ದೇಶ-ವಿದೇಶ
ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ ಪಠ್ಯ ಪುಸ್ತಕ ವಾಪಸ್ ಪಡೆದ ಎನ್ಸಿಆರ್ಟಿ
8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯ ಉಲ್ಲೇಖಕ್ಕೆ ಸಂಬಂಧಿಸಿದಂತೆ ಎನ್ಸಿಆರ್ಟಿ ಸುಪ್ರೀಂಕೋರ್ಟ್‌ನ ಕ್ಷಮೆ ಯಾಚಿಸಿ, ಇಡೀ ಪುಸ್ತಕವನ್ನೇ ವಾಪಸ್ ಪಡೆದಿದೆ. ಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಎಂಬ ವಿಷಯವನ್ನು ಉಲ್ಲೇಖಿಸಿರುವುದು ಕೋಲಾಹಲಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗುವ ವಿಷಯವನ್ನು ಮಕ್ಕಳಿಗೆ ಈ ರೀತಿ ಕಲಿಸುವುದು ಸರಿಯೇ ಎಂದು ಪ್ರಶ್ನಿಸಿತ್ತು. ಫೆಬ್ರವರಿ
ಇರಾನ್ ಇಸ್ರೇಲ್ ಸಂಘರ್ಷದಿಂದ ಎಲ್‌ಪಿಜಿ ಕೊರತೆ: ಹೋಟೆಲ್ ಬಂದ್ ಆತಂಕ
ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ಗೆ ಬೇರೆ ದೇಶಗಳಿಂದ ರಫ್ತು ಆಗುತ್ತಿದ್ದ ವಸ್ತುಗಳು ರಫ್ತು ಆಗುತ್ತಿಲ್ಲ, ವಿಮಾನ ಸಂಚಾರ ಸ್ಥಗಿತಗೊಂಡಿದೆ. ಪ್ರಮುಖವಾಗಿ ಹಲವು ದೇಶಗಳಲ್ಲಿ ತೈಲ ಸಮಸ್ಯೆ ಎದುರಾಗಿದ್ದು, ಬಿಕ್ಕಟ್ಟು ಸೃಷ್ಟಿಯಾಗಿದೆ. ಎಲ್‌ಪಿಜಿ ಪೂರೈಕೆ ವ್ಯತ್ಯಯಗೊಂಡು ಮುಂಬೈನಲ್ಲಿ 20%
ಯುದ್ಧ ನಿಲ್ಲಿಸುವುದು ಅಮೆರಿಕವಲ್ಲ, ಇರಾನ್: ಟ್ರಂಪ್‌ಗೆ ತಿರುಗೇಟು
ಯುದ್ಧ ನಿಲ್ಲಿಸುವುದು ಅಮೆರಿಕದ ನಿರ್ಧಾರವಲ್ಲ, ಅದು ನಮ್ಮ ನಿರ್ಧಾರ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂಬ ಟ್ರಂಪ್ ಹೇಳಿಕೆಗೆ ಐಆರ್‌ಜಿಸಿ ಪಡೆ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಯುಪಿಎಸ್ಸಿ ಪರೀಕ್ಷೆ: ರಾಜ್ಯದ 22 ಅಭ್ಯರ್ಥಿಗಳು ಪಾಸ್, ಕಿರಣ್ ಕಮತೆಗೆ 52ನೇ ರ‍್ಯಾಂಕ್
2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ ) ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ 22 ಮಂದಿ ಆ ಬಾರಿ ಯುಪಿಎಸ್ಸಿಗೆ ಆಯ್ಕೆಯಾಗಿದ್ದಾರೆ. ಕಿರಣ್ ಕಮಟೆ ದೇಶದಲ್ಲಿ 53ನೇ ರ‍್ಯಾಂಕ್ ಗಳಿಸಿ ಕರ್ನಾಟಕದ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಒಟ್ಟು 958
ಮತ್ತೆ ಬದಲಾದ ನಿತೀಶ್ ಗೇಮ್ ಪ್ಲಾನ್
ಜೆಡಿಯು ಮತ್ತು ತೆಲುಗುದೇಶಂ ಪಕ್ಷದ ನಾಯಕರ ಹೆಬ್ಬಯಕೆಗಳನ್ನು ಬದಿಗಿತ್ತು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಈಗ ತನ್ನ ದೈನಂದಿನ ಆಡಳಿತದ ರಥವವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಕಟು ರಾಜಕೀಯ ಸತ್ಯ. ದಿಲ್ಲಿ ರಾಜಕಾರಣಕ್ಕೆ ಚಂದ್ರಬಾಬು ನಾಯ್ಡು ಖಂಡಿತವಾಗಿಯೂ ಪ್ರವೇಶಿಸುವುದಿಲ್ಲ. ಆದರೆ ಬಾಬು
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಧ್ವಂಸ: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಟ್ಯಾಂಕರ್ ನಾಶ
ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಉತ್ತರ ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಟ್ಯಾಂಕರ್ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ನಡೆದ ಸಾವುನೋವುಗಳ ಸಂಕ್ಯೆ ಇನ್ನೂ ದೃಢಪಟ್ಟಿಲ್ಲ. ಇರಾನ್- ಇಸ್ರೇಲ್ ಮಧ್ಯೆ ಆರಂಭಗೊಂಡ ಸಂಘರ್ಷ ಅಮೆರಿಕ ಸೇನಾ
ಇರಾನ್ ನಾಯಕರಾಗುವ ಪ್ರತಿಯೊಬ್ಬರೂ ಸಾಯ್ತಾರೆ, ದಾಳಿ ಮುಂದುವರಿಕೆ ಎಂದ ಟ್ರಂಪ್
ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯುತ್ತಾರೆ, ಸೇನಾ ಕಾರ್ಯಾಚರಣೆ ಸಮಯದಲ್ಲಿ ಇರಾನ್‌ನ ನಾಯಕತ್ವದ ವ್ಯಕ್ತಿಗಳನ್ನು ಗುರಿಯಾಗಿಸುತ್ತಿದ್ದೇವೆ. ಅಮೆರಿಕ ಈಗ ಅತ್ಯಂತ ಪ್ರಬಲ ಸ್ಥಾನದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಜೊತೆಗಿನ ಸೇನಾ
ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ?
ಇಸ್ರೇಲ್ ಮತ್ತು ಇರಾನ್ ಸಂಘರ್ಷ ತೀವ್ರಗೊಂಡು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ನಿರೀಕ್ಷೆಯಂತೆ ಭಾರತದಲ್ಲಿ ಅಡುಗೆ ಅನಿಲ ಪೂರೈಕೆ ಮೇಲೂ ಪರಿಣಾಮ ಬೀರಿದೆ. ವಾಣಿಜ್ಯ ಸಿಲಿಂಡರ್‌ಗಳಿಗೆ ನೀಡಲಾಗಿದ್ದ ರಿಯಾಯಿತಿಗಳನ್ನ ಸ್ಥಗಿತಗೊಳಿಸಿರುವುದಾಗಿ ಇಂಡೇನ್ ಆಯಿಲ್ ತಿಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ದೇಶನದನ್ವಯ 19 ಕೆಜಿ
ಗಲ್ಫ್‌ನಲ್ಲಿ ಅಮೆರಿಕದ ಬೃಹತ್ ರಾಡಾರ್ ವ್ಯವಸ್ಥೆ ಧ್ವಂಸಗೊಳಿಸಿದ ಇರಾನ್
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯ ಬಳಿಕ ಗಲ್ಫ್‌ನಲ್ಲಿ ಅಮೆರಿಕದ ಅತಿದೊಡ್ಡ ರಾಡಾರ್ ವ್ಯವಸ್ಥೆಯನ್ನು ನಾಶ ಪಡಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನ್‌ನ ಪ್ರತೀಕಾರದ ಕಿಚ್ಚು ಮಧ್ಯಪ್ರಾಚ್ಯದ ನಂತರ ಐರೋಪ್ಯ ಒಕ್ಕೂಟಕ್ಕೂ ವ್ಯಾಪಿಸುವ ಭೀತಿ ಎದುರಾಗಿದೆ. ಪರಮೋಚ್ಚ ನಾಯಕ ಆಯತೊಲ್ಲಾ ಅಲಿ
ಚಿತ್ತೂರಿನಲ್ಲಿ ಲಾರಿಗೆ ಕಾರು ಡಿಕ್ಕಿ: ರಾಜ್ಯದ ಐವರು ಸ್ಥಳದಲ್ಲೇ ಸಾವು
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಕರ್ನಾಟಕದ ಐವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ತಿರುಪತಿ ಕಡೆಗೆ ತೆರಳುತ್ತಿದ್ದ ಕಾರು ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಎದುರುಗಡೆಯಿಂದ




