನ ಮೊದಲ ಆವೃತ್ತಿ 2026ರ ಜನವರಿ 26ರಿಂದ ಫೆಬ್ರವರಿ 4ರವರೆಗೆ ಗೋವಾದ ಹೊಸ 1919 ಸ್ಪೋರ್ಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆರವೇರುವಂತೆ ಯೋಜಿಸಲಾಗಿದೆ.

Related Posts

Leave a Reply

Your email address will not be published. Required fields are marked *