ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ಪತಿ ಮತ್ತು ಪತ್ನಿ ಮಧ್ಯೆ ಜಗಳವಾದ ಬಳಿಕ ಪತ್ನಿಯು ಬೆಂಕಿ ಹಚ್ಚಿ ನಾಲ್ಕು ವರಚದ ಮಗಳನ್ನು ಕೋಮದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ತಾಯಿ ಸೀತಾ (29), ಮಗಳು ಸೃಷ್ಟಿ (4) ಮೃತಪಟ್ಟವರು. ಗುರುವಾರ ಸಂಜೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
2ನೇ ಮದುವೆ ವಿರೋಧಿಸಿದ ಪತ್ನಿಯ ಕೊಲೆಗೈದ ಪತಿ
ಭದ್ರಾವತಿ ತಾಲೂಕಿನ ಪಂಡರಹಳ್ಳಿ ಕ್ಯಾಂಪ್ನಲ್ಲಿ ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಕತ್ತು ಹಿಸುಕಿ ಪತಿ ಕೊಲೆ ಮಾಡಿದ್ದಾನೆ. ಚಂದನಾಬಾಯಿ ಎಂಬಾಕೆಯನ್ನು ಪತಿ ಗೋಪಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಡಿ.ಬಿ.ಹಳ್ಳಿಯ ಲಂಬಾಣಿ ಸಮುದಾಯದ ಚಂದನಾಬಾಯಿ ಮತ್ತು ಪಂಡರಹಳ್ಳಿಯ ಬೋವಿ ಸಮಾಜದ ಗೋಪಿ ಪ್ರೀತಿಸಿ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಕೆಲವು ದಿನ ತಲೆಮರೆಸಿಕೊಂಡು ವಾಪಸ್ ಊರಿಗೆ ಬಂದು ಸಂಸಾರ ನಡೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಈ ನಡುವೆ ಮತ್ತೊಂದು ಯುವತಿಯನ್ನು ಮದುವೆಯಾಗಲು ಗೋಪಿ ಮುಂದಾಗಿದ್ದಾನೆ. ವಿರೋಧಿಸಿದ ಪತ್ನಿಯನ್ನು ತನ್ನ ಮನೆಯಲ್ಲೇ ಹತ್ಯೆ ಮಾಡಿದ್ದಾನೆ.


