ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ವತಿಯಿಂದ ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್ -2026 ಟೂರ್ನಿಯನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೈಪರ್ ಸ್ಪೋರ್ಟ್ಸ್ ಅಂಡ್ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥ ಕಿರಣ್ ಶೆಟ್ಟಿ, ಇದು ಅಂತರ್ ಮಾಧ್ಯಮ ಟೂರ್ನಿ ಯಾಗಿದೆ. ಈ ಟೂರ್ನಿ ಮೂಲಕ ಗರ್ಭಾಶಯ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ತಡೆಗಟ್ಟುವುದರ ಬಗ್ಗೆ ಸಮಾಜ ಮುಖಿ ಸಂದೇಶವನ್ನು ನೀಡಲಾಗುವುದು ಎಂದರು.
ಅಂತರ್ ಮಾಧ್ಯಮ ಟೂರ್ನಿಯನ್ನು 2026ರ ಜನವರಿ ಅಥವಾ ಫೆಬ್ರವರಿ ಯಲ್ಲಿ ನಡೆಸಲಾಗುವುದು. ತಂಡಗಳ ನೋಂದಣಿ, ವೇಳಾಪಟ್ಟಿ, ಮೈದಾನಗಳ ವಿವರವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಚಾಂಪಿಯನ್ ತಂಡಕ್ಕೆ 10 ಲಕ್ಷ ರೂಪಾಯಿ ನಗದು ಬಹುಮಾನ. ರನ್ನರ್ ಅಪ್ ತಂಡಕ್ಕೆ 5ಲಕ್ಷ ರೂಪಾಯಿ, ಸೆಮಿಫೈನಲ್ ಪ್ರವೇಶಿಸಿದ ತಂಡಗಳಿಗೆ ತಲಾ 2.5ಲಕ್ಷ ರೂಪಾಯಿ ನೀಡಲಾಗುವುದು. ಈ ಟೂರ್ನಿಯಲ್ಲಿ ಆಡುವ ಮಾಧ್ಯಮ ತಂಡಗಳಿಗೆ ಪ್ರವೇಶ ಉಚಿತ ಎಂದು ಆಯೋಜಕರಾದ ಕಿರಣ್ ಶೆಟ್ಟಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಡಾ. ಶಿವಕುಮಾರ್ ಉಪ್ಪಳ ಅವರು ಮಾತನಾಡಿ, ಭಾರತದಲ್ಲಿ ಮಹಿಳೆಯರನ್ನು ಗರ್ಭಾಶಯ ಕ್ಯಾನ್ಸರ್ ಗಂಭೀರವಾಗಿ ಕಾಡುತ್ತಿದೆ. ಇದನ್ನು ತಡೆಗಟ್ಟಲು ಮುಂಚಿವಾಗಿಯೇ ತಪಾಸಣೆ ಮಾಡಿಸುವುದು ಹಾಗೂ HPV ಲಸಿಕೆ ಹಾಕಿಸುವ ಮೂಲಕ ಸಾಧ್ಯವಾಗುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.


