ಜಿಲ್ಲಾ ಸುದ್ದಿ
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದ ಕೇಂದ್ರ: ಡಿಕೆಶಿ ವಾಗ್ದಾಳಿ
ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ನೀಡುವುದಾಗಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಈ ವಿಚಾರ ಸೇರಿಸಿದ್ದರು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ನೀಡಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹಿರಿಯೂರಿನಲ್ಲಿ ವಾಣಿವಿಲಾಸ ಸಾಗರಕ್ಕೆ ಬಾಗಿನ ಸಮರ್ಪಿಸಿದ
ಟ್ರ್ಯಾಕ್ಟರ್ -ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಗರ್ಬಿಣಿ ಸೇರಿ ಇಬ್ಬರ ಸಾವು
ಸಾರಿಗೆ ಬಸ್ ಮತ್ತು ರೈತರ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಗರ್ಭಿಣಿ ಸೇರಿ ಇಬ್ಬರು ಸಾವಿಗಿಡಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಗೋಳ ಸಮೀಪ ಗುರುವಾರ ಮುಂಜಾನೆ ಜರುಗಿದ್ದು, ಶ್ರೀದೇವಿ ರಾಮಣ್ಣ (18)
ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಪಕ್ಷಿಗಳ ಸಮೀಕ್ಷೆ
ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಮುಂದಾಗಿ, ಫೆ.1 ಮತ್ತು 2ರಂದು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ. ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಈ
ಸಕಲೇಶಪುರದಲ್ಲಿ ಶಾಲೆಗೆಂದು ತೆರಳಿದ ಮೂವರು ವಿದ್ಯಾರ್ಥಿಗಳು ನಾಪತ್ತೆ
ಹಾಸನದ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬವರ ಮಕ್ಕಳಾದ ಶರತ್ (16), ಧನಂಜಯ್ (16), ಮುರುಳಿ (16) ನಾಪತ್ತೆಯಾದವರು.
ಬೆಳಗಾವಿ ಸಮಾವೇಶದಲ್ಲಿ ಮೃತಪಟ್ಟ ಕೆಂಚಪ್ಪ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಡಿಕೆಶಿ
ಬೆಳಗಾವಿಯಲ್ಲಿ ನಡೆದ “ಜೈ ಬಾಪು ಜೈ ಭೀಮ್ ಜೈ ಸಂವಿಧಾನ” ಸಮಾವೇಶಕ್ಕೆ ಆಗಮಿಸಿದ್ದಾಗ ಹೃದಯಘಾತದಿಂದ ಮೃತಪಟ್ಟ ಹಾವೇರಿಯ ರಾಣೆಬೆನ್ನೂರು ತಾಲೂಕಿನ ನದಿಹರ್ಲಳ್ಳಿಯ ಬಸಪ್ಪ ಕೆಂಚಪ್ಪ ಪಾಮೆನಳ್ಳಿ ಅವರ ಕುಟುಂಬಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಕೆಪಿಸಿಸಿ ವತಿಯಿಂದ 5 ಲಕ್ಷ ರೂಪಾಯಿ
ಡಾ.ಕುಮಾರ್‌ಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ
ಚುನಾವಣಾ ಆಯೋಗವು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ೨೦೨೪-೨೫ನೇ ಸಾಲಿನ ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ ಎಂಬ ಪ್ರಶಸ್ತಿ ಪ್ರಕಟಿಸಿದೆ. ೨೦೨೪-೨೫ನೇ ಸಾಲಿನಲ್ಲಿ ನಡೆಸಿದ ಲೋಕಸಭಾ ಚುನಾವಣೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಜಿಲ್ಲೆಯಲ್ಲಿ ನಡೆಸಿದ ಚುನವಾಣಾ ಕೆಲಸಗಳನ್ನು ಪರಿಗಣಿಸಿ ರಾಜ್ಯ ವಿಭಾಗದಲ್ಲಿ
ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನ ಬಂಧನ
ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದ ಸಮೀಪ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಪ್ಪ, ಮಗನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯೂರು ಗ್ರಾಮದ ನಾಗೇಶ ಬಿನ್ ಶಿವಪ್ರಸಾದ್(28) ಹಾಗೂ ಶಿವಪ್ರಸಾದ್ ಬಿನ್ ಷಡಕ್ಷರಿ(48) ಖೋಟಾ ನೋಟು ಪ್ರಿಂಟ್ ಮಾಡಿ ಪೋಲೀಸರ ಬಲೆಗೆ ಬಿದ್ದ
ನಾಡಿನ ಅಭಿವೃದ್ಧಿಯಲ್ಲಿ ಸಂಸ್ಕೃತಿ-ಸಾಹಿತ್ಯ ಕಣ್ಣುಗಳಿದ್ದಂತೆ: ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ನಾಡಿನ ಅಭಿವೃದ್ಧಿ ಆಗಬೇಕಂದರೆ ಸಂಸ್ಕೃತಿ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇವು ಚನ್ನಾಗಿದ್ದರೆ ನಾಡನ್ನು ನೋಡುವ ದೃಷ್ಟಿ ಚನ್ನಾಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು. ನಗರದಲ್ಲಿ ಬುಧವಾರ ಕರ್ನಾಟಕ
ನಿನ್ನ ಯೋಗ್ಯತೆ ನನಗೆ ಗೊತ್ತಿಲ್ವಾ? ಯತ್ನಾಳ್ ಗೆ ಜಿಟಿ ದೇವೇಗೌಡ ತಿರುಗೇಟು
ನನ್ನ ಯೋಗ್ಯತೆ, ನನ್ನ ಆಸ್ತಿ ಲೆಕ್ಕ ನಿನಗೇನು ಗೊತ್ತು? ನಿನಗೆ ತಾಕತ್ ಇದ್ರೆ ನಿನ್ನ ಬಳಿ ನನ್ನದೇನಿದೆ ಬಹಿರಂಗಪಡಿಸು. ನಿನ್ನ ವಿಚಾರವೂ ನನಗೆ ಗೊತ್ತಿದೆ. ನಾನು ಬಹಿರಂಗಪಡಿಸುತ್ತೇನೆ. ನಾನು ಭ್ರಷ್ಟಾಚಾರ ಮಾಡಿರೋದನ್ನ ನೀನು ಸಾಬೀತು ಮಾಡಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ
ಹೆಚ್.ಡಿ ಕೋಟೆಯಲ್ಲಿ ಮಗನೆದುರೇ ಪೆಟ್ರೋಲ್ ಸುರಿದು ಪತ್ನಿಗೆ ಬೆಂಕಿ ಹಚ್ಚಿದ ಪತಿ
ಹೆಚ್.ಡಿ ಕೋಟೆಯ ಹನುಮಂತ ನಗರದಲ್ಲಿ ವ್ಯಕ್ತಿಯೊಬ್ಬ ಮಗನ ಎದುರೇ ತನ್ನ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪತಿಯ ಕ್ರೌರ್ಯದಿಂದ ನಲುಗಿದ ಮಹಿಳೆ ಮಧುರ. ಆಕೆಯ ಗಂಡ ಮಲ್ಲೇಶ್ ನಾಯ್ಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾತ. ಮಹಿಳೆಗೆ ಮೈಸೂರಿನ ಖಾಸಗಿ