ಜಿಲ್ಲಾ ಸುದ್ದಿ
ಬ್ಯಾನರ್ ಗಲಾಟೆಯಲ್ಲಿ ಸಸ್ಪೆಂಡ್ ಆದ ಬಳ್ಳಾರಿ ಎಸ್ಪಿ ನೆಜ್ಜೂರ್ ಸುಸೈಡ್‌ಗೆ ಯತ್ನಿಸಿದ್ರಾ?
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ಸಂಬಂಧ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ನಡೆದ ಗಲಾಟೆ, ಹಿಂಸಾಚಾರದ ಬಳಿಕ ಅಮಾನತುಗೊಂಡಿದ್ದ ಎಸ್‌ಪಿ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಾನತು ಆದೇಶದಿಂದ ಆದೇಶದಿಂದ ಮನನೊಂದು ಅವರು ಈ ಕೃತ್ಯಕ್ಕೆ ಮುಂದಾಗಿರಬಹುದು
ಮೂಡಿಗೆರೆ ವಲಸೆ ಕಾರ್ಮಿಕರ ಗುರುತು ಚೀಟಿ ಪರಿಶೀಲನೆ: ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರೆಂದು ಹೇಳಿಕೊಂಡು ಬಾಂಗ್ಲಾದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಪೊಲೀಸ್
ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಫೈರಿಂಗ್: ಸತೀಶ್ ರೆಡ್ಡಿ ಗನ್‌ಮ್ಯಾನ್‌ಗಳು ನಾಪತ್ತೆ
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ನಿವಾಸದ ಎದುರು ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಫೈರಿಂಗ್‌ಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎಂಬವರು ಬಲಿಯಾದ ಬಳಿಕ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯ ಖಾಸಗಿ
ಆನ್‌ಲೈನ್‌ನಲ್ಲಿ ಪಾರ್ಟ್ ಟೈಂ ಕೆಲಸ ಹುಡುಕಾಡಿ 12 ಲಕ್ಷ ರೂ.ಕಳಕೊಂಡ ಚಿಕ್ಕಬಳ್ಳಾಪುರ ನರ್ಸ್
ಅಂತರ್ಜಾಲದಲ್ಲಿ ಪಾರ್ಟ್ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಚಿಕ್ಕಬಳ್ಳಾಪುರದ ನರ್ಸ್‌ವೊಬ್ಬರು ಆನ್ಲೈನ್ ವಂಚನೆಗೆ ಒಳಗಾಗಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸ ಹೋಗಿದ್ದು ತಿಳಿದುಕೊಂಡ ಬಳಿಕ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ
ನಾಳೆಯಿಂದ ಎಡದಂಡೆ, 8ರಿಂದ ಬಲದಂಡೆ ನಾಲೆಗೆ ಭದ್ರಾ ನೀರು: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ : ಭದ್ರಾ ಜಲಾಶಯದಲ್ಲಿನ ನೀರನ್ನು ಜನವರಿ 03ರಿಂದ ಎಡದಂಡೆ ನಾಲೆಗೆ ಹಾಗೂ ಜನವರಿ 08ರಿಂದ ಬಲದಂಡೆ ನಾಲೆಗೆ ನಿರಂತರವಾಗಿ 120ದಿನಗಳ ಕಾಲ ನೀರನ್ನು ಹರಿಸಲು ಭದ್ರಾ ಜಲಾಶಯದ 88ನೇ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ನಿವೃತ್ತ ಶಿಕ್ಷಕನಿಗೆ ಡಿಜಿಟಲ್ ಅರೆಸ್ಟ್: 1.61 ಕೋಟಿ ದೋಚಿದ ಖದೀಮ
ಕಾರವಾರ: ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಸೋಗಿನಲ್ಲಿ ವಿಡಿಯೋ ಕಾಲ್ ಮೂಲಕ ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರನ್ನು ‘ಡಿಜಿಟಲ್ ಅರೆಸ್ಟ್ ಮಾಡಿರುವ ಸೈಬರ್ ವಂಚಕರು 1.61 ಕೋಟಿ ರೂ ವಂಚಿಸಿರುವ ಘಟನೆ ನಡೆದಿದೆ. ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ಪಾಲ್ಡೆನ್ (72)ಅವರಿಗೆ ವಾಟ್ಸ್
ಬಳ್ಳಾರಿ ಘಟನೆಯಲ್ಲಿ ನಮ್ಮ ತಪ್ಪಿಲ್ಲ, ಯಾವುದೇ ತನಿಖೆಗೆ ಸಿದ್ಧ: ಜಂಟಿ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ- ಶ್ರೀರಾಮುಲು ಆಗ್ರಹ
ಬಳ್ಳಾರಿಯಲ್ಲಿ ನಿನ್ನೆ ನಡೆದ ಬ್ಯಾನರ್ ಕಟ್ಟುವ ವಿಷಯದಲ್ಲಿ ಗಲಾಟೆ ವಿಷಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವಿನ ವಿಷಯದಲ್ಲಿ ಯಾವುದೇ ರೀತಿಯ ತನಿಖೆಗೆ ನಾವು ಸಿದ್ಧ. ಆದರೆ ಈ ರೀತಿಯ ಗೂಂಡಾಗಿರಿಗೆ ನಾವು ಬಗ್ಗುವುದಿಲ್ಲ ಎಂದು ಬಿಜೆಪಿಯ ಮಾಜಿ ಶಾಸಕ ಶ್ರೀರಾಮುಲು ಹಾಗೂ ಶಾಸಕ
ಬಳ್ಳಾರಿ ಗಲಾಟೆಯಲ್ಲಿ ಕಾಂಗ್ರೆಸ್‌ನವರ ಗುಂಡಿಗೆ ವ್ಯಕ್ತಿ ಬಲಿಯಾಗಿದ್ದರೆ ಸಿದ್ದರಾಮಯ್ಯ ರಿಸೈನ್ ಮಾಡ್ತಾರ: ಆರ್ ಅಶೋಕ ಸವಾಲು
ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಯಲ್ಲಿ ಗುಂಡೇಟು ತಗುಲಿ ವ್ಯಕ್ತಿ ಮೃತಪಟ್ಟಿದ್ದರೂ ಆರೋಪಿಯನ್ನು ಸರ್ಕಾರ ಬಂಧಿಸಿಲ್ಲ, ಶಾಸಕ ಜನಾರ್ಧನ ರೆಡ್ಡಿಯನ್ನು ಟಾರ್ಗೆಟ್ ಮಾಡಿ ಗುಂಡು ಹಾರಿಸಲಾಗಿದೆ, ಯಾರು ಗುಂಡು ಹಾರಿಸಿರುವುದು ಎಂಬುದು ಸಾಬೀತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ
ಬಳ್ಳಾರಿ ಬ್ಯಾನರ್ ಗಲಾಟೆ: ಯಾರ ಗನ್‌ನಿಂದ ಬುಲೆಟ್ ಹಾರಿದ್ದೆಂದು ಪತ್ತೆ ಹಚ್ಚಲು ಸಿಎಂ ಸೂಚನೆ
ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂಧ ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮನೆ ಎದುರು ಬ್ಯಾನರ್ ಕಟ್ಟುವ ವಿಚಾರಕ್ಕೆ ಗುಂಪುಗಳ ನಡುವೆ ನಡೆದ ಗಲಾಟೆ ವೇಳೆ ಮೃತಪಟ್ಟ ರಾಜಶೇಖರ್ ರೆಡ್ಡಿಗೆ ಯಾರ ಗನ್‌ನಿಂದ ಬುಲೆಟ್ ಹಾರಿದೆ ಎಂಬುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ
ಗೋವಾ ನ್ಯೂ ಇಯರ್ ಪಾರ್ಟಿ: ಹಾಸನದ ಯುವಕ ಹೃದಯಾಘಾತಕ್ಕೆ ಬಲಿ
ನ್ಯೂ ಇಯರ್ ಪಾರ್ಟಿಗೆಂದು ಗೋವಾಗೆ ಹೋಗಿದ್ದ ಆಲೂರು ತಾಲೂಕಿನ ಹೊಸಳ್ಳಿ ಗ್ರಾಮದ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ರಕ್ಷಿತ್ (26) ಗೋವಾದಲ್ಲಿ ಮೃತಪಟ್ಟ ಯುವಕ. ಸಂಬಂಧಿಕರು ಹಾಗೂ ಸಹೋದರರಾದ ಚಿದಂಬರಂ, ಪ್ರವೀಣ್ ಜೊತೆ ಡಿ.31 ರಂದು ರಕ್ಷಿತ್ ಗೋವಾಗೆ ಹೋಗಿದ್ದ. 31 ರಂದು




