Menu

ಕಾರು ಡಿಕ್ಕಿಯಾಗಿ ಉರಿದ ಬೈಕ್‌: ಕಲಬುರಗಿಯಲ್ಲಿ ಸವಾರರಿಬ್ಬರು ಸಜೀವ ದಹನ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಬಳಿ ಬೈಕ್‌ಗೆ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿ ಬೆಂಕಿಹೊತ್ತಿಕೊಂಡು ಅದರಲ್ಲಿದ್ದ ಸವಾರರಿಬ್ಬರು ಸಜೀವ ದಹನಗೊಂಡಿದ್ದಾರೆ.

ಸಿರಗಾಪುರ ಗ್ರಾಮದ ಆಕಾಶ ಧನವಂತ (19) ಮತ್ತು ಭೂಸಣಗಿ ಗ್ರಾಮದ ಸುಶೀಲ್ (28) ಬೆಂಕಿಗೆ ಬಲಿಯಾದವರು. ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರರು ಸಿರಗಾಪುರ ಗ್ರಾಮದಿಂದ ಮಹಾಗಾಂವ್ ಕ್ರಾಸ್‌ಗೆ ತೆರಳುತ್ತಿದ್ದಾಗ ಹೈದರಾಬಾದ್‌ನಿಂದ ಕಲಬುರಗಿ ಕಡೆ ತೆರಳುತ್ತಿದ್ದ ಕಾರು ಈ ದುರಂತ ಸಂಭವಿಸಿದೆ.

ಗದಗದಲ್ಲಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

ಗದಗ ಎಮ್ಜಿಆರ್ಡಿಪಿಆರ್ ವಿಶ್ವ ವಿದ್ಯಾಲಯ ಬಳಿ ಕಾಂಕ್ರೀಟ್ ಮಿಕ್ಸರ್ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಸವಾರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 9 ವರ್ಷದ ಮನೋಜ್ ಕಮತರ ಹಾಗೂ 18 ವರ್ಷದ ಆನಂದ ಮೃತ ಯುವಕರು.

ಮೃತರು ಗದಗ ತಾಲೂಕಿನ ನಾಗಾವಿಯ ಗ್ರಾಮದ ನಿವಾಸಿಗಳಾಗಿದ್ದು, ಗದಗ ಜಿಮ್ಸ್ ನಿಂದ ನಾಗಾವಿ ಗ್ರಾಮಕ್ಕೆ ಹೊರಟಿದ್ದರು. ಅತಿ ವೇಗದಲ್ಲಿ ಒವರ್‌ ಟೇಕ್‌ ವೇಳೆ ಎದುರು ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ವಾಹನಕ್ಕೆ ಹೊಡೆದಿದ್ದಾರೆ.

Related Posts

Leave a Reply

Your email address will not be published. Required fields are marked *