Thursday, September 24, 2026
Menu

ಬೆದರಿಕೆ ಪೋಸ್ಟ್‌ಗಳು: ಮಂಗಳೂರಿನಲ್ಲಿ ಪೊಲೀಸ್‌ ಹೈ ಅಲರ್ಟ್‌, ರಾತ್ರಿ 9.30ರೊಳಗೆ ಎಲ್ಲ ಬಂದ್‌

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಎನ್ನಲಾದ ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಪ್ರತೀಕಾರದ ಹತ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳು ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮಂಗಳೂರು ನಗರದಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದು, ಸೋಮವಾರ ರಾತ್ರಿ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸ ಲಾಗಿದೆ. ಹೋಟೆಲ್, ಪಬ್, ಬಾರ್​ಗಳು, ಫುಟ್​ಪಾತ್ ವ್ಯಾಪಾರವನ್ನು ರಾತ್ರಿ 9.30 ರೊಳಗೆ ಬಂದ್ ಮಾಡಿಸಲಾಗುತ್ತಿದೆ. ಇನ್ನೂ ಕೆಲವು ದಿನ ಇದನ್ನೇ

ಸುಹಾಸ್‌ ಹತ್ಯೆಯಲ್ಲಿ ಹೆಡ್ ಕಾನ್ಸ್‌ಟೇಬಲ್‌ ಕೈವಾಡ ಶಂಕೆ, ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹ

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಸ್ಲಿಂ ಹೆಡ್ ಕಾನ್ಸ್‌ಟೇಬಲ್‌ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ. ಸೇಡಿಗಾಗಿ ಫಾಝಿಲ್ ತಮ್ಮ ಆದಿಲ್ ಮೆಹರೂಫ್ ಸುಫಾರಿ ಕೊಟ್ಟು ಹತ್ಯೆ ನಡೆಸಿದ್ದಾನೆಂದು ಆರೋಪಿಗಳ ಬಂಧನ

ಸುಹಾಸ್‌ ಶೆಟ್ಟಿ ಕೊಲೆ: ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಳಿಂದ ಪರಸ್ಪರ ಕೊಲೆ ಬೆದರಿಕೆ

ಬಜರಂಗದಳ ಕಾರ್ಯಕರ್ತ ಎನ್ನಲಾಗಿರುವ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಿಂದ ಕರಾವಳಿಯಲ್ಲಿ ಕೋಮು ಉದ್ವಿಗ್ನತೆ ಹೆಚ್ಚಿದ್ದು, ಸಾಮಾಜಿಕ ಮಾಧ್ಯಮ ಸಂದೇಶಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಮತ್ತು ಭಾರತ್ ಕುಮ್ಡೇಲ್ ಎಂಬ ಬರಹವುಳ್ಳ ಸಂದೇಶಗಳು

ಎಸ್​ಎಸ್​ಎಲ್​ಸಿ ಫಲಿತಾಂಶ: ದಕ್ಷಿಣ ಕನ್ನಡ ಮೊದಲ ಸ್ಥಾನ

2024-2025ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಪಡೆದುಕೊಂಡಿದ್ದಾರೆ ಶೇ.66.14ರಷ್ಟು ಅಂದರೆ ಕಳೆದ ವರ್ಷಕ್ಕಿಂತ

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್ ಕೊಲೆ: ಮಂಗಳೂರಿನಲ್ಲಿ ಮೇ 6ರವರೆಗೆ ನಿಷೇಧಾಜ್ಞೆ

ಮಂಗಳೂರಿನ  ಬಜ್ಪೆ ಕಿನ್ನಿಪದವು ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ  ಸುಹಾಸ್ ಶೆಟ್ಟಿ ಎಂಬವರನ್ನು ದುಷ್ಕರ್ಮಿಗಳು  ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯಾಗಿರುವ ಸುಹಾಸ್‌ ಶೆಟ್ಟಿ ಹಿಂದೂ ಕಾರ್ಯಕರ್ತ ಎನ್ನಲಾಗಿದ್ದು, ಕೊಲೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಶುಕ್ರವಾರ ಮಂಗಳೂರು ಬಂದ್‌ಗೆ ಕರೆ

ಕಾರಿನೊಳಗೆ ಗುಂಡು ಹಾರಿಸಿಕೊಂಡು ಕಾರ್ಕಳದ ಉದ್ಯಮಿ ಆತ್ಮಹತ್ಯೆ

ಕಾರ್ಕಳದ ನಿಟ್ಟೆಯ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಉದ್ಯಮಿ ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿಲೀಪ್ ಎನ್.ಆರ್ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ವ್ಯಕ್ತಿ. ದಿಲೀಪ್‌ ಮಂಗಳೂರಿನಲ್ಲಿ ಸಣ್ಣ ಉದ್ಯಮ ನಡೆಸುತ್ತಿದ್ದರು. ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ

ಭಟ್ಕಳದಲ್ಲಿ ದೀರ್ಘಾವಧಿ ವೀಸಾ ಹೊಂದಿರುವ 14 ಪಾಕಿಸ್ತಾನಿಗಳು

ಭಟ್ಕಳದಲ್ಲಿ ದೀರ್ಘಾವಧಿ ವೀಸಾ ಹೊಂದಿರುವ 14 ಪಾಕಿಸ್ತಾನಿಗಳು ವಾಸವಿದ್ದು, ದೀರ್ಘಾವಧಿ ವೀಸಾ ಹೊಂದಿದ್ದು ಭಾರತದಲ್ಲೇ ಇರಲಿದ್ದಾರೆ. ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ, ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಭಟ್ಕಳದಲ್ಲಿ

ಜನಿವಾರ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ: ಡಿಕೆ. ಶಿವಕುಮಾರ್

ವಿದ್ಯಾರ್ಥಿಗಳ ಜನಿವಾರ ಕಳಚಿಸಿರುವ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲು ಸರ್ಕಾರ ಬದ್ಧ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ

ಜಾತಿಗಣತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ, ಆತುರದ ನಿರ್ಧಾರವಿಲ್ಲ: ಡಿಸಿಎಂ

ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು, ಈ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದ ನಂತರ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಜಾತಿಗಣತಿ ಗೆ ಕೆಲವು

ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ: ಡಿಕೆ ಶಿವಕುಮಾರ್

ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ನಾವು ಧರ್ಮವನ್ನು ಕಾಪಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೆ ಭೇಟಿ ಮಾಡಿದ ಬಳಿಕ ಶಿವಕುಮಾರ್  ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದರು. ಈ ಧರ್ಮಕ್ಷೇತ್ರ ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು