ದೇಶ-ವಿದೇಶ
ಜಾತಿ ನಿಂದನೆ: ಮೇಲ್ನೋಟಕ್ಕೆ ಅಪರಾಧ ಸಾಬೀತಾಗದಿದ್ದರಷ್ಟೇ ನಿರೀಕ್ಷಣಾ ಜಾಮೀನು ಎಂದ ಸುಪ್ರೀಂ
ಜಾತಿ ನಿಂದನೆ ಅಥವಾ ಎಸ್ಸಿ/ಎಸ್ಟಿ ಕಾಯ್ದೆಯಡಿ ಮೇಲ್ನೋಟಕ್ಕೆ ಅಪರಾಧ ಸಾಬೀತು ಆಗದಿದ್ದರೆ ಮಾತ್ರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮಹಾರಾಷ್ಟ್ರದ ಜಾತಿ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು ಈ ಆದೇಶ ಪ್ರಕಟಿಸಿದೆ.
ರಷ್ಯಾದಿಂದ ತೈಲ ಆಮದು ಮುಂದುವರಿಸಿದ್ರೆ ಮತ್ತಷ್ಟು ಸುಂಕ: ಭಾರತಕ್ಕೆ ಟ್ರಂಪ್ ಬೆದರಿಕೆ
ಭಾರತವು ರಷ್ಯಾದಿಂದ ತೈಲ ಆಮದು ಮುಂದುವರಿಸಿದರೆ ಮತ್ತಷ್ಟು ಸುಂಕ ಪಾವತಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಚೀನಾದ ನಂತರ ಭಾರತವೇ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಈ ಹಿಂದೆ ಟ್ರಂಪ್ ಅಸಹನೆ ಹೊರ ಹಾಕಿದ್ದರು.
ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಸೆ.7- 8 ರಂದು
ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಭಾರತದಾದ್ಯಂತ ಗೋಚರಿಸಲಿದೆ. ಇದು ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸೆ.7ರಂದು ರಾತ್ರಿ 9:57ಕ್ಕೆ ಸ್ಪರ್ಶಕಾಲವಿದ್ದು ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12:28 ರಿಂದ 1:56 ರವರೆಗೆ ಇರಲಿದೆ,
ಧರ್ಮಸ್ಥಳ ಪ್ರಕರಣ ಎನ್‌ಐಎಗೆ ವಹಿಸಲು ಆಗ್ರಹಿಸಿ ಸ್ವಾಮೀಜಿಗಳಿಂದ ಸಚಿವ ಅಮಿತ್ ಶಾಗೆ ಮನವಿ
ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂದು ಸ್ವಾಮೀಜಿಗಳ ನಿಯೋಗ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ನಾನೇ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಈ ಬಗ್ಗೆ ಸಚಿವ ಸಂಪುಟ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ
ಇನ್ನು ಜಿಎಸ್ಟಿ ಸ್ಲ್ಯಾಬ್ 5%, 18% ಅಷ್ಟೇ: ಸಚಿವೆ ನಿರ್ಮಲಾ ಸೀತಾರಾಮನ್
ಜಿಎಸ್‌ಟಿ ಕೌನ್ಸಿಲ್ ಎಂಟು ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಜೊತೆಗೆ ಐಷರಾಮಿ ವಸ್ತುಗಳಿಗೆ 40%
ಮಂಡಿಯಲ್ಲಿ ಮಳೆಗೆ ಭೂಕುಸಿತ: ಆರು ಮಂದಿ ಸಾವು
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ವ್ಯಾಪಕ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಬಾಲಕಿ ಸೇರಿದಂತೆ ಕನಿಷ್ಠ ಆರು ಜನ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಗುಡ್ಡದ ದೊಡ್ಡ ಭಾಗ ಹಠಾತ್ತನೆ ಕುಸಿದು ಎರಡು ಮನೆಗಳು ನಜ್ಜುಗುಜ್ಜಾಗಿದ್ದು,
ಬಿಆರ್‌ಎಸ್ ಶಾಸಕಿ ಸ್ಥಾನಕ್ಕೆ ಕವಿತಾ ರೆಡ್ಡಿ ರಾಜೀನಾಮೆ
ಬಿಆರ್‌ಎಸ್‌ನಿಂದ ಅಮಾನತುಗೊಂಡ ಕೆ. ಕವಿತಾ ರೆಡ್ಡಿ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಆರ್‌ಎಸ್‌ಗೆ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಪರಿಷತ್ತಿನ ಸ್ಪೀಕರ್‌ಗೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ. ತಿಹಾರ್ ಜೈಲಿನಿಂದ ಬಿಡುಗಡೆಯಾದಾಗಿನಿಂದ ನಾನು ನಾನಾ ಕಾರಣಗಳಿಗಾಗಿ
ಸುಡಾನ್‌ನ ಗ್ರಾಮ ಭೂಕುಸಿತಕ್ಕೆ ನಾಮಾವಶೇಷ: ಸಾವಿರ ಮಂದಿ ಸಾವು, ಏಕೈಕ ವ್ಯಕ್ತಿ ಪಾರು
ಸುಡಾನ್‌ನ ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಇಡೀ ಗ್ರಾಮವೇ ನಾಮಾವಶೇಷಗೊಂಡಿದೆ. ಈ ಭೂಕುಸಿತಕ್ಕೆ 1,000 ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಗ್ರಾಮದ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾರೆ ಎಂಬುದೇ ವಿಶೇಷ. ಮರ್ರಾ ಪರ್ವತಗಳಲ್ಲಿರುವ ತಾರಾಸಿನ್ ಗ್ರಾಮ ಭೂಕುಸಿತದಿಂದ ಅಳಿದುಹೋಗಿರುವ ಗ್ರಾಮ.
ಶಾಂಘಾಯ್ ಶೃಂಗಸಭೆ ಬಳಿಕ ಹೆಚ್ಚಿತು ಅಮೆರಿಕದ ತಳಮಳ
ಭಾರತದ ಜೊತೆ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳುವ ರೀತಿ ಅಮೆರಿಕ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿದ ಪರಿಣಾಮ ಇಂದು ಅಮೆರಿಕಕ್ಕೆ ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಟ್ರಂಪ್‌ಗೆ ಬುದ್ಧಿ ಬರಲಿ… ಶಾಂಘಾಯ್ ಶೃಂಗಸಭೆ ಬಳಿಕ ಅಮೆರಿಕದ ತಳಮಳ ಅಧಿಕಗೊಂಡಿದೆ. ಭಾರತದ ದಿಟ್ಟ
ಅತ್ಯಾಚಾರ ಪ್ರಕರಣದ ಬಂಧಿತ ಶಾಸಕ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿ
ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಪಂಜಾಬ್ ಎಎಪಿ ಶಾಸಕ ಮತ್ತು ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿ ವಾಹನಗಳಲ್ಲಿ ಪರಾರಿಯಾಗಿದ್ದು ಪೊಲೀಸರು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ. ರೇಪ್ ಕೇಸ್‌ನಲ್ಲಿ ಸನೂರ್‌ನ ಎಎಪಿ ಶಾಸಕ ಹರ್ಮೀತ್ ಪಠಾಣಮಜ್ರಾ ಅವರನ್ನು ಕರ್ನಾಲ್‌ನಲ್ಲಿ ಬಂಧಿಸಿ ಸ್ಥಳೀಯ ಪೊಲೀಸ್




