ಇಥಿಯೋಪಿಯಾದಲ್ಲಿ 12,000 ವರ್ಷಗಳ ನಂತರ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಇದರ ಬೂದಿ ಭಾರತ ಪ್ರವೇಶಿಸಿದೆ.
ಹೈಲಿ ಗೊಬ್ಬಿ ಜ್ವಾಲಾಮುಖಿ 12 ಸಾವಿರ ವರ್ಷಗಳ ನಂತರ ಸ್ಫೋಟಗೊಂಡಿದ್ದು, ಮತ್ತೊಮ್ಮೆ ಚಟುವಟಿಕೆ ಆರಂಭಗೊಂಡಿದ್ದು, ಭಾರೀ ಪ್ರಮಾಣದ ಬೂದಿ ಹಲವು ದೇಶಗಳಿಗೆ ವ್ಯಾಪಿಸುತ್ತಿದೆ.
ಜ್ವಾಲಾಮುಖಿ ಸ್ಫೋಟದಿಂದ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಮಾನಗಳು ಮರಳಿದರೆ, ಇನ್ನು ಕೆಲವು ಮಾರ್ಗ ಬದಲಿಸಿವೆ. ವಿಮಾನ ಸಂಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಭಾರತೀಯ ವಿಮಾನಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಲವು ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.
ಜ್ವಾಲಾಮುಖಿ ಸ್ಫೋಟದಿಂದ ಬೂದಿ ಕೆಂಪು ಸಮುದ್ರದ ಮೂಲಕ ಯೆಮೆನ್, ಓಮನ್ ದೇಶಗಳಿಗೆ ಹಬ್ಬಿದೆ. ಅಲ್ಲದೇ ಅರಬ್ಬಿ ಸಮುದ್ರಕ್ಕೂ ಇದು ವ್ಯಾಪಿಸಿ ಉತ್ತರ ಭಾರತದ ಕಡೆ ಬರುತ್ತಿದೆ. ಈಗಾಗಲೇ ಹರಿಯಾಣ ಮತ್ತು ರಾಜಸ್ಥಾನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ. ದೆಹಲಿಗೆ ಕೆಲವೇ ಗಂಟೆಗಳಲ್ಲಿ ಪ್ರವೇಶಿಸಲಿದೆ ಮೂಲಗಳು ತಿಳಿಸಿವೆ.


