ಬೆಳಗಾವಿ
ಐಫೋನ್ ಖರೀದಿ ತಂದೆ ಬೈದಿದ್ದಕ್ಕೆ ನೊಂದ ಮಗ ಆತ್ಮಹತ್ಯೆ
ಬೆಳಗಾವಿ: ಐಫೋನ್ ಖರೀಸಿದ್ದನ್ನು ಪ್ರಶ್ನಿಸಿ ತಂದೆ ಬೈದಿದ್ದರಿಂದ ನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನ್ಯೂ ವೈಭವ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ. ನ್ಯೂ ವೈಭವ ನಗರದ ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್ (24) ಆತ್ಮಹತ್ಯೆ ಮಾಡಿಕೊಂಡವರು. ಶೇಖ್ ಇಎಂಐ ಮೂಲಕ 70 ಸಾವಿರ ರೂ. ಬೆಲೆಯ ಐಫೋನ್ ಖರೀದಿಸಿದ್ದ. ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ದೀಯಾ? ಕಡಿಮೆ ದರದ
ಯತ್ನಾಳ್ ಉಚ್ಚಾಟನೆ: ಏ.13ಕ್ಕೆ ಬೆಳಗಾವಿಯಲ್ಲಿ ಪ್ರತಿಭಟನೆ ಎಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಏ.10ರೊಳಗೆ ಬಸನಗೌಡ ಪಾಟೀಲ ಯತ್ನಾಳ್ ಅವರ ಉಚ್ಚಾಟನೆ ಆದೇಶ ವಾಪಸ್ ಪಡೆಯದಿದ್ದರೆ ಏ.13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಬಂಧುಗಳು, ಹಿಂದೂಪರ ಕಾರ್ಯಕರ್ತರು,
ಬೆಳಗಾವಿ ಪೊಲೀಸರನ್ನು ನಾಯಿಗೆ ಹೋಲಿಸಿ ಎಂಇಎಸ್ ಪೋಸ್ಟ್
ಬೆಳಗಾವಿ ಪೊಲೀಸರನ್ನು ನಾಯಿಗೆ ಹೋಲಿಸಿ ಎಂಇಎಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಉದ್ಧಟತನ ತೋರಿದೆ. ಮಹಾರಾಷ್ಟ್ರದಲ್ಲಿ ಎಂಇಎಸ್ ಮುಖಂಡ ಶುಭಂ ಶಳಕೆ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಇಎಸ್ ಹೀಗೆ ಪ್ರತಿಕ್ರಿಯಿಸಿದೆ. ಕನ್ನಡ ಪರ ಹೋರಾಟಗಾರರು ಹಾಗೂ ಕರ್ನಾಟಕ ಅಪಹಾಸ್ಯ ಮಾಡಿದ್ದ
ಪಿಯುಸಿ, ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ ದಂಧೆ: ಮೂವರ ಬಂಧನ
ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಮೂಲಕ ಪಿಯುಸಿ ಮತ್ತು ಎಸ್ಎಸ್ಎಲ್ಸಿ ತತ್ಸಮಾನ ಎಂದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಟಡಿ ಸೆಂಟರ್ಗಳನ್ನು ತೆರೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು.
ಬೆಳಗಾವಿಯಲ್ಲಿ ಬಸ್ ಕಳ್ಳಿಯರ ಗ್ಯಾಂಗ್ ಸೆರೆ, ಚಿನ್ನಾಭರಣ ವಶ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಸರ್ಕಾರಿ ಬಸ್ಸುಗಳು ಮಹಿಳೆಯರಿಂದ ತುಂಬಿ ತುಳುಕುತ್ತಿರುವುದನ್ನೇ ದಾಳ ಮಾಡಿಕೊಂಡು ಬಸ್ ಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ನಗರದ ವಡ್ಡರವಾಡಿಯ ಅನಿತಾ ಚೌಗಲೆ, ನಿಶಾ ಲೊಂಡೆ, ಗಿಡ್ಡಿ
ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳು; ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಒಂದರಲ್ಲೇ, 150 ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂಥ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ವಿಷಯವನ್ನು ಅರಿತ ಸಚಿವ ಡಾ.
ಮರಾಠಿಯಲ್ಲಿ ಪಹಣಿ ಕೊಡಲಿಲ್ಲವೆಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಹಲ್ಲೆ
ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮರಾಠಿಯಲ್ಲಿ ಪಹಣಿ ಕೊಡಲಿಲ್ಲ ಹಾಗೂ ಕಾನೂನು ಬಾಹಿರ ಕೃತ್ಯಕ್ಕೆ ಸಹಕಾರ ನೀಡಲಿಲ್ಲ ಎಂದು ಕನ್ನಡಿಗ ಕಾರ್ಯದರ್ಶಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಬೇವಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗಪ್ಪ ಎಂಬವರ ಮೇಲೆ ಬೆಳಗಾವಿ ತಾಲೂಕಿನ ಗೋಜಗಾ ಸಮೀಪ
ಬಸ್ನಲ್ಲೇ ನೇಣು ಬಿಗಿದುಕೊಂಡ ಬೆಳಗಾವಿ ಕೆಎಸ್ಆರ್ಟಿಸಿ ಮೆಕ್ಯಾನಿಕ್
ಬೆನ್ನು ನೋವಿದ್ದರೂ ಡ್ಯೂಟಿ ಬದಲಿಸಲಿಲ್ಲ ಎಂದು ಬೆಳಗಾವಿ ಕೆಎಸ್ಆರ್ಟಿಸಿ ಘಟಕದ ಮೆಕ್ಯಾನಿಕ್ ಬಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಳ್ನಾವರ್ ಬೆಳಗಾವಿ ಬಸ್ನಲ್ಲಿ ಮೆಕ್ಯಾನಿಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ಕೇಶವ ಕಮಡೊಳಿ (57) ಎಂದು ಗುರುತಿಸಲಾಗಿದೆ. ಬೆಳಗಾವಿಯ ಹಳೆ ಗಾಂಧಿ ನಗರದ
ಮೂರು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಮೂರು ಮಕ್ಕಳ ಜೊತೆ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ತಾಯಿ ಶಾರದಾ, ಮಕ್ಕಳಾದ ಅಮೃತಾ, ಆದರ್ಶ ಮತ್ತು ಅನುಷ್ಕಾ ಮೃತಪಟ್ಟಿದ್ದಾರೆ. ಮೂರು ಮಕ್ಕಳೊಂದಿಗೆ ತಾಯಿ
ಪ್ರೇಯಸಿಯ ಕತ್ತು ಸೀಳಿ ಕೊಲೆಗೈದು ಪ್ರೇಮಿ ಆತ್ಮಹತ್ಯೆ
ಮದುವೆಗೆ ನಿರಾಕರಿಸಿದ್ದ ಪ್ರೇಯಸಿಯ ಕತ್ತು ಸೀಳಿ ಪಾಗಲ್ ಪ್ರೇಮಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಶಹಾಪುರದ ನವಿ ಗಲ್ಲಿಯಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೇಂಟಿಂಗ್