Menu

ಅಕ್ಟೋಬರ್‌ನಲ್ಲಿ ರಾಜ್ಯದ ಬ್ಯಾಂಕ್‌ಗಳಿಗೆ 11 ದಿನ ರಜೆ

ಶನಿವಾರ ಮತ್ತು ಭಾನುವಾರದ ರಜೆ, ಪ್ರಾದೇಶಿಕ ರಜೆಗಳೂ ಸೇರಿ ಅಕ್ಟೋಬರ್‌ ತಿಂಗಳಲ್ಲಿ 21 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಪ್ರಾದೇಶಿಕ ರಜೆಗಳಲ್ಲಿ ಕೆಲವು ರಜೆ ಕೆಲವು ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ. ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ಗಳಿಗೆ ರಜೆ ಇದೆ. ಅಕ್ಟೋಬರ್ 1 ಬುಧವಾರ ಮಹಾನವಮಿ ದಿನ ಹೆಚ್ಚಿನ ಕಡೆ ರಜೆ. ಅಕ್ಟೋಬರ್ 2, ಗುರುವಾರ ಗಾಂಧಿ ಜಯಂತಿ, ವಿಜಯದಶಮಿ ಸಾರ್ವತ್ರಿಕ ರಜೆ, ಅಕ್ಟೋಬರ್ 3 ಶುಕ್ರವಾರ, ಅಕ್ಟೋಬರ್ 4 ಶನಿವಾರ:

ಔಷಧ ಆಮದು: 100% ಸುಂಕ ಘೋಷಿಸಿದ ಟ್ರಂಪ್‌, ಭಾರತದ ಆರ್ಥಿಕತೆ ಮೇಲೂ ಪರಿಣಾಮ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಔಷಧಗಳ ಆಮದಿನ ಮೇಲೆ ಶೇ.100 ಸುಂಕ ಘೋಷಿಸಿದ್ದು, ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಅಡುಗೆ ಮನೆ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಹೆವಿ ಟ್ರಕ್‌ಗಳ ಮೇಲೆ 25%

ತೆರಿಗೆ ಲೆಕ್ಕಪರಿಶೋಧನಾ ವರದಿ ಸಲ್ಲಿಕೆಗೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ

ಕೇಂದ್ರ ನೇರ ತೆರಿಗೆ ಮಂಡಳಿ (CBDT) ಮಹತ್ವದ ಪ್ರಕಟಣೆ ಹೊರಡಿಸಿದೆ. ತೆರಿಗೆ ಆಡಿಟ್ ವರದಿ ಸಲ್ಲಿಕೆಗೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು ಈಗ CBDT ಅಕ್ಟೋಬರ್ 31ರವರೆಗೆ ಗಡುವು ನೀಡಿದೆ. ತೆರಿಗೆ ಪಾವತಿದಾರರು ಹಾಗೂ ಚಾರ್ಟಡ್ ಅಕೌಂಟೆಂಟ್ಗಳು ಹಲವು ತಾಂತ್ರಿಕ ತೊಂದರೆಗಳನ್ನು

ತುಮಕೂರಿನಲ್ಲೂ ಕಾಡಿಯಾ ಗ್ಯಾಂಗ್ ಕಳ್ಳರ ಕಾಟ: ಆರು ಮಂದಿ ಅರೆಸ್ಟ್‌

ಬ್ಯಾಂಕ್‌ಗಳನ್ನೇ ಹಾಟ್ ಸ್ಪಾಟ್ ಆಗಿಸಿಕೊಂಡು ವೃದ್ಧರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ದೋಚುವ ಮಹಿಳೆಯರ ಗುಂಪು ತುಮಕೂರಿನಲ್ಲೂ ಕಾರ್ಯಾಚರಿಸುತ್ತಿದ್ದು, ಪೊಲೀಸರು ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಕಾಡಿಯೂ ಎಂಬ ಊರಿನ ಈ ಮಹಿಳಾ ಕಳವು ಗ್ಯಾಂಗ್‌ ಎಷ್ಟೇ ಜಾಗರೂಕರಾಗಿದ್ದರೂ ಜನರನ್ನು

ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಿ ಹೊತ್ತಿ ಉರಿಯುತ್ತಿದೆ ಲಡಾಖ್‌: ಹಿಂಸಾಚಾರಕ್ಕೆ ನಾಲ್ವರು ಬಲಿ

ಕೇಂದ್ರಾಡಳಿತ ಪ್ರದೇಶ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಸಂಘರ್ಷಕ್ಕೆ 4 ಜನ ಬಲಿಯಾಗಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವುದು ವರದಿಯಾಗಿದೆ. ಲಡಾಖ್ ಅಪೆಕ್ಸ್ ಬಾಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ

ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಮತ್ತೆ ಅಮೆರಿಕದಿಂದ ಭಾರತಕ್ಕೆ ಒತ್ತಾಯ

ಭಾರತದ ಜೊತೆಗೆ ಇಂಧನ, ವ್ಯಾಪಾರ ಸೇರಿದಂತೆ ದ್ವಿಪಕ್ಷೀಯ ಸಂಬಂಧ ವರ್ಧನೆ ಕುರಿತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರೊಂದೊಗೆ ಚರ್ಚಿಸಿದ್ದೇನೆ. ಆದರೆ ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ,

ಅಮೆರಿಕದ ದುಬಾರಿ ವೀಸಾಗೆ ಚೀನಾ ತಿರುಮಂತ್ರ

ಅಮೆರಿಕವು ಎಚ್೧ಬಿ ವೀಸಾಗೆ ದುಬಾರಿ ಶುಲ್ಕ ವಿಧಿಸಿದ ಬೆನ್ನಹಿಂದೆಯೇ ಈಗ ಚೀನಾ ಎಚ್ಚೆತ್ತುಕೊಂಡಿದೆ. ಭಾರತದ ಯುವಪ್ರತಿಭೆಗಳನ್ನು ಚಿವುಟಲೆಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಸಗಿರುವ ವೀಸಾ ಆಕ್ರಮಣಕ್ಕೆ ಚೀನಾ ಈಗ ಖಡಕ್ ತಿರುಗೇಟು ನೀಡಿರುವುದು ಗಮನಾರ್ಹ. ಮುಂದಿನ ತಿಂಗಳು ಒಂದರಿಂದಲೇ ಅನ್ವಯವಾಗುವಂತೆ

ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಸಹಾಯ ಮಾಡಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಮ್ ನಡೆದ ಭೀಕರ ದಾಳಿಯಲ್ಲಿ ಭಯೋದ್ಪಾದಕರಿಗೆ ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. “ಗುಪ್ತಚರ ಮಾಹಿತಿ ಆಧಾರದ ಮೇಲೆ ಶ್ರೀನಗರ ಪೊಲೀಸರು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಿಂದ ಒಬ್ಬ ಓವರ್‌

ಜನಾದೇಶ ಕದಿಯುವ ಪ್ರಜಾರಾಜ್ಯದ ಆತ್ಮ ಘಾಸಿಗೊಳಿಸುವ ವ್ಯವಸ್ಥೆಯಿಂದ ರಕ್ಷಣೆ ನೀಡಲು ಕಾಂಗ್ರೆಸ್‌ ಮಾತ್ರ ಶಕ್ತ: ಸಿಎಂ ಸಿದ್ದರಾಮಯ್ಯ

ಅನ್ಯಾಯದ ವಿರುದ್ಧ ಸದಾ ಎದ್ದುನಿಂತ ಪಾಟ್ನಾ ಭೂಮಿಯಲ್ಲಿ ಇಂದು ನಿಮ್ಮ ಮುಂದೆ ನಿಂತಿದ್ದೇನೆ. ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿರುವ ಸಂದರ್ಭದಲ್ಲಿ ಇಂದಿನ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಬಹಳ ಮಹತ್ವ ಪಡೆದಿದೆ. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮತ್ತು ನ್ಯಾಯವನ್ನು ಪ್ರಧಾನಿ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ಪ್ರಕರಣ

ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಆಶ್ರಮದ ನಿರ್ದೇಶಕ, ಸ್ವಯಂ ಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿಯ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಪ್ರಕರಣ ದಾಖಲಾಗಿದೆ. ಚೈತನ್ಯಾನಂದ ಸರಸ್ವತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅಲ್ಲಿ ಅಧ್ಯಾಪಕರು/ನಿರ್ವಾಹಕರಾಗಿ ಕೆಲಸ ಮಾಡುವ ಮಹಿಳೆಯರು ಒತ್ತಡ ಹೇರಿದ್ದಾರೆ