ದೇಶ-ವಿದೇಶ
ರಿಪೋ ದರ ಕಡಿತಗೊಳಿಸಿದ ಆರ್‌ಬಿಐ
ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಆರ್‌ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ರಿಪೋ ರೇಟ್ ಅಂದರೆ ರೀಪರ್ಚೇಸ್ ಅಗ್ರೀಮೆಂಟ್ ರೇಟ್. ಬ್ಯಾಂಕುಗಳಿಗೆ ಫಂಡಿಂಗ್ ಅವಶ್ಯಕತೆ ಬಿದ್ದಾಗ ಸರ್ಕಾರಿ ಬಾಂಡ್ಗಳನ್ನು ಆರ್ಬಿಐನಲ್ಲಿ ಅಡವಿಟ್ಟು ಸಾಲ ಪಡೆಯಬಹುದು. ಆದರೆ ಅಡವಿಟ್ಟ ಬಾಂಡ್
ಭಾರತಕ್ಕೆ ಇನ್ನಷ್ಟು ಗೋಡೆಗಳು, ದ್ವೇಷ ಬೇಕಿಲ್ಲ, ಸೇತುವೆಗಳು, ಆಶಾವಾದ ಬೇಕು: ಸಿಎಂ ಸಿದ್ದರಾಮಯ್ಯ
ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ, ಇನ್ನಷ್ಟು ಆಶಾವಾದದ ಅಗತ್ಯವಿದೆ. ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು
ತಮಿಳುನಾಡು ರಾಜ್ಯಪಾಲ ರವಿ ಕಾರ್ಯವೈಖರಿ ಕಾನೂನು ಬಾಹಿರವೆಂದು ಸುಪ್ರೀಂ ತರಾಟೆ
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿ ಯುವ ನಿರ್ಧಾರ ಕೈಗೊಂಡಿರುವುದು ಕಾನೂನುಬಾಹಿರ ಮತ್ತು ಅನಿಯಂತ್ರಿತ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಪ್ಪಿಗೆ ನೀಡದೆ ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಾಯ್ದಿರಿಸಲು ಸಾಧ್ಯವಿಲ್ಲ ಎಂದು
ಜನಾಕ್ರೋಶ ಯಾತ್ರೆ ಪ್ರಹಸನ: ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಪಾಳಮೋಕ್ಷ
ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳು ವಂತೆ ಕಪಾಳಮೋಕ್ಷ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ, ಬೆಲೆ
ಕೃಷ್ಣಾ -ಕಾವೇರಿ ಜಲಹಂಚಿಕೆಯಲ್ಲಿ ರಾಜ್ಯವೆಂದೂ ನೀರುಗಂಟಿಯೇ…!
ಕರ್ನಾಟಕದ ಜನತೆಯ ಪಾಲಿಗೆ ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟುಗಳು ಕಾಮಧೇನುವಲ್ಲ, ಕಲ್ಪ ವೃಕ್ಷವೂ ಆಗಿಲ್ಲ. ಏಕೆಂದರೆ ನದಿದಂಡೆ ಮೇಲಿನ ಭಾಗದಲ್ಲಿರುವ ರಾಜ್ಯಕ್ಕೆ ಇದುವರೆಗೆ ಸಿಕ್ಕಿದ್ದು ಬೊಗಸೆ ನೀರು. ಆದರೆ ಆಂಧ್ರ ಮತ್ತು ತಮಿಳುನಾಡಿಗೆ ದೊರೆತಿದ್ದು ಹಂಡೆಯಷ್ಟು.. ಕೃಷ್ಣಾ – ಕಾವೇರಿ ನದಿ
ಅಕ್ಕಿ ರಫ್ತು ಮೇಲೆ ಹೊಸ ಸುಂಕ ನಿಯಮ ಮೇ 1ರಿಂದ ಜಾರಿಗೆ ಕೇಂದ್ರದ ಆದೇಶ
ಚಂಡೀಗಢ: ಕೇಂದ್ರ ಸರ್ಕಾರ ಮೇ 1ರಿಂದ ಅಕ್ಕಿ ರಫ್ತಿನ ಮೇಲೆ ಹೊಸ ಸುಂಕ ನಿಯಮವನ್ನು ಜಾರಿಗೆ ತರಲಿದೆ. ಸಂಸ್ಕರಣಾ ವಿಧಾನ, ವೈವಿಧ್ಯತೆ ಮತ್ತು ಜಿಐ ಟ್ಯಾಗಿಂಗ್ ಆಧಾರದ ಮೇಲೆ ಅಕ್ಕಿಯನ್ನು ವರ್ಗೀಕರಿಸಲು ಈ ಆಡಳಿತವು ಪ್ರಯತ್ನಿಸುತ್ತದೆ. ಇದು ಭಾರತೀಯ ಅಕ್ಕಿಯ ಜಾಗತಿಕ
ಬಿಸಿಗಾಳಿಗೆ ಉತ್ತರ ತತ್ತರ: 21 ನಗರಗಳಲ್ಲಿ ಸರಾಸರಿಗಿಂತ ಅಧಿಕ ಉಷ್ಣಾಂಶ
ನವದೆಹಲಿ: ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತದ ರಾಜ್ಯಗಳು ತತ್ತರಿಸಲಿದ್ದು, 21 ನಗರಗಳಲ್ಲಿ ಸರಾಸರಿಗಿಂತ ಕನಿಷ್ಟ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ ಮೊದಲ ವಾರವಾದ ಭಾನುವಾರ 5 ರಾಜ್ಯಗಳ
ಗ್ರಾಹಕರಿಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ದರ 50 ರೂ. ಏರಿಕೆ
ನವದೆಹಲಿ: ದೇಶದ ಎಲ್ಲಾ ಗ್ರಾಹಕರಿಗೆ ಅನ್ವಯವಾಗುವಂತೆ ಎಲ್ ಜಿಪಿ ಅಡುಗೆ ಅನಿಲ ದರ 50 ರೂ. ಏರಿಕೆಯಾಗಿದೆ. ಕೇಂದ್ರ ತೈಲ ಸಚಿವ ಹರ್ದಿಪ್ ಸಿಂಗ್ ಪುರಿ ಸೋಮವಾರ ಸಬ್ಸಿಡಿ ಆಧಾರಿತ ಉಜ್ವಲ ಹಾಗೂ ಸಾಮಾನ್ಯ ಗ್ರಾಹಕರು ಬಳಸುವ ಗ್ಯಾಸ್ ಸಿಲಿಂಡರ್ ದರ ಏರಿಕೆ
ಪೆಟ್ರೋಲ್, ಡೀಸೆಲ್ ಮೇಲೆ ಲೀಟರ್ 2 ರೂ. ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ!
ಯುಗಾದಿ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ ಗೆ 2 ರೂ. ಅಬಕಾರಿ ಸುಂಕ ವಿಧಿಸಿದೆ. ಕೇಂದ್ರ ಸರ್ಕಾರ ತೈಲ ಕಂಪನಿಗಳ ಮೇಲೆ ಲೀಟರ್ ಗೆ 2 ರೂ. ದರ ಏರಿಸಿದೆ. ಆದರೆ ಸುಂಕ ಏರಿಕೆಯಿಂದ ಗ್ರಾಹಕರ
ಷೇರು ಮಾರುಕಟ್ಟೆಯಲ್ಲಿ ಸುಂಟರಗಾಳಿ: ಹೂಡಿಕೆದಾರರಿಗೆ 19 ಲಕ್ಷ ಕೋಟಿ ನಷ್ಟ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ತೆರಿಗೆ ಯುದ್ಧದಿಂದ ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲಗೊಂಡಿದ್ದು, ಇಂದು ಒಂದೇ ದಿನ ಹೂಡಿಕೆದಾರರಿಗೆ 19 ಲಕ್ಷ ಕೋಟಿ ರೂ. ನಷ್ಟವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬೃಹತ್ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ




