ದೇಶ-ವಿದೇಶ
ಸೇನಾ ಕಾರ್ಯಾಚರಣೆ ಬೆದರಿಕೆ ಬಳಿಕ ಮಾತುಕತೆಗೆ ಇರಾನ್ ಮನವಿ: ಟ್ರಂಪ್
ಇರಾನ್‌ನಲ್ಲಿ ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಹಿಂಸಾರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ವಿರುದ್ಧ ದಾಳಿ ಮಾಡಿದರೆ ಸೇನಾ ಕಾರ್ಯಾಚರಣೆ ಮೂಲಕ ಮಧ್ಯಪ್ರವೇಶಿಸುವುದಾಗಿ ಬೆದರಿಕೆ ಹಾಕಿದ ಬಳಿಕ ಇರಾನ್ ಮಾತುಕತೆಗೆ ಮನವಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇರಾನ್‌ನಲ್ಲಿ ಹಣದುಬ್ಬರ, ಜೀವನ ವೆಚ್ಚ ಏರಿಕೆ ವಿರೋಧಿಸಿ ನಡೆಯುತ್ತಿರುವ ನಾಗರಿಕರ ಪ್ರತಿಭಟನೆಯು ತೀವ್ರಗೊಂಡು ಹತ್ಯಾಕಾಂಡವಾಗಿ ಬದಲಾಗುತ್ತಿದೆ ಎಂದು ಮಾನವಹಕ್ಕು ಸಂಘಟನೆಗಳು ಎಚ್ಚರಿಸಿವೆ. ಪ್ರತಿಭಟನೆ ದಮನಿಸಲು ಸರ್ಕಾರ ಇಂಟರ್ನೆಟ್ ಸೇವೆ
16 ಉಪಗ್ರಹ ಹೊತ್ತು ಹೊರಟಿದ್ದ PSLV-C62ನಲ್ಲಿ ತಾಂತ್ರಿಕ ದೋಷ, ಪಥ ಬದಲು: ಇಸ್ರೊ
ಆಂಧ್ರಪ್ರದೇಶದ ಶ್ರೀಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ PSLV-C62 ರಾಕೆಟ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಪಥ ಬದಲಾಯಿಸಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ಡಿಆರ್‌ಡಿಒ ನಿರ್ಮಿತ ಅನ್ವೇಷ ಹೆಸರಿನ ಭೂ ವೀಕ್ಷಣಾ ಉಪಗ್ರಹ (EOS-N) ಮತ್ತು
‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ತಾನೆಂದು ಹೇಳಿಕೊಂಡ ಟ್ರಂಪ್
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನನ್ನು ತಾನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಹೀಗೆಂದು ಟ್ರಂಪ್ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರಂಪ್
ಇರಾನ್‌ನಲ್ಲಿ ಮುಂದುವರಿದ ಪ್ರತಿಭಟನೆ: ಹಿಂಸಾಚಾರಕ್ಕೆ ಬಲಿಯಾದವ ಸಂಖ್ಯೆ 116
ಇರಾನ್ ಸರ್ಕಾರದ ವಿರುದ್ಧ ಅಲ್ಲಿನ ನಾಗರಿಕರ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭವಾಗಿ 15 ದಿನಗಳಾಗಿದ್ದು, ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ. ಇಂಟರ್ನೆಟ್ ಸ್ಥಗಿತಗೊಂಡಿದ್ದು, ಫೋನ್ ಸಂಪರ್ಕಗಳು ಕಡಿತಗೊಂಡಿವೆ. 2,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ
ಬೆಂಗಳೂರಿನ ಮೇಜರ್ ಸ್ವಾತಿ ಶಾಂತಕುಮಾರ್‌ಗೆ ಯುಎನ್ ಸೆಕ್ರಟರಿ ಜನರಲ್ ಪ್ರಶಸ್ತಿ
ದಕ್ಷಿಣ ಸೂಡಾನ್‌ನಲ್ಲಿ ನಡೆಯುತ್ತಿರುವ ಯುಎನ್ ಮಿಷನ್‌ನಲ್ಲಿ ಉತ್ತಮ ಸೇವೆ ಸಲ್ಲಿಸಿದ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಪ್ರಶಸ್ತಿ ಒಲಿದು ಬಂದಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಬೆಂಗಳೂರಿನ ಭಾರತೀಯ ಸೇನಾಧಿಕಾರಿ ಮೇಜರ್
ವಿಚ್ಚೇದಿತ ಮಹಿಳೆಗೆ ಬಾಳು ಕೊಡ್ತೀನಿ ಅಂತ ಮಗು ಕೊಟ್ಟು, 36 ಲಕ್ಷ ರೂ. ವಂಚನೆ!
ವಿಚ್ಚೇದಿತ ಮಹಿಳೆಗೆ ಬಾಳು ಕೊಡುವುದಾಗಿ ನಂಬಿಸಿದ ಯುವಕನೊಬ್ಬ ಆಕೆಗೆ ಮಗು ಕರುಣಿಸಿದ್ದೂ ಅಲ್ಲದೇ 36 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬನಶಂಕರಿಯ ನಿವಾಸಿ ಮೋಹನ್ ರಾಜ್ ಎಂಬಾತನ ವಂಚನೆ ವಿರುದ್ಧದ ಬನಶಂಕರಿ ಪೊಲೀಸ್ ಠಾಣೆಗೆ ದೂರು
ಶಬರಿಮಲೆ ಪ್ರಧಾನ ಅರ್ಚಕ ಅರೆಸ್ಟ್: ನ್ಯಾಯಾಂಗ ಬಂಧನಕ್ಕೆ ಆದೇಶ
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಪ್ರಧಾನ ಅರ್ಚಕ ತಂತ್ರಿ ಕಂದರಾರು ರಾಜೀವ್ ಅವರನ್ನು ಎಸ್ ಐಟಿ ಪೊಲೀಸರು ಬಂಧಿಸಿದ್ದಾರೆ. ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ತಂತ್ರಿ ರಾಜೀವ್ ಅವರನ್ನು ಶುಕ್ರವಾರ ಮುಂಜಾನೆ ವಶಕ್ಕೆ ಪಡೆದು ಗೌಪ್ಯ ಜಾಗದಲ್ಲಿ
ರಷ್ಯಾದಿಂದ ಉಕ್ರೇನ್ ಮೇಲೆ ಶಬ್ಧಕ್ಕಿಂತ 10 ಪಟ್ಟು ವೇಗದ ಹೈಪರ್ ಸಾನಿಕ್ ಕ್ಷಿಪಣಿ ದಾಳಿ!
ಉಕ್ರೇನ್ ಮೇಲೆ ಇದೇ ಮೊದಲ ಬಾರಿ ರಷ್ಯಾ ಶಬ್ದಕ್ಕಿಂತ 10 ಪಟ್ಟು ವೇಗದ ಹೈಪರ್ ಸಾನಿಕ್ ಓರ್ಶೊನಿಕ್ ಕ್ಷಿಪಣಿ ದಾಳಿ ನಡೆಸಿದೆ. ಶುಕ್ರವಾರ ರಾತ್ರಿ ರಷ್ಯಾ ಡ್ರೋಣ್ ಹಾಗೂ ಡ್ರೋಣ್ ಮೂಲಕ ಕ್ಷಿಪಣಿಗಳ ದಾಳಿ ನಡೆಸಿದೆ. ಕೀವ್ ನಲ್ಲಿ ದಾಳಿಯಲ್ಲಿ ಕನಿಷ್ಠ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇಂದಿನಿಂದ ಆನ್‌ಲೈನ್‌ನಲ್ಲೇ ಟಿಕೆಟ್
ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಟಿಕೆಟ್‌ಗಳ ಆಫ್‌ಲೈನ್ ಮಾರಾಟ ನಿಲ್ಲಿಸಲಾಗುವುದು, ಇಂದಿನಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಟಿಟಿಡಿ ತಿಳಿಸಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಬುಕಿಂಗ್ ಮಾಡಬಹುದು. ಈ ವ್ಯವಸ್ಥೆಯು 1 ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ. ಈ
ರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆ: ಜೀವವುಳಿಸಿದ ಡೆಲಿವರಿ ಬಾಯ್
ತಮಿಳುನಾಡಿನಲ್ಲಿ ರಾತ್ರಿ ಮಹಿಳೆಯೊಬ್ಬರು ಇಲಿ ಪಾಷಾಣ ಆರ್ಡರ್ ಮಾಡಿದ್ದು, ಡೆಲಿವರಿ ಬಾಯ್‌ಗೆ ಮಹಿಳೆ ಸಂಕಷ್ಟದಲ್ಲಿದ್ದಾಳೆಂದು ಅರಿವಾಗಿ ಸಮಯ ಪ್ರಜ್ಞೆಯಿಂದ ಆಕೆಯ ಜೀವವುಳಿಸಿದ್ದಾನೆ. ಬಳಿಕ ಆತ ವೀಡಿಯೊ ಮಡಿ ಈ ವಿಷಯ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿಆತನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.




