Menu

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ಆರ್‌. ಅಶೋಕ್‌ ಸಾಂತ್ವನ

ಮೈಕ್ರೋ ಫೈನಾನ್ಸ್ ಹಾವಳಿಯಿಂದ ಕೊನ್ನಾಪುರದಲ್ಲಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. 2018ರಲ್ಲಿ ಉಜ್ಜೀವನ್ ಬ್ಯಾಂಕ್ ನಲ್ಲಿ ಪ್ರೇಮಾ ಎಂಬವರು 6 ಲಕ್ಷ ರೂ. ಸಾಲ ಪಡೆದಿದ್ದು, ಮೂರು ತಿಂಗಳ ಕಂತು ಕಟ್ಟದ ಹಿನ್ನೆಲೆಯಲ್ಲಿ ಮನೆ ಸೀಜ್ ಮಾಡಲಾಗಿತ್ತು. ಇದರಿಂದ ಮನನೊಂದು ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಸಾವಿನಿಂದ ನೊಂದ ಮಗ ರಂಜಿತ್ ಕೂಡ ಕೆರೆಗೆ

ಕ್ರೀಡಾಂಗಣಗಳು-ಗರಡಿ ಮನೆಗಳು ಹೆಚ್ಚಾಗಿರುವುದು ಆರೋಗ್ಯಕರ ಊರಿನ ಲಕ್ಷಣ: ಕೆವಿಪಿ

ಯಾವುದೇ ಊರಲ್ಲಿ ಆಸ್ಪತ್ರೆ-ಮೆಡಿಕಲ್ ಶಾಪ್ ಗಳಿಗಿಂತ ಕ್ರೀಡಾಂಗಣಗಳು-ಗರಡಿ ಮನೆಗಳು ಹೆಚ್ಚಾಗಿದ್ದರೆ ಅದು ಆರೋಗ್ಯಕರ ಊರಿನ ಲಕ್ಷಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ. ಹಾಸನದ ಅರಕಲಗೂಡಿನಲ್ಲಿ ಶ್ರೀ ರಾಘವೇಂದ್ರ ಯೂತ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ “ಸಿದ್ದರಾಮಯ್ಯ ಕಪ್” ಸೀಸನ್

ಯಾದಗಿರಿಯಲ್ಲಿ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 5 ಮಂದಿ ಸಾವು

ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಮೃತಪಟ್ಟ ದಾರುಣ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಿಂಥಣಿ ಬಳಿ ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಆಂಜನೇಯ

ಮನೆಯವರನ್ನು ಹೊರಗಟ್ಟಿ ಬೀಗ ಜಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ, ಮನೆ ತೊರೆಯುವುದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೇ ಸಾಲಗಾರರನ್ನು ಮನೆಯಿಂದ ಹೊರಗಟ್ಟಿ ಬೀಗ ಜಡಿಯುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ

ಮೈಸೂರಿನ ಹಲವೆಡೆ ಐಟಿ ಅಧಿಕಾರಿಗಳಿಂದ ರೇಡ್‌

ಸರ್ಕಾರದ ಕಾಮಗಾರಿಗಳ ಗುತ್ತಿಗೆ ವಹಿಸಿಕೊಂಡಿರುವ ಕಾಂಟ್ರಾಕ್ಟರ್ ರಾಮಕೃಷ್ಣೇಗೌಡ ಮನೆ, ಎಂ ಪ್ರೋ ಪ್ಯಾಲೇಸ್, ಹೋಟೆಲ್, ಕಲ್ಯಾಣ ಮಂಟಪ ಸೇರಿದಂತೆ ಮೈಸೂರಿನ ಹಲವೆಡೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ

ನಟ ಡಾಲಿಗಾಗಿ ಮುಗಿ ಬಿದ್ದ ಅಭಿಮಾನಿಗಳಿಗೆ ಲಾಠಿ ರುಚಿ

ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ನಟ ಡಾಲಿ ಧನಂಜಯ ಆಗಮಿಸಿದ್ದರು. ಈ ವೇಳೆ ಧನಂಜಯ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಡಾಲಿ ಜೊತೆ ಸೆಲ್ಫಿ ಬೇಕು ಎಂದು ಫ್ಯಾನ್ಸ್ ಮುಗಿ ಬಿದ್ದಿದ್ದಾರೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು

ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆಗೈದು ನಾಪತ್ತೆ ಪ್ರಕರಣ ದಾಖಲಿಸಿದಾಕೆ ಪೊಲೀಸ್‌ ಬಲೆಗೆ

ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿ ಶವವನ್ನು ಬಿಸಾಡಿ ಪತಿ ನಾಪತ್ತೆ ಎಂದು ನಾಟಕವಾಡಿರುವ ಪ್ರಕರಣವೊಂದು ಬಯಲಾಗಿದೆ. ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದವರು, ಪತ್ನಿ ಗೀತಾ ಹಾಗೂ ಪ್ರಿಯಕರ ಗುರುಪಾದಸ್ವಾಮಿ ಬಂಧಿತ ಆರೋಪಿಗಳು. ದಂಪತಿಗೆ

ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿದೆ ಮಂಗನಕಾಯಿಲೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿಯಾಗಿದೆ. ಖಾಂಡ್ಯ ಹೋಬಳಿಯ ಮತ್ತಿಖಂಡ‌ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿತ್ತು. ಈಗ ಎನ್​ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲಿ ಮೂರು ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡಿದ್ದು,

ಕಾವೇರಿ ನೀರಿಗಾಗಿ ಬೆಂಗಳೂರಿನಲ್ಲಿ 58 ಸಾವಿರ ಜನ ಅರ್ಜಿ ಸಲ್ಲಿಕೆ!

ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರು ಸರಬರಾಜಿಗೆ ಚಾಲನೆ ಸಿಕ್ಕ ಬಳಿಕ ನಮಗೂ ಕಾವೇರಿ ಕುಡಿಯುವ ನೀರಿನ ಸಂಪರ್ಕ ಮಾಡಿಕೊಡಿ ಎಂದು 58 ಸಾವಿರ ಜನರು ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಬರಗಾಲ ಆವರಿಸಿ

ಶಾಲಾ ಆವರಣದಲ್ಲೇ ಬಾಲಕಿಯ ಗ್ಯಾಂಗ್‌ ರೇಪ್‌: ಸರ್ಕಾರದ ವಿರುದ್ಧ ಅಶೋಕ್‌ ಕಿಡಿ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ. ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ರಾಜ್ಯದಲ್ಲಿ