Thursday, February 13, 2025
Menu

ಟಿಬೆಟ್‌ನಲ್ಲಿ ಪ್ರಬಲ ಭೂಕಂಪಕ್ಕೆ 32 ಮಂದಿ ಬಲಿ

ನೇಪಾಳ ಮತ್ತು ಟಿಬೆಟ್‌ ಗಡಿಯಲ್ಲಿ ಇಂದು ಮುಂಜಾನೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, 32 ಮಂದಿ ಮೃತಪಟ್ಟರೆ 38 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭೂಕಂಪ ಟಿಬೆಟ್‌ನಲ್ಲಿ ಸಂಭವಿಸಿದ್ದು, ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ಮಾಹಿತಿ ನೀಡಿದೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನ ಮನೆಯಿಂದ ಹೊರಗಡೆ ಓಡಿಕೊಂಡು ಬಂದಿರುವ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಚೀನಾದ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

Related Posts

Leave a Reply

Your email address will not be published. Required fields are marked *