ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಹನುಮ ಜನ್ಮಸ್ಥಳ ಅಂಜನಾದ್ರಿಯಲ್ಲಿ ಸಹಸ್ರಾರು ಹನುಮ ಮಾಲಾಧಾರಿಗಳು ಸರತಿ ಸಾಲಿನಲ್ಲಿ ನಿಂತು ಶ್ರೀ ರಾಮ ಜಯರಾಂ, ಪವನಸುತ ಆಂಜನೇಯ ಜಯ ಘೋಷಗಳೊಂದಿಗೆ ಹನುಮ ನಾಮವನ್ನು ಜಪಿಸುತ್ತಆಂಜನೇಯಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅಂಜನಾದ್ರಿ, ಹನುಮಭಕ್ತರ ಆರಾಧ್ಯ ತಾಣವಾಗಿದೆ. ಹನುಮಮಾಲೆ ಧರಿಸುವವರ ಸಂಖ್ಯೆ ವರ್ಷದಿಂದ ವರ್ಷದಿಂದ ಹೆಚ್ಚುತ್ತಿದ್ದು, ಭಕ್ತರ ಸ್ನಾನ, ಶೌಚಕ್ಕೆ, ವಸತಿ, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕೊಪ್ಪಳ ಜಿಲ್ಲಾಡಳಿತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ.
ಮಾಲಾಧಾರಿಗಳಿಗೆ ದರ್ಶನದ ನಂತರ ವೇದ ಪಾಠಶಾಲೆಯಲ್ಲಿ ಗೋಧಿ ಹುಗ್ಗಿ. ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು. ಹನುಮಮಾಲ ಭಕ್ತಾದಿಗಳಿಗೆ ತೊಂದರೆಯಾಗದಂತೆ ಹೆಚ್ಚಿನ ಊಟದ ಕೌಂಟರಗಳನ್ನು ತೆರೆಯಲಾಗಿರುತ್ತದೆ. ಬೆಟ್ಟದ ಮೆಟ್ಟಿಲುಗಳ ಮಧ್ಯಭಾಗದಲ್ಲಿ ಭಕ್ತಾದಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಮುಂಜಾಗ್ರತೆಯಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ. ವಿವಿಧ ಕಡೆಯಿಂದ ಅಂಜನಾದ್ರಿಗೆ ಬರುವ ವಾಹನಗಳಿಗೆ ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ.


