ದೇಶ-ವಿದೇಶ
ಚಾಂಪಿಯನ್ಸ್ ಟ್ರೋಫಿ 2025: ನ್ಯೂಝಿಲೆಂಡ್ ಎದುರು ಭಾರತದ ಜಯ
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡದ ಎದುರು ಭಾರತ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಕಿವೀಸ್ ಪಡೆಯ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಶ್ರೇಯಸ್ ಅಯ್ಯರ್ 77 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 45 ರನ್ ಹೊಡೆದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್ಗಳಲ್ಲಿ 9
ವಾರದಲ್ಲಿ 80 ಗಂಟೆ ದುಡಿಯಬೇಕು: ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್
ಭಾರತ 30 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕಾದರೆ ಭಾರತೀಯರು ಕಠಿಣ ಶ್ರಮ ವಹಿಸಬೇಕು. ಇದಕ್ಕಾಗಿ ಅವರು ವಾರದಲ್ಲಿ ಕನಿಷ್ಠ 80 ಗಂಟೆ ದುಡಿಯಬೇಕು ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರ್ಪಾ ಅಮಿತಾಬ್ ಕಾಂತ್ ಹೇಳಿದ್ದಾರೆ. ಬ್ಯುಸಿನೆಸ್ ಸ್ಟಾಂಡರ್ಡ್
ಕೇಂದ್ರ ಸರ್ಕಾರದಿಂದ 310 ಲಕ್ಷ ಮೆ.ಟನ್ ಗೋಧಿ ಸಂಗ್ರಹ ಗುರಿ
ಕೇಂದ್ರ ಸರ್ಕಾರ ಮುಂಬರುವ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶ ಮತ್ತು ವಿವಿಧ ರಾಜ್ಯಗಳಿಂದ ಒಟ್ಟು 310 ಲಕ್ಷ ಮೆಟ್ರಿಕ್ ಟನ್ ಗೋಧಿ ಮತ್ತು 70 ಲಕ್ಷ ಮೆಟ್ರಿಕ್ ಟನ್ ಭತ್ತ ಸಂಗ್ರಹದ ಗುರಿ ಹಾಕಿಕೊಂಡಿದೆ. ದೆಹಲಿಯಲ್ಲಿ ನಡೆದ ಕೇಂದ್ರಾಡಳಿತ ಪ್ರದೇಶ ಹಾಗೂ ವಿವಿಧ
ಪಿಎಫ್ ಬಡ್ಡಿ ದರ ಶೇ.8.25ರಲ್ಲಿ ಯಥಾಸ್ಥಿತಿ
ನವದೆಹಲಿ: ಭಾರತದ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ 2024-25ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.25ರ ಮಟ್ಟದಲ್ಲಿಯೇ ಮುಂದುವರಿಸಲಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಪಿಎಫ್ಒ ಬಡ್ಡಿದರವನ್ನು ಶೇಕಡಾ 8.15ರಿಂದ 2023-24ಕ್ಕೆ
ಉತ್ತರಾಖಂಡದಲ್ಲಿ ಹಿಮಪಾತ: 42 ಕಾರ್ಮಿಕರು ಸಿಲುಕಿರುವ ಶಂಕೆ
ಉತ್ತರಾಖಂಡ್ ನ ಚಿಮೋಲಿ ಜಿಲ್ಲೆಯಲ್ಲಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, 42 ಕಾರ್ಮಿಕರು ಸಿಲುಕಿರುವ ಭೀತಿ ಇದೆ. ಭಾರತ-ಟಿಬೆಟ್ ಗಡಿ ಭಾಗದಲ್ಲಿರುವ ಮಾನಾ ಗ್ರಾಮದ ಸೇನಾ ಶಿಬಿರದ ಬಳಿ ಹಿಮಪಾತ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ನಡೆಸಿ 15 ಮಂದಿಯನ್ನು ರಕ್ಷಿಸಲಾಗಿದೆ. ಬದರೀನಾಥ
ಮಾ.15 ನಂತರ ನೂತನ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕ!
ಕೇಂದ್ರ ಸಚಿವ ಜೆಪಿ ನಡ್ಡಾ ಅವರ ಮುಗಿದ ಹಿನ್ನೆಲೆಯಲ್ಲಿ ಮಾರ್ಚ್ 15ರ ನಂತರ ಬಿಜೆಪಿ ರಾಷ್ಟ್ರೀಯ ನೂತನ ಅಧ್ಯಕ್ಷರ ನೇಮಕ ಮಾಡಲು ಚಿಂತನೆ ನಡೆದಿದೆ. ವಿವಿಧ 12 ರಾಜ್ಯಗಳ ಪದಾಧಿಕಾರಿಗಳ ನೇಮಕಾತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತುಂಬಾ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಬಿಜೆಪಿ
ಕೇಂದ್ರದ ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾಪ ವಿರುದ್ಧ ತಿರುಗಿಬಿದ್ದ ದಕ್ಷಿಣ ಭಾರತ ರಾಜ್ಯಗಳು!
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿಸಿದ ಕ್ಷೇತ್ರ ಪುನರ್ ವಿಂಗಡಣೆ ವಿಷಯ ಇದೀಗ ವಿವಾದಕ್ಕೆ ತಿರುಗಿದ್ದು, ಪ್ರತಪಕ್ಷಗಳನ್ನು ಹಣಿಯಲು ಮಾಡಿರುವ ತಂತ್ರ ಎಂದು ದಕ್ಷಿಣ ಭಾರತ ರಾಜ್ಯ ಸರ್ಕಾರಗಳು ತಿರುಗಿಬಿದ್ದಿವೆ. ಕ್ಷೇತ್ರ ಪುನರ್ ವಿಂಗಡಣೆ ಪ್ರಸ್ತಾಪಕ್ಕೆ ಕರ್ನಾಟಕ, ತಮಿಳುನಾಡು ಹಾಗೂ
ಹಲವು ದೇಶಗಳಲ್ಲಿ ಇಂದು ಕಂಪಿಸಿದ ಭೂಮಿ
ಪಾಕಿಸ್ತಾನ ಸೇರಿದಂತೆ ಶುಕ್ರವಾರ ಬೆಳಗ್ಗೆಯೇ ಹಲವು ದೇಶಗಳಲ್ಲಿ ಭೂಮಿ ಕಂಪಿಸಿದೆ. ನೇಪಾಳದಲ್ಲಿ ಭೂಕಂಪನ ದಾಖಲಾದ ಕೆಲವೇ ಗಂಟೆಗಳಲ್ಲಿ ಪಾಕ್ ನಲ್ಲೂ ಭೂಕಂಪನ ಆಗಿದೆ. ಪಾಕಿಸ್ತಾನದಲ್ಲಿ ಬೆಳಗಿನ ಜಾವ 5.14ಕ್ಕೆ 4.5 ತೀವ್ರತೆಯ ಭೂಕಂಪ ದಾಖಲಾಗಿದೆ. ಭೂಕಂಪದ ಆಳ 10 ಕಿ.ಮೀ ದಾಖಲಾಗಿದೆ.
ಮರೆವಿನ ಕಾಯಿಲೆ ಆಲ್ಝೈಮರ್ ನಿಯಂತ್ರಿಸುವ ಅಣಬೆ ತಳಿ ಅಭಿವೃದ್ಧಿ
ಮೆದುಳಿನ ನರಕೋಶಗಳು ನಿಷ್ಕ್ರಿಯಗೊಂಡು ಉಂಟಾಗುವ ಮರೆವಿನ ಕಾಯಿಲೆ ‘ಆಲ್ಝೈಮರ್’ ನಿಯಂತ್ರಿಸುವ ಔಷಧೀಯ ಗುಣವುಳ್ಳ ಲಯನ್ಸ್ಮೇನ್’ ಹೆಸರಿನ ಅಣಬೆಯನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ (ಐಐಎಚ್ಆರ್) ಅಭಿವೃದ್ಧಿಪಡಿಸಿದೆ. ‘ಲಯನ್ಸ್ಮೇನ್’ ಅಣಬೆ ಮೆದುಳಿನ ನರಕೋಶಗಳು ಸತ್ತಾಗ ಮೆದುಳು ಮತ್ತು ನರ ಮಂಡಲದ ಮೇಲೆ ಪರಿಣಾಮ
ವಿವಿಗಳ ನಕಲಿ ಅಂಕಪಟ್ಟಿ ಜಾಲ ಬೇಧಿಸಿ ಪ್ರಮುಖ ಆರೋಪಿಯ ಬಂಧಿಸಿದ ಕಲಬುರಗಿ ಪೊಲೀಸ್
ಕಲಬುರಗಿ ನಗರ ಪೊಲೀಸರು ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾ