Menu

ಸುಹಾಸ್‌ ಶೆಟ್ಟಿ ಕೊಲೆ: ಸಾಮಾಜಿಕ ಮಾಧ್ಯಮಗಳಲ್ಲಿ ಗುಂಪುಗಳಿಂದ ಪರಸ್ಪರ ಕೊಲೆ ಬೆದರಿಕೆ

suhas shetty

ಬಜರಂಗದಳ ಕಾರ್ಯಕರ್ತ ಎನ್ನಲಾಗಿರುವ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಿಂದ ಕರಾವಳಿಯಲ್ಲಿ ಕೋಮು ಉದ್ವಿಗ್ನತೆ ಹೆಚ್ಚಿದ್ದು, ಸಾಮಾಜಿಕ ಮಾಧ್ಯಮ ಸಂದೇಶಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತಷ್ಟು ಅನಿಶ್ಚಿತತೆಗೆ ದೂಡಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಮತ್ತು ಭಾರತ್ ಕುಮ್ಡೇಲ್ ಎಂಬ ಬರಹವುಳ್ಳ ಸಂದೇಶಗಳು ಹರಿದಾಡುತ್ತಿವೆ.

ಜೀವ ಬೆದರಿಕೆ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್​ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಇನ್​ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಮತ್ತು ಬಿಎನ್​ಎಸ್ ಕಾಯ್ದೆ 351(4) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಶರಣ್​ ಪಂಪ್ವೆಲ್​ಗೆ ಜೀವ ಬೆದರಿಕೆ ಒಡ್ಡಿ ‘‘ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್’’ ಎಂದು ಪೋಸ್ಟ್ ಮಾಡಿದ್ದರು.

ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್. ಶರಣ್ ಹತ್ಯೆಯಾಗಲು ತಯಾರಾಗು ಎಂದು ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಬೆದರಿಕೆ ಹಾಕಲಾಗಿತ್ತು. ಇನ್ನೂ ಕೆಲವು ಮುಖಂಡರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆ ಹಾಕಲಾಗಿದೆ.

ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಹತ್ಯೆ ಬೆದರಿಕೆ ಸಂದೇಶ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಶ್ರಫ್ ಕೊಂದ ಭರತ್​ನನ್ನು ಮರೆತಿಲ್ಲ, Wait and watch’’ ಎಂದು ಕಿಡಿಗೇಡಿಗಳು ತಲ್ವಾರ್ ಪೋಟೊ ಪೋಸ್ಟ್ ಮಾಡಿದ್ದರು.

ಎಸ್​​ಡಿಪಿಐ ಮುಖಂಡ ರಿಯಾಜ್ ಕಡಂಬು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದವರ ವಿರುದ್ಧವೂ ಎಫ್​ಐಆರ್​​ ದಾಖಲಿಸಲಾಗಿದೆ. ಕೊಲೆ ಬೆದರಿಕೆ ಹಾಕಿದ ಕೆ.ಆರ್ ರಾಕೇಶ್ ವಿರುದ್ಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ. ಯೂಟ್ಯೂಬ್‌ನಲ್ಲಿ ಸುಹಾಸ್ ಶೆಟ್ಟಿ ಕೊಲೆ ಸುದ್ದಿ ಪ್ರಸಾರವಾಗುತ್ತಿದ್ದ ವೇಳೆ ಕಮೆಂಟ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. Next is Riyaz Kadanbu hit list ಎಂದು @Krrakesh9456 ಖಾತೆ ಮೂಲಕ ಕಮೆಂಟ್ ಮಾಡಲಾಗಿತ್ತು.

Related Posts

Leave a Reply

Your email address will not be published. Required fields are marked *