ದೇಶ-ವಿದೇಶ
ಪರೀಕ್ಷಾರ್ಥ ಸಂಚಾರ ವೇಳೆ ಮೋನೋ ರೈಲು ಅಪಘಾತ: ಮುವರು ಸಿಬ್ಬಂದಿಗೆ ಗಾಯ
ಪರೀಕ್ಷಾರ್ಥ ಸಂಚಾರದ ವೇಳೆ ಮೋನೋ ರೈಲು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕ್ಯಾಪ್ಟನ್ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡ ಘಟನೆ ಮುಂಬೈನಲ್ಲಿ ಬುಧವಾರ ಸಂಭವಿಸಿದೆ. ಮಹಾ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೋನೋ ರೈಲು ಸಂಚಾರ ಪರೀಕ್ಷೆ ನಡೆಸಿತ್ತು. ಈ ವೇಳೆ ಮೋನೋ ರೈಲು ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದ ಮೇಲಿಂದ ಕೆಳಗೆ ಬೀಳುವ ದುರಂತ ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.
ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ: ಗುಜರಾತ್ನ ಮಹಿಳಾ ಟೆಕ್ಕಿ ಅರೆಸ್ಟ್
ಬೆಂಗಳೂರು ನಗರದ ಹಲವು ಶಾಲೆಗಳು ಮತ್ತು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಒಡ್ಡಿದ್ದ ಕಿಂಗ್ಪಿನ್ ಲೇಡಿ, ಮಹಿಳಾ ಟೆಕ್ಕಿಯನ್ನು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗುಜರಾತ್ ಮೂಲದ ಸಾಫ್ಟ್ವೇರ್ ಇಂಜಿನಿಯರ್ ರೆನೆ ಜೋಶಿಲ್ಡಾ ಎಂದು ಪೊಲೀಸರು ತಿಳಿಸಿದ್ದಾರೆ.
ನೀರಾವರಿ ಯೋಜನೆಗಳ ಬಗ್ಗೆ ಬಾಯಿ ಬಿಡದ ರಾಜ್ಯ ಬಿಜೆಪಿ ಸಂಸದರು: ಡಿಸಿಎಂ ಕಿಡಿ
ನೀರಾವರಿ ಯೋಜನೆಗಳ ಬಗ್ಗೆ ಒಂದು ದಿನವೂ ರಾಜ್ಯ ಬಿಜೆಪಿ ಸಂಸದರು ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ನಮ್ಮ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಹಿತಕ್ಕಾಗಿ ಧೈರ್ಯವಾಗಿ ಹೋರಾಟ ಮಾಡದಿದ್ದರೆ, ಅವರು ನಮಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ
ಹರಿಯಾಣದಲ್ಲಿ 25 ಲಕ್ಷ ಮತಗಳವು: ರಾಹುಲ್ ಗಾಂಧಿ ಹೊಸ ಬಾಂಬ್
ಕೇಂದ್ರ ಚುನಾವಣಾ ಆಯೋಗ ವಿರುದ್ಧ ಮತಗಳವು ಎಂಬ ಹೈಡ್ರೋಜನ್ ಬಾಂಬ್ ಗಳ ಮೇಲೆ ಬಾಂಬ್ ಹಾಕುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಹಾರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಹೊಸ ಬಾಂಬ್ ಹಾಕಿದ್ದಾರೆ. ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ
ಅಂತಾರಾಷ್ಟ್ರೀಯ ಪೋರ್ನ್ ವೆಬ್ಸೈಟ್ಗಳಲ್ಲಿ ಗುಜರಾತ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ದೃಶ್ಯಗಳು
ಗುಜರಾತ್ನ ಒಂದು ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಅಂತಾರಾಷ್ಟ್ರೀಯ ಪೋರ್ನ್ ವೆಬ್ಸೈಟ್ಗಳಲ್ಲಿ ಬಹಿರಂಗಗೊಂಡಿವೆ. ಈ ಮೂಲಕ ಮಹಿಳೆಯರ ಖಾಸಗಿ ಗೌಪ್ಯತೆಯ ಗಂಭೀರ ಉಲ್ಲಂಘನೆ ನಡೆದಿದ್ದು, ದುರ್ಬಲ ಪಾಸ್ವರ್ಡ್ಗಳೇ ಈ ಅನಾಹುತಕ್ಕೆ ಮುಖ್ಯ ಕಾರಣವೆಂದು ತನಿಖೆಯಲ್ಲಿ ತಿಳಿದುಬಂದಿದೆ. ಹ್ಯಾಕರ್ಗಳು
ಹಳಿ ದಾಟುತ್ತಿದ್ದವರ ಮೇಲೆ ಹರಿದ ರೈಲು: 6 ಮಂದಿ ದುರ್ಮರಣ
ಮಿರ್ಜಾಪುರ: ರೈಲ್ವೆ ಹಳಿ ದಾಟುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ರೈಲು ಹಳಿ ದಾಟುವಾಗ ಏಕಾಏಕಿ
ಬಿಹಾರದಲ್ಲಿ ನಾಳೆ ಮತದಾನ: ಜೆಡಿಯು ನಾಯಕ ಕುಶ್ವಾಹ ಮನೆಯಲ್ಲಿ ಮೂರು ಸಾವು
ಜೆಡಿಯು ನಾಯಕ ನಿರಂಜನ್ ಕುಶ್ವಾಹ ಅವರ ಮನೆಯಲ್ಲಿ ಕುಟುಂಬದ ಮೂವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ, ಬಿಹಾರದಲ್ಲಿ ಮತದಾನಕ್ಕೆ ಒಂದು ದಿನ ಬಾಕಿಯಿರುವಾಗ ಜೆಡಿಯು ನಾಯಕನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೂವರು ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ನಿರಂಜನ್ ಅವರ ಹಿರಿಯ ಸಹೋದರ
ಬಿಹಾರದಲ್ಲಿ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು: ಡಿಕೆ ಶಿವಕುಮಾರ್
“ಬಿಹಾರದಲ್ಲಿ ಬದಲಾವಣೆ ತರಲು ಮಹಾಘಟಬಂಧನಕ್ಕೆ ಮತ ಹಾಕಿ, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು ಎಂದು ಮತದಾರರಿಗೆ ಮನವಿ ಮಾಡಿದ್ದೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಕಾರ್ಯಕ್ರಮ ನಡೆದ ಖಾಸಗಿ ಹೊಟೇಲ್ ಬಳಿ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ
ಛತ್ತೀಸಗಡ್ ನಲ್ಲಿ ಪ್ಯಾಸೆಂಜರ್- ಗೂಡ್ಸ್ ರೈಲುಗಳ ಡಿಕ್ಕಿ: 6 ಮಂದಿ ಸಾವು
ಬಿಲಾಸ್ಪೂರ್: ಪ್ರಯಾಣಿಕ ರೈಲು ಮತ್ತು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 6 ಪ್ರಯಾಣಿಕರು ಮೃತಪಟ್ಟ ಭೀಕರ ಘಟನೆ ಛತ್ತೀಸ್ಗಢದ ಬಿಲಾಸ್ಪುರದ ಲಾಲ್ಖಾದನ್ನಲ್ಲಿ ಮಂಗಳವಾರ ಸಂಭವಿಸಿದೆ. ಕೊರ್ಬಾ ಪ್ಯಾಸೆಂಜರ್ ರೈಲು ಮತ್ತು ಸರಕು ಸಾಗಣೆ ರೈಲಿನ ಮಧ್ಯೆ ಮುಖಾಮುಖಿ ಡಿಕ್ಕಿ
ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೊದಲಿಗನಾಗದು: ಟ್ರಂಪ್ಗೆ ಪ್ರತ್ಯುತ್ತರ
ಅಮೆರಿಕ 30 ವರ್ಷಗಳ ಬಳಿಕ ಪರಮಾಣು ಪರೀಕ್ಷೆ ನಡೆಸಲು ಮುಂದಾಗಿದ್ದು, ಈ ಸಂಬಂಧ ಆ ರಾಷ್ಟ್ರದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಪರಮಾಣು ಪರೀಕ್ಷೆಗಳನ್ನು ನಡೆಸಿದ ಮೊದಲಿಗ ಅಲ್ಲ, ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಮೊದಲಿಗ ಆಗುವುದಿಲ್ಲ




