ಬೀದರ್
ವಿಜಯಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೂರು ಮಕ್ಕಳ ಸಾವು
ವಿಜಯಪುರ ಮಿಂಚನಾಳ ತಾಂಡಾದ ಮಹದೇವ ನಗರದಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಶಿವಮ್ಮ ರಾಜು ರಾಠೋಡ್ (8), ಕಾರ್ತಿಕ ವಿಶ್ವ ರಾಠೋಡ್ (7) ಹಾಗೂ ಸ್ವಪ್ನಾ ರಾಜು ರಾಠೋಡ್ (12) ಮೃತ ಮಕ್ಕಳು. ಈ ದಾರುಣ ಘಟನೆಯಲ್ಲಿ ಕಂದಮ್ಮಗಳನ್ನು ಕಳೆದುಕೊಂಡಿರುವ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಮಹದೇವ ನಗರದ ಬಳಿಯ ರಾಠೋಡ್ ಎಂಬವರ ಜಮೀನಿನಲ್ಲಿ ಈ ಮಕ್ಕಳು ಕುರಿಗಳ ಜೊತೆಗೆ ಆಟವಾಡುತ್ತಿದ್ದರು. ಕುರಿಗಳ ಜೊತೆ
ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ: ಸಂತೋಷ್ ಲಾಡ್
ಅಸಂಘಟಿತ ವಲಯದ ಕಾರ್ಮಿಕರು ಈ ರಾಜ್ಯದ ಬಹು ದೊಡ್ಡ ಆಸ್ತಿ ಎಂದು ಕಾರ್ಮಿಕ ಸಚಿವ ಸಂತೋಷ ಎಸ್ ಲಾಡ್ ಹೇಳಿದರು. ಬೀದರ್ ನಗರದ ಘಾಳೆ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ
ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು: ಮುಖ್ಯಮಂತ್ರಿ
ಜನರಲ್ಲಿ ಪರಸ್ಪರ ಪ್ರೀತಿಯಿರಬೇಕು. ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ
ಹಳೆ ವೈಷಮ್ಯ ಶಂಕೆ: ವಿಜಯಪುರದಲ್ಲಿ ಜೋಡಿ ಕೊಲೆ
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಕೊಲೆಯಾದವರು, ಅಪರಿಚಿತರಿಂದ ಕೊಲೆಯಾಗಿರುವುದಾಗಿ ಹೇಳಲಾಗಿದೆ. ಹತ್ಯೆ ಬಳಿಕ ಕೊಲೆಗಟುಕರು ಪರಾರಿಯಾಗಿದ್ದು, ಹಳೆಯ ವೈಷಮ್ಯದಿಂದ ಹಲ್ಲೆ
ಬಸವಕಲ್ಯಾಣದಲ್ಲಿ ಆಟವಾಡುತ್ತಿದ್ದ ಮಗು ಬಾವಿಗೆ ಬಿದ್ದು ಸಾವು
ಬೀದರ್‌ನ ಬಸವಕಲ್ಯಾಣ ಪಟ್ಟಣದ ಈಶ್ವರ ಕಾಲೊನಿಯಲ್ಲಿ ಆಟ ಆಡುವಾಗ ಬಾವಿಗೆ ಬಿದ್ದು ಆರು ವರ್ಷದ ಮಗು ಮೃತಪಟ್ಟಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಶೇಖ್ ನುಸ್ತಕಿಮ್ ಅಕ್ಬರಲಿ ಎಂಬ ಮಗು ಅಸು
ಬೀಳಗಿಯಲ್ಲಿ ಕಾರು ಟಂಟಂ ಡಿಕ್ಕಿ: ಇಬ್ಬರ ಸಾವು
ಬಾಗಲಕೋಟೆ ಜಿಲ್ಲೆಯ ಬೀಳಗಿ ಅನಗವಾಡಿ ಬ್ರಿಡ್ಜ್ ಬಳಿ ಕಾರು ಮತ್ತು ಟಂಟಂ ವಾಹನ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹೇಶ್ ನಾಯ್ಕರ್ (27) ಮತ್ತು ಮೆಹಬೂಬ್ ಶೇಖ್ (30) ಮೃತಪಟ್ಟವರು. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಪೊಲೀಸರು
ಮಳೆಯಿಂದ ಭಾರಿ ಹಾನಿ ವಿಶೇಷ ಪ್ಯಾಕೇಜ್‌ಗಾಗಿ ಸಿಎಂ ಸಿದ್ದರಾಮಯ್ಯಗೆ ಈಶ್ವರ ಖಂಡ್ರೆ ಮನವಿ
ಬೀದರ್‌ನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಾರಿ ಪ್ರಮಾಣದ ಬೆಳೆ, ಮನೆ ಹಾನಿಯ ಜೊತೆಗೆ ಮೂಲಸೌಕರ್ಯಕ್ಕೂ ಹಾನಿ ಆಗಿದ್ದು, ವೈಮಾನಿಕ ಸಮೀಕ್ಷೆ ನಡೆಸಿ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವಿ
ಹಿರಿಯೂರಲ್ಲಿ ಗಂಡನ ಕೊಲೆಗೈದು ಪ್ರಿಯಕರನೊಂದಿಗೆ ಸೇರಿ ಮಣ್ಣಲ್ಲಿ ಹೂತಿಟ್ಟ ಪತ್ನಿ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಪತ್ನಿ ಮಣ್ಣಿನಲ್ಲಿ ಹೂತಿಟ್ಟ ಪ್ರಕರಣ ಬಯಲಾಗಿದೆ. ಗಂಡನ ತಲೆಗೆ ರಾಡ್ ನಿಂದ ಹೊಡೆದು ಪತ್ನಿ ಕೊಲೆ ಮಾಡಿಸಿ ಮಣ್ಣಲ್ಲಿ ಹೂತಿಟ್ಟು ನಾಪತ್ತೆ ಪ್ರಕರಣ
ತಾಳಿಕೋಟಿ ಡೋಣಿ ಸೇತುವೆ ಜಲಾವೃತ: ಬೈಕ್ ಸವಾರ ನೀರುಪಾಲು
ತಾಳಿಕೋಟಿ ಪಟ್ಟಣದಲ್ಲಿ ಡೋಣಿ ನದಿಗೆ ನಿರ್ಮಿಸಿದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಈ ಮುಳುಗಡೆಯಾದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಡೋಣಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿದೆ. ಹೀಗಿದ್ದರೂ ಸೇತುವೆಯಲ್ಲಿ ಬೈಕ್ ಚಲಾಯಿಸಿದ ಯುವಕ
ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ವಿರೋಧಿಸಿ ಸೆ.27ರಂದು ಪಂಚಮಸಾಲಿ ಶಾಸಕರ ಸಭೆ
ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ ವಿರೋಧಿಸಿ ಸೆ.27ರಂದು ಪಂಚಮಸಾಲಿ ಸಮಾಜದ ಶಾಸಕರು ಬಾಗಲಕೋಟೆಯಲ್ಲಿ ಸಭೆ ನಡೆಸಲಿದ್ದಾರೆ. ಸ್ವಾಮೀಜಿ ಉಚ್ಛಾಟನೆಗೆ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಂದಿನ ಸಭೆಯಲ್ಲಿ ಸ್ವಾಮೀಜಿಯೊಂದಿಗೆ ಚರ್ಚಿಸಿ ನಿರ್ಧಾರ