Menu

2026 ಜೂನ್ ವೇಳೆಗೆ ನೀಲಿ ಮಾರ್ಗದ ಮೆಟ್ರೋ ಪೂರ್ಣ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಉಳಿದ ಇನ್ನರ್ಧ ಕಾಮಗಾರಿಯೂ ನಿಗದಿತ ವೇಳೆ ಮುಗಿದರೆ 2026 ಅಂತ್ಯಕ್ಕೆ ಈ ಯೋಜನೆಯು ಪೂರ್ಣವಾಗಲಿದ್ದು,ಬರುವ. 2026 ಜೂನ್ ವೇಳೆಗೆ ಕೆಆರ್‌ಪುರಂ ಸಿಲ್ಕ್‌ಬೋರ್ಡ್‌ ನಡುವಿನ ಮಾರ್ಗ ಆರಂಭಿಸಲು ಸಿದ್ಧತೆ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಉತ್ತರ ಭಾಗದಿಂದ ದಕ್ಷಿಣಕ್ಕೆ ಹಸಿರು ಮಾರ್ಗ, ಪೂರ್ವದಿಂದ ಪಶ್ಚಿಮಕ್ಕೆ ನೇರಳೆ ಮಾರ್ಗವು ಮೆಟ್ರೋ ಸಂಪರ್ಕ ಕಲ್ಪಿಸುತ್ತಿದೆ.

ಬೆಂಗಳೂರಿನಲ್ಲಿ 5ನೇ ಮಹಡಿಯಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: 21 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಪರೀಕ್ಷಾ ಭಯದಿಂದ ಅಪಾರ್ಟ್‌ಮೆಂಟ್​​ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಆಂಧ್ರಪ್ರದೇಶ ಮೂಲದ ಯಶವಂತಪುರ ಖಾಸಗಿ ಕಾಲೇಜಿನ 2ನೇ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಅಕ್ರಮ ಸಂಬಂಧಕ್ಕೆ ನೊಂದು ಪತ್ನಿ ಸುಸೈಡ್‌ ಎಂದ ಆರೋಪಿ ಟೆಕ್ಕಿ

ಪ್ರಿಯತಮೆಯೊಂದಿಗೆ ಅಕ್ರಮ ಸಂಬಂಧವೇ ತನ್ನ ಪತ್ನಿಯ ಆತ್ಮತ್ಯೆಗೆ ಕಾರಣ ಎಂದು ಟೆಕ್ಕಿ ಬಶೀರ್ ಉಲ್ಲಾ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಗೃಹಿಣಿ ಬಾಹರ್ ಅಸ್ಮಾ ಇತ್ತೀಚೆಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ: ಕಾರ್ಮಿಕರು ವಾಸವಿದ್ದ ಟೆಂಟ್‌ಗಳು ಭಸ್ಮ

ಬೆಂಗಳೂರಿನ ವೀರನಪಾಳ್ಯದಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 40ಕ್ಕೂ ಹೆಚ್ಚು ಶೆಡ್‍ಗಳು ಬೆಂಕಿಯಿಂದ ಭಸ್ಮವಾಗಿ ಹೋಗಿವೆ. ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ ಕೂಲಿ ಕಾರ್ಮಿಕರು 50 ಶೆಡ್ ನಿರ್ಮಿಸಿಕೊಂಡಿದ್ದರು. ಒಂದು ಶೆಡ್‍ನಲ್ಲಿ ಮೊದಲಿಗೆ ಬೆಂಕಿ

ಬಿಜೆಪಿ ನಾಯಕರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್ ಬದಲಿಸಿಕೊಳ್ಳಲಿ: ಡಿಕೆ ಶಿವಕುಮಾರ್ ವ್ಯಂಗ್ಯ

ಬೆಂಗಳೂರು: ಏಪ್ರಿಲ್ 17ರಂದು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜನರ ಪರವಾಗಿ ಹೋರಾಟ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ತಮ್ಮ ಜನಾಕ್ರೋಶ ಯಾತ್ರೆಯ ಬೋರ್ಡ್ ನಲ್ಲಿ ‘ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ’ ಎಂದು ಬದಲಾವಣೆ ಮಾಡಿಕೊಳ್ಳಲಿ ಎಂದು ಆ ಪಕ್ಷದ ನಾಯಕರಿಗೆ

ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಪರಿಸರ ಸಚಿವಾಲಯ ಷರತ್ತುಬದ್ಧ ಅನುಮೋದನೆ

ಬೆಂಗಳೂರು:ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೊನೆಗೂ ಪರಿಸರ ಸಚಿವಾಲಯದಿಂದ ಷರತ್ತುಬದ್ಧ ಅನುಮೋದನೆ ನೀಡಿದೆ. ಮೇ ತಿಂಗಳಿನಲ್ಲಿಯೇ ರೋಪ್ ವೇ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಸರ್ಕಾರ ಮುಂದಾಗಿದೆ.

ಕುಡಿಯಲು ಹಣ ಕೊಡದ ತಾಯಿಯನ್ನೇ ಕೊಂದ ಪಾಪಿ ಮಗ!

ಬೆಂಗಳೂರಿನ ಬಾಗಲಗುಂಟೆಯ ಮುನೇಶ್ವರ ನಗರದಲ್ಲಿ ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಮಗನೊಬ್ಬ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಹತ್ಯೆಯಾದ ಮಹಿಳೆಯನ್ನು ಶಾಂತಬಾಯಿ (82) ಎಂದು ಗುರುತಿಸಲಾಗಿದೆ. ಮಹೆಂದ್ರ ಸಿಂಗ್ (52) ಕೊಲೆ ಮಾಡಿ ದಾತ. ತಾಯಿ ಹಾಗೂ ಮಗನ ನಡುವೆ ಹಣದ

ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯ: ಬೆಂಗಳೂರಿನಲ್ಲಿ ಬ್ಲಾಕ್‌ ಟಿಕೆಟ್‌ ಮಾರಾಟಗಾರರು ಸಿಸಿಬಿ ಬಲೆಗೆ

ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದ ಟಿಕೆಟ್‌ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ಅಕಾಯ್ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ

ಕಾರು ಬ್ರಿಡ್ಜ್ ಗೆ ಡಿಕ್ಕಿ ಒಂದೇ ಕುಟುಂಬದ ಮೂವರು ಸಾವು; ಮಕ್ಕಳು ಪಾರು

ಬೆಂಗಳೂರು:ವೇಗವಾಗಿ ಹೋಗುತ್ತಿದ್ದ ಕಾರು ಬ್ರಿಡ್ಜ್ ಗೆ ಡಿಕ್ಕಿ ಹೊಡೆದು ಪತಿ, ಪತ್ನಿ, ಮಗಳು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟು ಇಬ್ಬರು ಮಕ್ಕಳು ಪಾರಾಗಿರುವ ದುರ್ಘಟನೆ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಮಲ್ಲೇಶ್ವರಂನ ಗೋಪಾಲ(60), ಇವರ ಪತ್ನಿ ಶಶಿಕಲಾ(54)

ಬಿರ್ಲಾ ಓಪಸ್ ಪೇಂಟ್ಸ್ ನಿಂದ ಹೊಸ ಮತ್ತು ಆವಿಷ್ಕಾರಕ ಶ್ರೇಣಿಯ ಡಿಸೈನರ್ ಫಿನಿಷ್ ಬಿಡುಗಡೆ

ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಹೊಸ ಮತ್ತು ಆವಿಷ್ಕಾರಕ ಶ್ರೇಣಿಯ ಡಿಸೈನರ್ ಫಿನಿಷ್ ಅನ್ನು ಎರಡು ವಿಶೇಷ ಮತ್ತು ಫ್ಯೂಚರಿಸ್ಟಿಕ್ ಸಂಗ್ರಹಗಳ ಶ್ರೇಣಿಯನ್ನು ಬಿಡುಗಡೆ ಮಾಡಿದ್ದು ಅದು ಭಾರತದಲ್ಲಿ ಪ್ರೀಮಿಯಂ ಒಳಾಂಗಣ ವಿನ್ಯಾಸವನ್ನು ಬದಲಾಯಿಸಲಿದೆ.