Thursday, January 30, 2025
Menu

ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್: ಸಚಿವ ಜೈಶಂಕರ್ ಗೆ ಹೆಚ್‌ಡಿಕೆ ಧನ್ಯವಾದ

ಬೆಂಗಳೂರು ನಗರದಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ ಆರಂಭ ಸಂಬಂಧ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ  ನವದೆಹಲಿಯಲ್ಲಿ  ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು.

ಬೆಂಗಳೂರಿನಲ್ಲಿ ಅಮೆರಿಕ ರಾಜತಾಂತ್ರಿಕ ಕಚೇರಿ  ಇಂದು (ಶುಕ್ರವಾರ) ಉದ್ಘಾಟನೆ ಆಗುತ್ತಿದ್ದು,  ವಿದೇಶಾಂಗ ಸಚಿವರನ್ನು ಸೌತ್ ಬ್ಲಾಕ್ ನಲ್ಲಿರುವ ಅವರ ಕಚೇರಿಯಲ್ಲಿಯೇ ಭೇಟಿಯಾಗಿ ಕುಮಾರಸ್ದವಾಮಿ  ಅಭಿನಂದನೆಗಳನ್ನು ಸಲ್ಲಿಸಿದರು.

ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಕೇಂದ್ರ ಸ್ಥಾನವಾಗಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಬೆಂಗಳೂರು, ಯುಎಸ್ ಕಾನ್ಸುಲೇಟ್ ಸ್ಥಾಪನೆಯೊಂದಿಗೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಮಹತ್ವದ ಬೆಳವಣಿಗೆ ಬೆಂಗಳೂರಿಗೆ ಹೊಸ ಅಧ್ಯಾಯ ಆರಂಭವಾಗಿದೆ ಮಾತ್ರವಲ್ಲದೆ, ಈ ಕನಸನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಿದ ಹಲವು ನಾಯಕರ ನಿರಂತರ ಶ್ರಮಕ್ಕೆ ಸಿಕ್ಕ ಗೆಲುವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿ2018 ಮೇ 31ರಂದು ಕರ್ನಾಟಕ ಮುಖ್ಯಮಂತ್ರಿ ಆಗಿದ್ದಾಗ ಆಗಿನ ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನೆತ್ ಜಸ್ಟರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಸ್ಥಾಪನೆಯ ಬೇಡಿಕೆಯನ್ನು ಪ್ರಸ್ತಾಪಿಸಿದ್ದರು. ಆಗ ಹೆಚ್ಡಿಕೆ ಅವರ ಮನವಿಗೆ ಜಸ್ಟರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅಗತ್ಯವಾದ ಪೂರಕ ಮಾಹಿತಿ, ದಾಖಲೆಗಳನ್ನು ಕೂಡ ಅಂದಿನ ಮುಖ್ಯಮಂತ್ರಿ ಹೆಚ್ಡಿಕೆ ಅವರು ಅಮೆರಿಕ ರಾಯಭಾರಿಗೆ ನೀಡಿದ್ದರು.

ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ತೆರೆಯುವುದರಿಂದ ಭಾರತ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಮತ್ತಷ್ಟು ಬಲವಾಗುತ್ತವೆ. ತಂತ್ರಜ್ಞಾನ, ವ್ಯಾಪಾರ, ಶಿಕ್ಷಣ ಮತ್ತು ಆವಿಷ್ಕಾರದಲ್ಲಿ ಸಹಕಾರವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಇದು ಮಹತ್ವದ ಪ್ರವೇಶದ್ವಾರವಾಗಿ ರುತ್ತದೆ. ಪ್ರಧಾನಿಗಳ ‘ವಿಕಸಿತ ಭಾರತ 2047’ ಗುರಿ ಸಾಕಾರ ನಿಟ್ಟಿನಲ್ಲಿ ಉಪಕ್ರಮ ಬಹಳ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *