ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ ಅನ್ನು ನವೀಕರಣಕ್ಕಾಗಿ ಏಪ್ರಿಲ್‌ನಿಂದ ಆರು ತಿಂಗಳವರೆಗೆ ಮುಚ್ಚಲಾಗುವುದು ಎಂದು ದೆಹಲಿ ಇಂಟರ್ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣವು ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದ್ದು, ಮೂರು ಟರ್ಮಿನಲ್‌ಗಳನ್ನು ಹೊಂದಿದೆ. ಪ್ರಸ್ತುತ ಟರ್ಮಿನಲ್ ೧ ಮತ್ತು ೨ ಅನ್ನು ದೇಶೀಯ ವಿಮಾನಯಾನಕ್ಕೆ ಬಳಸಲಾಗುತ್ತಿದೆ.
ನವೀಕರಣ ಕಾರ್ಯಗಳಿಗಾಗಿ ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್ ೨ ಏಪ್ರಿಲ್ನಿಂದ ನಾಲ್ಕರಿಂದ ಆರು ತಿಂಗಳುಗಳವರೆಗೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ನವೀಕರಣ ಕಾರ್ಯಗಳು ಸೆಪ್ಟೆಂಬರ್ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಪ್ರಕಟಣೆ ತಿಳಿಸಿದೆ.
ಈ ಕುರಿತು ಮಾತನಾಡಿದ ದಿಲ್ಲಿ ವಿಮಾಣ ನಿಲ್ದಾಣ ಪ್ರಾಧಿಕಾರದ ಸಿಇಒ ವಿದೇಹ್ ಕುಮಾರ್ ಜೈಪುರಿಯಾರ್ ಅವರು ನಾಲ್ಕು ದಶಕಗಳಷ್ಟು ಹಳೆಯದಾದ ಟರ್ಮಿನಲ್ ೨ ನವೀಕರಿಸುವುದು ಇಂದಿನ ಅಗತ್ಯವಾಗಿದೆ ಎಂದಿದ್ದಾರೆ.
ಪ್ರಮುಖ ಮೂಲಸೌಕರ್ಯಗಳ ನವೀಕರಣ, ಕಾರ್ಯಾಚರಣೆಯ ದಕ್ಷತೆ ಸುಧಾರಣೆ ಮತ್ತು ಪ್ರಯಾಣಿಕರ ಸೌಕರ್ಯ ಹೆಚ್ಚಿಸುವ ಮೂಲಕ ಒಟ್ಟಾರೆ ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಆದತ್ಯೆ ನೀಡಲಾಗುವುದು ಎಂದವರು ಹೇಳಿದ್ದಾರೆ.