Menu

ತುಮಕೂರು ವರೆಗೂ ನಮ್ಮ ಮೆಟ್ರೋ ವಿಸ್ತರಣೆಗೆ ಬಿಎಂಆರ್ ಸಿಎಲ್ ಸಿದ್ಧತೆ!

namma metro

ನಮ್ಮ ಮೆಟ್ರೋ ರೈಲು ಸಂಚಾರವನ್ನು ಬೆಂಗಳೂರಿನಿಂದ ತುಮಕೂರು ವರೆಗೂ ವಿಸ್ತರಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಬೆಂಗಳೂರಿಂದ ಹೊಸ ಏರಿಯಾ ಮತ್ತು ಊರುಗಳಿಗೆ ಮೆಟ್ರೋ ಸಂಚಾರ ವಿಸ್ತರಿಸುವ ಕುರಿತು ಮಾಸಾಂತ್ಯದಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ರಾಜ್ಯ ಸರ್ಕಾರಕ್ಕೆ ಬಿಎಂಆರ್​ಸಿಎಲ್ ವರದಿ ಸಲ್ಲಿಸಲಿದೆ.

ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡ್ತಿದ್ದಂತೆ‌ DPR ಸಿದ್ಧವಾಗಲಿದ್ದು, ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿಂದ 8 ಏರಿಯಾ, ಊರುಗಳಿಗೆ ಮೆಟ್ರೋ ವಿಸ್ತರಣೆಗೆ ನಿರ್ಧರಿಸಲಾಗಿದ್ದು, 3A, 4ನೇ ಹಂತದಲ್ಲಿ 236 ಕಿ.ಮೀ. ಮೆಟ್ರೋ ಜಾಲ ವಿಸ್ತರಣೆಗೆ BMRCL ಮುಂದಾಗಿದೆ.

ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ ಗಳು​​ ಸೇರಿ ಪಿಂಕ್, ಆರೆಂಜ್ ಬ್ಲ್ಯೂ ಲೈನ್​ನಿಂದ 203.67 ಕಿಮೀ ಮೆಟ್ರೋ ಜಾಲವಿದೆ. ಇದನ್ನು ಮತ್ತೆ 236 ಕಿಲೋ ಮೀಟರ್​​ ವಿಸ್ತರಣೆ ಮಾಡುವ ಮೂಲಕ ಒಟ್ಟು 450 ಕಿ.ಮೀ.ಗೆ ವಿಸ್ತರಿಸಲಿದೆ.

ಹೊಸೂರು ಯೋಜನೆಗೆ ಹಿನ್ನಡೆ

ಬೆಂಗಳೂರು ಮತ್ತು ತಮಿಳುನಾಡಿನ ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಿದೆ. ಈ ಬಗ್ಗೆ ಈಗಾಗಲೇ BMRCL ಸ್ಪಷ್ಟನೆ ನೀಡಿದ್ದು, ತಾಂತ್ರಿಕವಾಗಿ ಇದು ಸಾಧ್ಯವಿಲ್ಲ ಎಂದು ತಿಳಿಸಿತ್ತು.

ಚೆನ್ನೈ ಮೆಟ್ರೋ ರೈಲು ಲಿಮಿಟೆಡ್  ನಡೆಸಿದ ಅಧ್ಯಯನದ ಪ್ರಕಾರ, 23 ಕಿ.ಮೀ. ಉದ್ದದ ಹೊಸೂರು-ಬೊಮ್ಮಸಂದ್ರ ಕಾರಿಡಾರ್‌ಗೆ 25 ಕೆವಿ ಎಸಿ ಓವರ್‌ಹೆಡ್ ವಿದ್ಯುತ್ ಶಕ್ತಿ ಬಳಕೆಗೆ ಪ್ರಸ್ತಾಪವಿತ್ತು. ಆದರೆ, ನಮ್ಮ ಮೆಟ್ರೋ ಜಾಲ ಬಳಸುತ್ತಿರುವುದು 750 ಕೆವಿ ಡಿಸಿ ವಿದ್ಯುತ್ ಶಕ್ತಿಯಾದ್ದರಿಂದ ಇವುಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಈ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆ ಸಂಯೋಜನೆ ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರಕ್ಕೆ BMRCL ಈಗಾಲೇ ಸ್ಪಷ್ಟಪಡಿಸಿದೆ.

Related Posts

Leave a Reply

Your email address will not be published. Required fields are marked *