ದೇಶ-ವಿದೇಶ
ಆಂಧ್ರ ಮಹಿಳೆಯರಿಗೆ ಮನೆಯಿಂದಲೇ ಕೆಲಸ!
ವಿಶಾಖಪಟ್ಟಣ: ನೆರೆಯ ಆಂಧ್ರಪ್ರದೇಶ ಸರ್ಕಾರವು ಮಹಿಳೆಯರಿಗಾಗಿ ಅದರಲ್ಲೂ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಜಾರಿಗೆ ತರಲು ಉತ್ಸುಕವಾಗಿದೆ. ಖುದ್ದು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೇ ಈ ಕುರಿತ ಮಹತ್ವದ ಮಾಹಿತಿ ನೀಡಿದ್ದಾರೆ. ಕೋವಿಡ್ 19 ಸಮಯದಲ್ಲಿ ಕೆಲಸದ ಸಂಸ್ಕೃತಿ ಬದಲಾಗಿರುವುದನ್ನು ಉಲ್ಲೇಖಿಸಿರುವ ಅವರು ತಂತ್ರಜ್ಞಾನದ ಲಭ್ಯತೆಯು ಮನೆಯಿಂದಲೇ ಕೆಲಸ ಮಾಡುವ ಪರಿಕಲ್ಪನೆಯನ್ನು ಉತ್ತೇಜಿಸಿದೆ ಎಂದು ಹೇಳಿದರು. ಆಂಧ್ರಪ್ರದೇಶ ಐಟಿ ಮತ್ತು ಜಿಸಿಸಿ
ಶೇ.65 ಭಾರತೀಯರು ಎಐಗೆ ದಾಸರು: ಮೈಕ್ರೋಸಾಫ್ಟ್ ಅಧ್ಯಯನ
ನ್ಯೂಯಾರ್ಕ್: ಭಾರತೀಯರಲ್ಲಿ ಎಐ ಬಳಕೆ ವಿಪರೀತದ ಮಟ್ಟಕ್ಕೆ ಹೋಗಿರುವುದನ್ನು ಸಮೀಕ್ಷೆಯೊಂದು ತಿಳಿಸಿದೆ. ಇಲ್ಲಿ ಶೇ.65 ರಷ್ಟು ಜನರು ಎಐಗೆ ಮಾರುಹೋಗಿದ್ದಾರೆ ಎಂದು ಮೈಕ್ರೋಸಾಫ್ಟ್ ಅಧ್ಯಯನ ವರದಿ ಹೇಳಿದೆ. ಮೈಕ್ರೋಸಾಫ್ಟ್ ಸಂಸ್ಥೆಯು ಜಾಗತಿಕ ಆನ್ ಲೈನ್ ಸುರಕ್ಷತಾ ಸಮೀಕ್ಷೆಯನ್ನು ಅನಾವರಣಗೊಳಿಸಿತು, ಇದು ಎಐನ
ರಾಜ್ಯಸಭೆಯಲ್ಲಿ ಗದ್ದಲ ಮಧ್ಯೆಯೇ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ
ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಕುರಿತ ಜೆಪಿಸಿ ವರದಿ ಮಂಡನೆ ಮಾಡಲಾಗಿದ್ದು, ವರದಿ ಮಂಡಿಸಿದ ತಕ್ಷಣ ಸದನದಲ್ಲಿ ಗದ್ದಲ ಶುರುವಾಗಿ ಕಲಾಪ ಮುಂದೂಡಲಾಯಿತು. ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಸಿದ್ಧಪಡಿಸಲಾದ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದೆ. ಈ ವರದಿಯ
ಕೈಗಾರಿಕಾ ಪ್ರಗತಿ ಜತೆಗೆ ಸುಸ್ಥಿರ ರಾಜ್ಯ ಮಾಡುವ ಗುರಿ: ಡಿ.ಕೆ.ಶಿವಕುಮಾರ್
“ಕರ್ನಾಟಕವನ್ನು ಕೈಗಾರಿಕೆ ಪ್ರಗತಿ ಜತೆಗೆ ಸುಸ್ಥಿರ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶಿವಕುಮಾರ್ ಮಾತನಾಡಿದರು. “ಇನ್ವೆಸ್ಟ್ ಕರ್ನಾಟಕ 2025 ಕೇವಲ
ಜೊತೆಗಿರಬೇಕೆಂದು ಹಠ ಹಿಡಿದ ಗರ್ಭಿಣಿ ಗೆಳತಿಯ ಹೊಲದಲ್ಲಿ ಕೊಲೆಗೈದು ಸುಟ್ಟ ಗೆಳೆಯ ಅರೆಸ್ಟ್
18 ವರ್ಷದ ಗರ್ಭಿಣಿ ಗೆಳತಿಯನ್ನು ಹೊಲಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಂದು, ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಪ್ರಕರಣದ ಆರೋಪಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ಗೊಂಡಿಯಾ ಜಿಲ್ಲೆಯಲ್ಲಿ ನಡೆದಿದೆ. ಶಕೀಲ್ ಮುಸ್ತಫಾನಿಗೆ ಗೆಳತಿಯೊಂದಿಗೆ ಕೆಲವು ತಿಂಗಳಿನಿಂದ ಸಂಬಂಧವಿತ್ತು, ಆಕೆ
ಕುಂಭಮೇಳದಲ್ಲಿ ಯಶಸ್ವಿಯಾಗಿ ನಡೆದ ಮಾಘ ಹುಣ್ಣಿಮೆ ಸ್ನಾನ!
ಕುಂಭಮೇಳದಲ್ಲಿ ಬುಧವಾರ ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಮಾಘ ಪೂರ್ಣಿಮಾ ದಿನದ ಪುಣ್ಯ ಸ್ನಾನಕ್ಕಾಗಿ ಬುಧವಾರ ಲಕ್ಷಾಂತರ ಜನರು ಆಗಮಿಸಿದ್ದು, ಯಾವುದೇ ಸಮಸ್ಯೆ ಇಲ್ಲದೇ ನಿರ್ವಿಘ್ನವಾಗಿ ಪೂರೈಸಿದೆ. ಮಾಘ ಸ್ನಾನ ಯಶಸ್ವಿಯಾಗಿ ನಡೆಯುವುದರೊಂದಿಗೆ ಕುಂಭ ಮೇಳ
ಉಚಿತ ಗ್ಯಾರಂಟಿ ಯೋಜನೆಗಳಿಗೆ ಸುಪ್ರೀಂ ಅಸಮಾಧಾನ
ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುವ ಬದಲು ಪರಾವಲಂಬಿ ವರ್ಗ ಸೃಷ್ಟಿ ಮಾಡುತ್ತಿದ್ದಿರಾ ಎಂದು ರಾಜಕೀಯ ಪಕ್ಷಗಳ ಉಚಿತ ಯೋಜನೆಗಳ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎಜಿ ಮಸಿಹ್ ಅವರನ್ನೊಳಗೊಂಡ ವಿಭಾಗೀಯ
ಪ್ರಧಾನಿ ಮೋದಿ ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಅರೆಸ್ಟ್
ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಅಮೆರಿಕದ ಉಗ್ರರು ದಾಳಿ ನಡೆಸಬಹುದು ಎಂದು ಹುಸಿ ಬಾಂಬ್ ಬೆದರಿಕೆ ಮಾಡಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್ ಮತ್ತು ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರು ದಾಳಿ ನಡೆಸುತ್ತಾರೆ
ಮರ್ಮಾಂಗಕ್ಕೆ ಡಂಬಲ್ಸ್ ಕಟ್ಟಿ ರ್ಯಾಗಿಂಗ್: ಕೇರಳದಲ್ಲಿ 5 ವಿದ್ಯಾರ್ಥಿಗಳು ಅರೆಸ್ಟ್
ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಅವರ ಮರ್ಮಾಂಗಕ್ಕೆ ಡಂಬಲ್ಸ್ ಕಟ್ಟಿ ಚಿತ್ರ ಹಿಂಸೆ ನೀಡಿದ ಆಘಾತಕಾರಿ ಘಟನೆ ಕೇರಳದ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದ್ದು, ಈ ಸಂಬಂಧ 5 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಾದ ತಿರುವನಂತಪುರದ ಮೂವರು ನೀಡಿದ
12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ ಬಿ ಪಾಟೀಲ
ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ಈಗ ಇರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜತೆಗೆ 30 ಸಾವಿರ ಎಕರೆ ವಿಸ್ತೀರ್ಣದಲ್ಲಿ 12 ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ