Menu

ಬೆಳಗಾವಿ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ವಾಪಸ್‌

ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಕಂಡಕ್ಟರ್ ಕನ್ನಡದಲ್ಲಿ ಹೇಳಿ ಎಂದ ಕಾರಣ ಮುಂದಿಟ್ಟುಕೊಂಡು ಹಲ್ಲೆ ನಡೆಸಿ ಬಳಿಕ ಪೋಕ್ಸೋ ಕೇಸ್ ದಾಖಲಿಸಿದ್ದ ದೂರುದಾರೆ ಕೇಸ್‌ ವಾಪಸ್‌ ಪಡೆದಿದ್ದಾರೆ. ಪೋಕ್ಸೋ ಕೇಸ್ ದಾಖಲು ಮಾಡಿದ್ದ ಸಂತ್ರಸ್ತೆಯ ತಾಯಿ ಈ ಕುರಿತು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಾವೂ ಸಹ ಕನ್ನಡಿಗರೇ ಆಗಿದ್ದೇವೆ. ಈ ಜಗಳವನ್ನು ಕನ್ನಡ, ಮರಾಠಿ ಜಗಳ ಮಾಡಲಾಗುತ್ತಿದೆ. ನಾವೂ ಸಹ ಕನ್ನಡಿಗರು. ಇದನ್ನು ಬೆಳೆಸಬೇಡಿ ಎಂದು ಮನವಿ ಮಾಡಿದ್ದಾರೆ. ಕರ್ನಾಟಕದ ಬಸ್

ಗೆಳತಿ ಸೇರಿ ಕುಟುಂಬದ ಐವರನ್ನು ಕೊಲೆಗೈದು ವಿಷ ಸೇವಿಸಿದ ಯುವಕ

ಕೇರಳದ ತಿರುವನಂತಪುರದಲ್ಲಿ ಯುವಕನೊಬ್ಬ ತನ್ನ ಕುಟುಂಬ ಸದಸ್ಯರು ಹಾಗೂ ಪ್ರೇಯಸಿ ಸೇರಿದಂತೆ ಐವರನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 23 ವರ್ಷದ ಆರೋಪಿ ಪೆರುಮಾಳದ ನಿವಾಸಿ ಅಫಾನ್ ಪೊಲೀಸರಿಗೆ ಶರಣಾಗಿ ಐವರು ಕುಟುಂಬ ಸದಸ್ಯರು ಮತ್ತು ಗೆಳತಿ ಸೇರಿದಂತೆ ಐದು ಜನರನ್ನು

ಕೇಣಿ ಗ್ರೀನ್‌ ಫೀಲ್ಡ್‌ ಬಂದರು ವಿರೋಧಿಸಿ ನಾಗರಿಕರ ಪ್ರತಿಭಟನೆ ತೀವ್ರ, ನಿಷೇಧಾಜ್ಞೆ ಜಾರಿ

ಕೇಣಿ ಗ್ರೀನ್‌ ಫೀಲ್ಡ್‌ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರ ವಿರೋಧ ತೀವ್ರಗೊಂಡಿದ್ದು, ಕೇಣಿ ಗ್ರಾಮದಲ್ಲಿ ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ನಾಗರಿಕರ ವಿರೋಧದ ನಡುವೆಯೂ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿ ಪ್ರದೇಶದ ಭೌಗೋಳಿಕ ತಾಂತ್ರಿಕ ಅಧ್ಯಯನ ಕಾಮಗಾರಿಗಾಗಿ ಗುತ್ತಿಗೆ ಕಂಪನಿ ಮುಂದಾಗಿದೆ.

ಶ್ರೀಲಂಕಾ ನೌಕಾಪಡೆಯಿಂದ 32 ಭಾರತೀಯ ಮೀನುಗಾರರ ಬಂಧನ

ಚೆನ್ನೈ: ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ದಾಟಿದ ಆರೋಪದ ಮೇಲೆ ರಾಮೇಶ್ವರದ 32 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಭಾನುವಾರ ಮುಂಜಾನೆ ಈ ಬೆಳವಣಿಗೆ ನಡೆದಿದ್ದು, ಐದು ದುಬಾರಿ ಯಾಂತ್ರೀಕೃತ ದೋಣಿಗಳನ್ನು ಕೂಡ ಶ್ರೀಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೀನುಗಾರರನ್ನು ಹೆಚ್ಚಿನ

ಕುಂಭಮೇಳಕ್ಕೆ ಕರೆದೊಯ್ದು ಪತ್ನಿ ಕತ್ತು ಸೀಳಿ ಹತ್ಯೆಗೈದ ಪತಿ!

ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪತ್ನಿಯನ್ನು ಕರೆದೊಯ್ದ ಪತ್ನಿ ಆಕೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯ ತ್ರಿಲೋಕ್ ಪುರಿ ನಿವಾಸಿ ಅಶೋಕ್ ಕುಮಾರ್ ಪತ್ನಿ ಮೀನಾಕ್ಷಿಯನ್ನು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕುಂಭಮೇಳಕ್ಕೆ ಕರೆದೊಯ್ಯುವುದಾಗಿ ಕರೆದುಕೊಂಡು

ಕುಂಭಮೇಳದಲ್ಲಿ ಕೊನೆಯ ವಾರ ಹೆಚ್ಚಿದ ಜನದಟ್ಟಣೆ: 25 ಕಿ.ಮೀ. ಟ್ರಾಫಿಕ್ ಜಾಮ್!

ಕುಂಭಮೇಳ ಕೊನೆಯ ವಾರಕ್ಕೆ ಕಾಲಿಟ್ಟಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭಾನುವಾರ ಮುಂಜಾನೆ ಸುಮಾರು 25 ಕಿ.ಮೀ. ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಾಕುಂಭ ಮೇಳ ಫೆಬ್ರವರಿ 26ರಂದು ಅಂತ್ಯಗೊಳ್ಳಲಿದ್ದು, ಅಂದು

ಭಾರತದ ಚುನಾವಣೆಗೆ ಅಮೆರಿಕ ಹಣ ನೀಡಿಲ್ಲ, ಯೋಜನೆಗಳಿಗೆ ಅನುದಾನ ನೀಡಿದೆ: ವಿತ್ತ ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಅವರಿಗೆ 180 ಕೋಟಿ ರೂ. ಚುನಾವಣಾ ಅನುದಾನವನ್ನು ಅಮೆರಿಕ ನೀಡಿತ್ತು, ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಅಮೆರಿಕ ʻಯುಎಸ್‌ಏಡ್‌ʼ ಮೂಲಕ ನೀಡಿದೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಭಾರತದ ಹಣಕಾಸು

ಸ್ನೇಹಿತರ ಜತೆಗೂಡಿ ಮಾಜಿ ಗೆಳತಿ ಮೇಲೆ ಗ್ಯಾಂಗ್‌ ರೇಪ್‌

ಸ್ನೇಹಿತರೊಂದಿಗೆ ಸೇರಿ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರ ಭಿವಂಡಿಯಲ್ಲಿ ನಡೆದಿದೆ. ಈಗ ಗೆಳತಿ ಬೇರೊಬ್ಬನ ಜತೆ ಸಂಬಂಧದಲ್ಲಿದ್ದಾಳೆಂದು ತಿಳಿದು ಮಾಜಿ ಪ್ರಿಯಕರ ಮೃಗೀಯವಾಗಿ ವರ್ತಿಸಿದ್ದು, ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕ್ರೂರಿಗಳು ಬೆಳಗ್ಗೆ

ತಾವರೆಕೆರೆಯ ಶಿಲಾಮಠಕ್ಕೆ ರೋಬೋಟಿಕ್​ ಆನೆ ನೀಡಿದ ನಟ ಸುನಿಲ್‌ ಶೆಟ್ಟಿ

ದಾವಣಗೆರೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರೋಬೋಟಿಕ್​ ಆನೆಯೊಂದನ್ನು ಕಳಿಸಿಕೊಟ್ಟಿದ್ದಾರೆ. ಭಾನುವಾರ ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿ ಸೇರಿದಂತೆ ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ

ಕುಂಭಮೇಳಕ್ಕೆ ತೆರಳುತ್ತಿದ್ದ ಗೋಕಾಕ್‌ನ ಏಳು ಮಂದಿ ಅಪಘಾತಕ್ಕೆ ಬಲಿ

ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಗೋಕಾಕ್‌ನ ಏಳು ಮಂದಿ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಈ ದುರಂತ ಸಂಭವಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ,