ದೇಶ-ವಿದೇಶ
ಹೆದ್ದಾರಿಗಳಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ: ಸಚಿವ ನಿತಿನ್ ಗಡ್ಕರಿ
ಭಾರತದಲ್ಲಿ ಹೆದ್ದಾರಿಯಲ್ಲಿ ಟೋಲ್ ಪಾವತಿ ನಗದು ವ್ಯವಹಾರಬದಲು ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈಗ ಎಲೆಕ್ಟ್ರಾನಿಕ್ ಸಿಸ್ಟಮ್ ಮೂಲಕ ಟೋಲ್ ಸಂಗ್ರಹಿಸುತ್ತಿದ್ದು, ಇನ್ಮುಂದೆ ಅತ್ಯಾಧುನಿಕ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಮೇ 1 ರಿಂದ ಆರಂಭಗೊಳ್ಳುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ
ಶಿಶುಗಳ ಕಳ್ಳಸಾಗಣೆ ನಡೆದರೆ ಆಸ್ಪತ್ರೆಗಳ ಪರವಾನಗಿ ಅಮಾನತು: ಸುಪ್ರೀಂ
ಆಸ್ಪತ್ರೆಯಿಂದ ನವಜಾತ ಶಿಶುಗಳ ಕಳ್ಳಸಾಗಣೆ ನಡೆದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ರಾಜ್ಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ.
ಎಐ, ಕ್ವಾಂಟಂ, ಸೈಬರ್ ಸೆಕ್ಯುರಿಟಿ ಸಹಕಾರಕ್ಕೆ ಬವೇರಿಯಾ ಜತೆ ರಾಜ್ಯದ ಒಡಂಬಡಿಕೆ
ಎಐ, ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ರಾಜ್ಯ ಸರಕಾರಗಳು ಒಡಂಬಡಿಕೆಗೆ ಅಂಕಿತ ಹಾಕಿದವು. ರಾಜ್ಯ ಸರಕಾರದ ಪರವಾಗಿ ಬೃಹತ್
ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಮಾಜಿ ಕೇಂದ್ರ ಸಚಿವ ಪಶುಪತಿ!
ಪಾಟ್ನಾ: ರಾಷ್ಟ್ರೀಯ ಡೆಮಾಕ್ರೆಟಿಕ್ ಅಲಯನ್ಸ್ (ಎನ್ ಡಿಎ) ಮೈತ್ರಿಕೂಟದಿಂದ ಮಾಜಿ ಕೇಂದ್ರ ಸಚಿವ ಪಶುಪತಿ ಪಾರಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕಜನಶಕ್ತಿ ಪಾರ್ಟಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಸೋಮವಾರ ಪಾಟ್ನಾದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಲೋಕಜನಶಕ್ತಿ
ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ
ವಿರುಧನಗರ: ದೇವಾಲಯ ಉತ್ಸವದ ವೇಳೆ ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಕರಿಸೇರಿ ಗ್ರಾಮದಲ್ಲಿ ಸೋಮವಾರ ಈ ದುರ್ಘಟನೆ ಸಂಭವಿಸಿದ್ದು, ದೇವಸ್ಥಾನದ ಉತ್ಸವದ ವೇಳೆ ಧ್ವನಿವರ್ಧಕ ಅಳವಡಿಸುತ್ತಿದ್ದಾಗ ತಿರುಪ್ಪತ್ತಿ
ಗುಜರಾತ್ ಕರಾವಳಿಯಲ್ಲಿ 1800 ಕೋಟಿ ಮೌಲ್ಯದ ಡ್ರಗ್ಸ್ ವಶ!
ಅಹಮದಾಬಾದ್: ಗುಜರಾತ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
ಬೆಲ್ಜಿಯಂನಲ್ಲಿ ಮೆಹುಲ್ ಚೊಕ್ಸಿ ಅರೆಸ್ಟ್: ಭಾರತದಿಂದ ಗಡಿಪಾರಿಗೆ ಯತ್ನ
ನವದೆಹಲಿ: ಭಾರತದ ಬ್ಯಾಂಕ್ ಗಳಿಗೆ 12,636 ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಸ್ವಿರ್ಜರ್ಲೆಂಡ್ ಗೆ ಪರಾರಿಯಾಗುವ ಮುನ್ನ ಬೆಲ್ಜಿಯಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭಾರತ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಮೆಹುಲ್ ಚೊಕ್ಸಿ ಭಾರತಕ್ಕೆ ವಾಪಸ್
ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 8 ಮಂದಿ ಸಾವು 7 ಮಂದಿಗೆ ಗಾಯ
ಅಮರಾವತಿ: ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿ 8 ಮಂದಿ ಸಾವನ್ನಪ್ಪಿ 7 ಮಂದಿ ಗಾಯಗೊಂಡಿರುವ ದಾರುಣ ಘಟನೆ ನಗರದ ಹೊರವಲಯದ ಅನಕಪಲ್ಲಿಯಲ್ಲಿ ನಡೆದಿದೆ. ಗಾಯಗೊಂಡಿರುವ 7 ಮಂದಿಯಲ್ಲಿ ನಾಲ್ಕೈದು ಮಂದಿಯ ಸ್ಥಿತಿ ಗಂಭೀರವಾಗಿದ್ದು,ಸಾವಿನ ಸಂಖ್ಯೆ ಹೆಚ್ಚಾಗುವ
ವಕ್ಫ್ ತಿದ್ದುಪಡಿ ಕಾಯ್ದೆ: ಹೊತ್ತಿ ಉರಿಯುತ್ತಿರುವ ಬಂಗಾಳದಲ್ಲಿ ಮೂರು ಸಾವು
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಆ ರಾಜ್ಯ ಹೊತ್ತಿ ಉರಿಯುತ್ತಿದೆ. ಘರ್ಷಣೆಯಲ್ಲಿ ಈವರೆಗೆ ಒಟ್ಟು ಮೂವರು ಮೃತಪಟ್ಟಿದ್ದಾರೆ. 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂಸಾಚಾರ ಮುರ್ಷಿದಾಬಾದ್ ಜಿಲ್ಲೆಯ ಹಲವು
ಉಕ್ರೇನ್ ನ ಭಾರತದ ಔಷಧ ಉಗ್ರಾಣದ ಮೇಲೆ ರಷ್ಯಾ ಕ್ಷಿಪಣಿ ದಾಳಿ!
ಕೀವ್: ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಭಾರತದ ಔಷಧ ಉಗ್ರಾಣದ ಮೇಲೆ ಶನಿವಾರ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಭಾರತದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಎಕ್ಸ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ಉಕ್ರೇನ್ ನಲ್ಲಿ ಭಾರತದ ಔಷಧ ಉದ್ಯಮಕ್ಕೆ ಧಕ್ಕೆ ತರಲು




