ನೆಲಮಂಗಲದಲ್ಲಿರುವ ಉಡುಪಿ ಹೋಟೆಲ್ ಬಾಣಸಿಗ ಮೇಲ್ಭಾಗದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಛತ್ತೀಸ್ಗಢದ ಆಶಿಶ್ ಕುಮಾರ್(43) ಆತ್ಮಹತ್ಯೆ ಮಾಡಿಕೊಂಡವರು. ಅವರು ಹೋಟೆಲ್ ನ್ಲಿ ಕಳೆದೊಂದು ವರ್ಷದಿಂದ ಚೈನೀಸ್ ಫಾಸ್ಟ್ ಫುಡ್ ಮಾಡುತ್ತಿದ್ದರು.
ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದು ಬಂದಿಲ್ಲ, ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತೋಟದ ಮನೆಯಲ್ಲಿ ಮಹಿಳೆಯ ಕೊಲೆ
ತುಮಕೂರಿನ ಗುಬ್ಬಿ ಹಿಂಡಸಗೆರೆ ಗ್ರಾಮದ ತೋಟದ ಮನೆಯಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಮಂಜುಳಾ ಕೊಲೆಯದ ಮಹಿಳೆ.
ಪತಿ ನಿಧನದನಂತರ ಮಂಜುಳಾ ಮಗನ ಜೊತೆ ತೋಟದ ಮನೆಯಲ್ಲಿ ವಾಸವಿದ್ದರು. ಮಗ ಪತ್ನಿ ಮನೆಗೆ ಹೋಗಿದ್ದಾಗ ದುಷ್ಕರ್ಮಿಗಳು ತೋಟದ ಮನೆಯೊಳಗೆ ನುಗ್ಗಿ ಮಂಜುಳಾರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮಂಜುಳಾ ಅವರ ಮೈದುನ ತೆರಳಿದಾಗ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿದೆ. ಸ್ಥಳಕ್ಕೆ ಎಸ್.ಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.


