Menu

ಜಮಖಂಡಿಯಲ್ಲಿ ಕುಡುಕ ಯುವಕನ ಹಿಂಸೆ ತಾಳದೆ ತಂದೆ, ತಾಯಿ, ಅಣ್ಣನಿಂದಲೇ ಕೊಲೆ

ನಿತ್ಯ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡಿ ಹೊಡೆದು ಬಡಿಯುತ್ತಿದ್ದ ಯುವಕನನ್ನು ಹಿಂಸೆ ತಾಳಲಾಗದೆ ತಂದೆ,ತಾಯಿ, ಅಣ್ಣ ಸೇರಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ. ಅನಿಲ್ ಪರಪ್ಪ‌ ಕಾನಟ್ಟಿ (32) ಕೊಲೆಯಾದ ಯುವಕ, ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಪರಪ್ಪ ಕಾನಟ್ಟಿ, ಅಣ್ಣ‌ ಬಸವರಾಜ ಪರಪ್ಪ ಕಾನಟ್ಟಿ ಆರೋಪಿಗಳು. ಅನಿಲ್ ನಿತ್ಯ ಸಾರಾಯಿ ಕುಡಿದು ಬಂದು, ನನಗೆ ಮದುವೆ ಮಾಡಿ, ಜಮೀನು

ಸೆಪ್ಟೆಂಬರ್ 6ರಂದು ಆಲಮಟ್ಟಿಯಲ್ಲಿ ಕೃಷ್ಣೆಗೆ ಸಿಎಂ ಬಾಗಿನ ಅರ್ಪಣೆ

ಜಲ ಸಂಪನ್ಮೂಲ ಇಲಾಖೆ ಹಾಗೂ ಕೃಷ್ಣ ಭಾಗ್ಯ ಜಲ ನಿಗಮ ಸಹಯೋಗದಲ್ಲಿ ಸೆಪ್ಟೆಂಬರ್ 6ರಂದು ಆಲಮಟ್ಟಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಕೃಷ್ಣೆಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಆಲಮಟ್ಟಿ ಆಣೆಕಟ್ಟೆಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು

ವಿಜಯಪುರ ಗಣೇಶ ವಿಸರ್ಜನೆ: ವಿದ್ಯುತ್‌ ಶಾಕ್‌ಗೆ ಯುವಕ ಬಲಿ

ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ಆಗಿ ಯುವಕ ಮೃತಪಟ್ಟಿದ್ದಾನೆ. ಗಣೇಶನ ಮೂರ್ತಿ ಸಾಗಲು ಅನುಕೂಲವಾಗಲೆಂದು ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ವಿಜಯಪುರ ನಗರದ ಡೋಬಲೆ

ಯಾದಗಿರಿಯಲ್ಲಿ ಅಣ್ಣ ತಮ್ಮ ಹೃದಯಾಘಾತಕ್ಕೆ ಬಲಿ

ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿಯ ಮನೆಯೊಂದರಲ್ಲಿ ಅಣ್ಣ ಮತ್ತು ತಮ್ಮ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಶಂಶೋದ್ದೀನ್ (42) ಮತ್ತು ಇರ್ಫಾನ್ (38) ಮೃತಪಟ್ಟ ಸೋದರರು. ತಮ್ಮ ಇರ್ಫಾನ್‌ಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾದ ಸುದ್ದಿ ತಿಳಿದ ಕೂಡಲೇ ಅಣ್ಣ ಶಂಶೋದ್ದೀನ್‌ಗೂ ತೀವ್ರ

Suicide death- ಬೀದರ್‌ ಸಾರಿಗೆ ಸಂಸ್ಥೆ ಬಸ್‌ನಲ್ಲೇ ಚಾಲಕ ಆತ್ಮಹತ್ಯೆ: ಮ್ಯಾನೇಜರ್‌ ಕಿರುಕುಳ ಕಾರಣವೆಂದ ಕುಟುಂಬ

ರಾಜ್ಯ ಸಾರಿಗೆ ಸಂಸ್ಥೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕರೊಬ್ಬರು ಮ್ಯಾನೇಜರ್‌ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದ

ಶಹಾಪುರ ವಸತಿ ಶಾಲೆ ಶೌಚಾಲಯದಲ್ಲೇ ವಿದ್ಯಾರ್ಥಿನಿ ಹೆರಿಗೆ

ಯಾದಗಿರಿ ಜಿಲ್ಲೆಯ ಶಹಾಪುರ ನಗರದ  ಸರ್ಕಾರಿ ವಸತಿ ಶಾಲೆಯ  ಶೌಚಾಲಯದಲ್ಲೇ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.  ವಿಷಯ ತಿಳಿದು ಆತಂಕಗೊಂಡ ಮಕ್ಕಳ ಪೋಷಕರು ವಸತಿ ಶಾಲೆಯ  ಬಳಿ ಸೇರಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿ ಎನ್ನುವ ವಿಚಾರವನ್ನು

ಕಲಬುರಗಿಯಲ್ಲಿ ಶಾಲಾ ಪುಸ್ತಕ ದಾಸ್ತಾನಿಗೆ ಬೆಂಕಿ

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶಾಲೆಗಳಿಗೆ ಸರಬರಾಜು ಮಾಡಲು ಇಡಲಾಗಿದ್ದ ಪುಸ್ತಕ ದಾಸ್ತಾನಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಹಾಗೂ ಹಳೆಯ ಶಾಲಾ ಸಮವಸ್ತ್ರಗಳು ಬೆಂಕಿಗಾಹುತಿಯಾಗಿವೆ. 4ನೇ ತರಗತಿಯಿಂದ 8ನೇ ತರಗತಿ ಕನ್ನಡ ಮಾಧ್ಯಮದ ಪುಸ್ತಕಗಳು

ಜಾತಕದೋಷವೆಂದು ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿ ಅರೆಸ್ಟ್‌

ಜಾತಕದಲ್ಲಿ ದೊಡ್ಡ ದೋಷವಿದೆ, ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿ ನಂಬಿಸಿ ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿಯನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್‌ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ

ಯಾದಗಿರಿಯಲ್ಲಿ ಸಾಲ ಮರಳಿಸು ಅಂದ ಅಳಿಯನ ಕೊಲೆಗೈದ ಮಾವ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ(ಎಸ್‌.ಕೆ) ಗ್ರಾಮದಲ್ಲಿ ಕೊಟ್ಟ ಸಾಲ ಮರಳಿ ಕೊಡುವಂತೆ ಕೇಳಿದ ಅಳಿಯನನ್ನು ಆತನ ಸೋದರ ಮಾವ ಕೊಲೆ ಮಾಡಿರುವ ಘಟನೆ ನಡೆದಿದೆ. ಲಕ್ಷ್ಮಣ ಚಿಗರಿಹಾಳ (25) ಹತ್ಯೆಗೀಡಾದ ಯುವಬಕ. ಆತನ ಸೋದರ ಮಾವ ಮಾನಪ್ಪ ಎಂಬಾತ ಕೊಲೆ

ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು: ಪ್ರಿಯಾಂಕ್‌ ಖರ್ಗೆ

ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದಾಗ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ಎಂದು ಐಟಿ-ಬಿಟಿ ಸಚಿವ