Menu

ಜಸ್ ಪ್ರೀತ್ ಬುಮ್ರಾಗೆ ಒಲಿದ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ!

jaspreeth bumrah

ಮಾರಕ ದಾಳಿ ಸಂಘಟಿಸಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾಗೆ ಐಸಿಸಿ ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ.

೨೦೨೪ನೇ ಸಾಲಿನಲ್ಲಿ ಬುಮ್ರಾ ಆಡಿದ 13 ಟೆಸ್ಟ್ ಗಳಲ್ಲಿ 71 ವಿಕೆಟ್ ಗಳಿಸಿದ್ದರು. ಈ ಮೂಲಕ ಬುಮ್ರಾ ವರ್ಷದ ಶ್ರೇಷ್ಠ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ 6ನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ (2204), ಗೌತಮ್ ಗಂಭೀರ್ (2009), ವೀರೇಂದ್ರ ಸೆಹ್ವಾಗ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2018) ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದರು.

ಬುಮ್ರಾ ಪ್ರಶಸ್ತಿಗೆ ಪಾತ್ರರಾಗುವ ಮೂಲಕ ಈ ಪ್ರಶಸ್ತಿ ಅತೀ ಹೆಚ್ಚು ಬಾರಿ ಪಡೆದ ತಂಡ ಎಂಬ ಆಸ್ಟ್ರೇಲಿಯಾದ ದಾಖಲೆ ಸರಿಗಟ್ಟಿತು. ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಎರಡು ಬಾರಿ [2015- 2017) ಪಡೆದ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ನ ಗಸ್ ಅಟ್ಕಿಸನ್ 11 ಪಂದ್ಯಗಳಿಂದ 51 ವಿಕೆಟ್ ಪಡೆದು ಎರಡನೇ ಸ್ಥಾನ ಪಡೆದರು. ಗಾಯದ ಕಾರಣ 2023ರಲ್ಲಿ ಸಾಕಷ್ಟು ಪಂದ್ಯಗಳಿಂದ ಹೊರಗುಳಿದಿದ್ದ ಬುಮ್ರಾ ಕ್ರಿಕೆಟ್ ಗೆ ಮರಳಿದ ಬೆನ್ನಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದರು.

Related Posts

Leave a Reply

Your email address will not be published. Required fields are marked *