ಜಿಲ್ಲಾ ಸುದ್ದಿ
ಪ್ರಿಯಾಂಕ್ ಖರ್ಗೆ ಡಿಸಿಎಂ ಆಗಲಿದ್ದಾರೆ: ಶ್ರೀ ರಾಮುಲು
ಪ್ರಿಯಾಂಕ್ ಖರ್ಗೆ ರಾಜ್ಯದ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಆಗುವ ಬಗ್ಗೆ ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಪ್ಲ್ಯಾನ್ ನಡೆದಿದೆ ಎಂದರು. ಒಂದು ವೇಳೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಬಲ ಬಂದಂತಾಗುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ವಿನಾಕಾರಣ ಆರ್‌ಎಸ್‌ಎಸ್ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದೆ.
ಮೈಸೂರು ರೈಲು ನಿಲ್ದಾಣದಲ್ಲಿ ಮಗು ಅಪಹರಣ: ರಕ್ಷಿಸಿದ ಪೊಲೀಸ್
ಮೈಸೂರು ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ಅಪಹರಣ ಮಾಡಲು ವೃದ್ಧ ಮಹಿಳೆಯೊಬ್ಬರು ಯತ್ನಿಸಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ, ಮಗುವನ್ನು ಕೂಡ ಪೊಲೀಸರು ಸುರಕ್ಷಿತವಾಗಿ ಕುಟುಂಬಕ್ಕೆ ಒಪ್ಪಿಸಿದ್ದಾರೆ. 50 ವರ್ಷದ ಆರೋಪಿ ವೃದ್ಧೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು
ಸರ್ಕಾರಿ ಆಸ್ಪತ್ರೆ ವಿರುದ್ಧ ದೂರಿತ್ತ ಕೆಆರ್‌ಎಸ್ ಪಕ್ಷದ ಸದಸ್ಯನಿಗೆ ಜೀವ ಬೆದರಿಕೆ, ಕೇಸ್ ದಾಖಲು
ಬೀದರ್‌ನ ಸರ್ಕಾರಿ ಆಸ್ಪತ್ರೆಯೊಂದರ ಬಗ್ಗೆ ದೂರು ನೀಡಿದ KRS ಪಕ್ಷದ ಸದಸ್ಯನಿಗೆ ಜೀವ ಬೆದರಿಕೆ ಬಂದಿದ್ದು, ಪ್ರಕರಣ ದಾಖಲಾಗಿದೆ. ಧನ್ನೂರ (ಕೆ) ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಅಶ್ವಿನಿ ವಿರುದ್ಧ ದೂರು ನೀಡಿದ್ದಕ್ಕೆ ಅವರ ತಾಯಿಯಿಂದ ಬೆದರಿಕೆ ಬಂದಿರುವುದಾಗಿ ಸಂಗಮೇಶ್ ಬಿರದಾರ
ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಗ್ಯಾಂಗ್: ಮೂವರು ಪೊಲೀಸ್ ವಶ
ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದ ಗ್ಯಾಂಗ್‌ವೊಂದನ್ನು ಬಯಲಿಗೆಳೆದಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಈ ಗ್ಯಾಂಗ್ ಜೊತೆ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ
ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ: ಬಿಜೆಪಿಯವರಿಗೆ ಡಿಕೆ ಶಿವಕುಮಾರ್ ಸವಾಲು
ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದ ಬಗ್ಗೆ ಕಾಳಜಿ ಹಾಗೂ ಬದ್ಧತೆ ಇದ್ದರೆ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒಟ್ಟಿಗೆ ಒತ್ತಡ ಹಾಕೋಣ ಬನ್ನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸವಾಲೆಸೆದರು.
ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ: ಪುತ್ರ ಯತೀಂದ್ರ
ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ ಎಂದು ಪುತ್ರ ಹಾಗೂ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ನಮ್ಮನ್ನು ಮುನ್ನಡೆಸಲಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ
ಪುತ್ತೂರಿನ ಯುವಕ ಬೆಂಗಳೂರಲ್ಲಿ ಸಾವು: ಸಿಗರೇಟ್, ಪುಡ್ ಪಾಯಿಸನ್, ಅಸ್ತಮಾ ಕಾರಣವೇ?
ಪುತ್ತೂರಿನ ಯುವಕನೊಬ್ಬ ಕೊಡಗಿನ ಯುವತಿ ಜೊತೆ ಬೆಂಗಳೂರಿನ ಮಡಿವಾಳ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಸಾವಿಗೆ ಫುಡ್ ಪಾಯ್ಸನ್ ಅಥವಾ ಅತಿಯಾದ ಸಿಗರೇಟ್ ಸೇವನೆ ಕಾರಣವೇ ಅಥವಾ ಅವರ ಕುಟುಂಬವನ್ನು ಬಾಧಿಸುತ್ತಿದ್ದ ಅಸ್ತಮಾ ಕಾರಣ ಇರಬಹುದೇ
ಹಾಲುಮತದವರು ಅವರಾಗಿಯೇ ಪದತ್ಯಾಗ ಮಾಡಬೇಕು, ಬಲವಂತ ಸಾಧ್ಯವಿಲ್ಲ ಎಂದ ಕೋಡಿಮಠದ ಶ್ರೀ
ಹೋದ ಸಲ ಐದು ವರ್ಷವಾದರೂ ಅವರನ್ನು ಏನೂ ಮಾಡಲು ಆಗಲಿಲ್ಲ. ಅವರಾಗಿಯೇ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ. ಹಾಲುಮತ ಸಮಾಜಕ್ಕೆ ಘನತೆ, ಗೌರವವಿದೆ, ಅಧಿಕಾರ ಬಂದರೆ, ವಾಪಸ್ ತೆಗೆದುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ
ಯಲ್ಲಾಪುರದಲ್ಲಿ ಬಸ್ ಮರಕ್ಕೆ ಡಿಕ್ಕಿ: ಬಸ್ಸಲ್ಲೇ ಸಿಲುಕಿತು ಚಾಲಕನ ಮುರಿದ ಕಾಲು
ಮುಂಬೈಯಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ಕಾಲು ಮುರಿದು ಬಸ್‌ನಲ್ಲೇ ಸಿಕ್ಕಿಕೊಂಡ ಘಟನೆ ಯಲ್ಲಾಪುರದ ಹಳಿಯಾಳ ಕ್ರಾಸ್ ಬಳಿ ನಡೆದಿದೆ. ಸ್ಥಳೀಯರು ಮತ್ತು ಪೊಲೀಸರು ಧಾವಿಸಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ, ಘಟನೆಯಲ್ಲಿ
ಹಾಸನಾಂಬೆ ದರ್ಶನ ಪಡೆದು ವಾಪಸಾಗುತ್ತಿದ್ದ ಮೂವರು ಅಪಘಾತಕ್ಕೆ ಬಲಿ
ಹಾಸನಾಂಬೆಯ ದರ್ಶನ ಪಡೆದುಕೊಂಡು ವಾಪಸಾಗುತ್ತಿದ್ದ ಎರಡು ಬೈಕ್‌ಗಳಿಗೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಅಸು ನೀಗಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ




