ಜಿಲ್ಲಾ ಸುದ್ದಿ
ಶಿವಮೊಗ್ಗದ ಮನೆಗೆ ನುಗ್ಗಿ ಹಣ, ಚಿನ್ನ ದೋಚಿದ ಕಳ್ಳರು
ಶಿವಮೊಗ್ಗದ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವವ ಮನೆಯೊಂದರಲ್ಲಿ ನಗದು ಮತ್ತು 15 ಲಕ್ಷ ರೂಪಾಯಿಗಳ ಒಡವೆ ಕಳ್ಳತನವಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಈ ಮನೆಯ ಮಾಲೀಕ ಗೋಪಾಲ್ ಎಂಬವರು ಆರೋಗ್ಯ ಸಮಸ್ಯೆಯಿಂದ ಕಳೆದ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಮಗಳು ಮುಂಬೈಗೆ ಗೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ಮಾಡಿದ್ದಾರೆ. ಮನೆಯ ಗೇಟ್‌ಗೆ ಬೀಗ ಹಾಕಿದ್ದುದ್ದರಿಂದ ಕಾಂಪೌಂಡ್ ಹಾರಿ ಮನೆಯ ಬೀರುವಿನ ಲಾಕರ್ ಒಡೆದು, ಒಳಗೆ ನುಗಿದ್ದ
ತುಮಕೂರಿನಲ್ಲಿ ಫಾಯಿಲ್ ಫೆನ್ಸಿಂಗ್: ಬೆಂಗಳೂರು ಹುಡುಗ-ಹುಡುಗಿಯರದ್ದೇ ದರ್ಬಾರ್
ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಮಹಿಳೆಯರ ಫಾಯಿಲ್ ಫೆನ್ಸಿಂಗ್‌ನಲ್ಲಿ ಬೆಂಗಳೂರು ಗ್ರಾಮಂತರದ ಸಯೆದಾ ಇಫ್ತಾಖರ್ ಬಾನು ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ಶ್ರೀರಕ್ಷಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರೆ, ಬೆಂಗಳೂರು ನಗರದ ಧೃತಿಕಾ ಎನ್. ಅಂದನ್ ಮತ್ತು ಪಿಸಿ ನಿಶಾ ಕಂಚಿನ
ಖಂಡ್ರೆ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ: ಡಿಸಿಎಂ ಡಿಕೆ ಶಿವಕುಮಾರ್
“ಭೀಮಣ್ಣ ಖಂಡ್ರೆ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ವೀರಶೈವ ಸಮಾಜದ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ರಾಜ್ಯದಲ್ಲಿ ಸಂಘಟನೆ ಮಾಡಿದ್ದಾರೆ. ಈ ಕುಟುಂಬ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಈ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದೆ” ಎಂದು ಡಿಸಿಎಂ
ಶಿವಮೊಗ್ಗದಲ್ಲಿ ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ: ಸವಾರ ಸಾವು
ಬೈಕ್ ಗೆ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಗುರುಪುರ ಬಳಿ ನಡೆದಿದೆ. ಕಾಟಿಕೆರೆ ಗ್ರಾಮದ 26 ವರ್ಷದ ಮಂಜುನಾಥ್ ಮೃತ ಯುವಕ. ಹೊಳೆಹೊನ್ನೂರು ಕಡೆಯಿಂದ ಅತಿ ವೇಗವಾಗಿ ಬಂದ ಲಾರಿ ಹಿಂಬದಿಯಿಂದ
ಸಿಎಂ ತವರಲ್ಲೂ ಮಹಿಳಾಧಿಕಾರಿಗೆ ಧಮ್ಕಿ: ತಡವಾಗಿ ಬೆಳಕಿಗೆ ಬಂದ ಪ್ರಕರಣ
ಮೈಸೂರು: ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ನಗರಸಭೆ ಪೌರಾಯುಕ್ತೆಗೆ ಅವಾಚ್ಯ ಶಬ್ದಗಳಿಂದ ಮತ್ತು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿರುವ ಪ್ರಕರಣದ ಬೆನ್ನಲ್ಲೇ ಸಿಎಂ ತವರಿನಲ್ಲೂ ಇಂತದ್ದೇ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ಮಹಿಳಾ ಅಧಿಕಾರಿಗೆ ವ್ಯಕ್ತಿಯೋರ್ವ ಅವಾಚ್ಯ
ಅಕ್ರಮ ಮಿಕ್ಸಿಂಗ್ ಡಾಂಬರ್ ಘಟಕ ಸ್ಥಗಿತಗೊಳಿಸಿದ ತಹಸೀಲ್ದಾರ್
ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಮಿಕ್ಸಿಂಗ್ ಡಾಂಬರ್ ಘಟಕ ನಡೆಸುತ್ತಿದ್ದು ಆರೋಪ ಕೇಳಿ ಬಂದ ಹಿನ್ನೆಲೆ ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಮೇಗರವಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಮಾಡಲಾಗುತ್ತಿದ್ದ ಮಿಕ್ಸಿಂಗ್
ಪತ್ನಿಯ ಕೊಲೆ ಆರೋಪದಡಿ ಧಾರವಾಡ ಜೈಲಿನಲ್ಲಿದ್ದ ಕೈದಿ ಆತ್ಮಹತ್ಯೆ
ಪತ್ನಿಯ ಕೊಲೆ ಆರೋಪದಡಿ 14 ವರ್ಷಗಳ ಶಿಕ್ಷೆಗೆ ಒಳಗಾಗಿ ಧಾರವಾಡ ಜೈಲಿನಲ್ಲಿದ್ದ ಕೈದಿಯೊಬ್ಬರು ಕಾರಾಗೃಹದ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲಿನ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪುರದ ಈಶ್ವರಪ್ಪ ಪೂಜಾರ್ ಎಂದು ಗುರುತಿಸಲಾಗಿದೆ.
ಮದುವೆಗೆ ಐದು ದಿನ ಬಾಕಿ: ಮಂಡ್ಯದಲ್ಲಿ ಆಸ್ತಿಗಾಗಿ ತಮ್ಮನ ಕೊಲೆಗೈದ ಅಣ್ಣ
ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣನೊಬ್ಬ ಸದ್ಯದಲ್ಲೇ ಮದುವೆಯಾಗಲಿದ್ದ ತಮ್ಮನನ್ನು ಇರಿದು ಕೊಂದಿರುವ ಘಟನೆ ನಡೆದಿದೆ. ಯೋಗೇಶ್ (30) ಅಣ್ಣ ಮತ್ತು ಆತನ ಮಕ್ಕಳಿಂದ ಕೊಲೆಯಾದವರು. ಯೋಗೇಶ್‌ಗೆ ಇದೇ ತಿಂಗಳು 21 ರಂದು ಮದುವೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮವಿತ್ತು. ಸಂಬಂಧಿಕರಿಗೆಲ್ಲ
ತುಮಕೂರಿನಲ್ಲಿ ಬಾಲಕಿ ಎದುರೇ ತಂದೆಯ ಕೊಲೆಗೈದಿದ್ದ ಕಳ್ಳರು ಅರೆಸ್ಟ್
ತುಮಕೂರಿನಲ್ಲಿ ಮಗಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿಯನ್ನು ಅಪರಿಚಿತ ಮುಸುಕುಧಾರಿಗಳು ಕೊಲೆಗೈದು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ತಮಿಳುನಾಡಿನ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ
ರಾಸಾಯನಿಕ ಬೆರಸಿ ನಕಲಿ ಹಾಲು ತಯಾರಿ: ಐವರ ಬಂಧನ
ರಾಸಾಯನಿಕ ವಸ್ತು ಬಳಸಿ ನಕಲಿ ಹಾಲು ತಯಾರಿಸಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಕೆಜಿಎಫ್ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ದಿಲೀಪ್, ಬಾಲರಾಜ್, ವೆಂಕಟೇಶಪ್ಪ, ಬಾಲಾಜಿ ಮತ್ತು ಮನೋಹರ್ ಬಂಧಿತರು ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಕೆಜಿಎಫ್ ತಾಲೂಕಿನ




