Menu

ಜಾತಿ ಜನಗಣತಿ ಭಾರತೀಯ ಜುಮ್ಲಾ ಪಾರ್ಟಿಯ ಡೋಂಗಿತನ ಜಗಜ್ಜಾಹೀರು: ಕೃಷ್ಣಬೈರೇಗೌಡ

ಕೋಲಾರ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ವಿರೋಧಿಸುತ್ತಿರುವ ಬಿಜೆಪಿಯ ಡೋಂಗಿತನ ಜಗಜ್ಜಾಹೀರಾಗಿದೆ. ಸಮೀಕ್ಷಾ ವರದಿ ಸಲ್ಲಿಸಿದ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರ. ಆಯೋಗದ ವರದಿಗೆ ಸಹಿ ಹಾಕಿರುವ ಸದಸ್ಯರನ್ನು ನೇಮಿಸಿದ್ದೂ ಬಿಜೆಪಿ ಸರ್ಕಾರ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡರ ದ್ವಂದ್ವ ನಿಲುವಿಗೆ, ರಾಜಕೀಯ ಮೇಲಾಟಕ್ಕೆ ಇದಕ್ಕಿಂತ ಉದಾಹರಣೇ ಬೇಕೇ? ಡೋಂಗಿತನವೇ

ಜನಗಣತಿ ಜೊತೆಗೆ ಜಾತಿಗಣತಿ: ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

ನವದೆಹಲಿ: ಮುಂದಿನ ಬಾರಿಯ ರಾಷ್ಟ್ರೀಯ ಜನಗಣತಿ ವೇಳೆ ಜಾತಿಗಣತಿ ಕೂಡ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜಕೀಯ ವ್ಯವಹಾರಗಳ ಕೇಂದ್ರ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು

ಪತ್ನಿ, ಮಗನ ಗುಂಡಿಕ್ಕಿ ಕೊಂದು ಮೈಸೂರಿನ ಉದ್ಯಮಿ ಆತ್ಮಹತ್ಯೆ

ನ್ಯೂಯಾರ್ಕ್: ಪತ್ನಿ ಹಾಗೂ ಮಗನನ್ನು ಗುಂಡಿಕ್ಕಿ ಕೊಂದ ನಂತರ ಮೈಸೂರಿನ ಉದ್ಯಮಿ ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ರೊಬೊಟೆಕ್ ಕಂಪನಿಯಾದ ಹೋಲೋವರ್ಲ್ಡ್ ಸಿಇಒ 57 ವರ್ಷದ ಹರ್ಷವರ್ಧನ ಕಿಕ್ಕೇರಿ, 44 ವರ್ಷದ ಪತ್ನಿ ಹಾಗೂ ಕಂಪನಿ ಸಹ ಸಂಸ್ಥಾಪಕಿ ಶ್ವೇತಾ

ನಾಳೆಯಿಂದ ರಾಜ್ಯದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ದುಬಾರಿ ಲೈಫ್ ಟೈಮ್ ಟ್ಯಾಕ್ಸ್

ನಾಳೆಯಿಂದ ಅಂದರೆ ಮೇ ತಿಂಗಳ ಆರಂಭದಿಂದ ರಾಜ್ಯದಲ್ಲಿ ಸಣ್ಣ ಗೂಡ್ಸ್, ಟ್ಯಾಕ್ಸಿ, ಎಲೆಕ್ಟ್ರಿಕ್ ವಾಹನ ಸೇರಿದಂತೆ ಯೆಲ್ಲೋ ಬೋರ್ಡ್ ವಾಹನ ಖರೀದಿಸಿದವರಿಗೆ ಬಲು ದುಬಾರಿಯಾಗಿ ಪರಿಣಮಿಸಲಿದೆ. ಮೇ.1 ರಿಂದ ಕರ್ನಾಟಕದಲ್ಲಿ ಯೆಲ್ಲೋ ಬೋರ್ಡ್ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಅಥವಾ ಜೀವಿತಾವಧಿ

93 ದಿನಗಳ ಜೈಲುವಾಸ ಮುಗಿಸಿ ಹೊರಬಂದ ಲಾಯರ್‌ ಜಗದೀಶ್‌

ಮಾಜಿ ಬಿಗ್​ಬಾಸ್ ಸ್ಪರ್ಧಿ, ವಕೀಲ ಜಗದೀಶ್ 93 ದಿನಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್‌ ಮಾಡಿರುವ ಜಗದೀಶ್, ತಮ್ಮ ಬಂಧನಕ್ಕೆ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನೇರ ಹೊಣೆ ಮಾಡಿದ್ದಾರೆ. ಜಗದೀಶ್ ಅವರನ್ನು

ವಿಶಾಖಪಟ್ಟಣದಲ್ಲಿ ದೇಗುಲ ಗೋಡೆ ಕುಸಿದು 8 ಸಾವು

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇಗುಲದಲ್ಲಿ  ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು  ಕುಸಿದು ಎಂಟು ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಸಿಂಹಗಿರಿ ಬಸ್ ನಿಲ್ದಾಣದಿಂದ ಘಾಟ್ ರಸ್ತೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಬಳಿ 300 ರೂಪಾಯಿ ಟಿಕೆಟ್ ಗಾಗಿ ಭಕ್ತರು ಸರದಿಯಲ್ಲಿ ನಿಂತಿದ್ದಾಗ ಗೋಡೆ

ಇಂದಿರಾ ಗಾಂಧಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯರನ್ನು ಕಾಂಗ್ರೆಸ್‌ನಿಂದ ಉಚ್ಚಾಟನೆಗೊಳಿಸಿ: ಆರ್‌ ಅಶೋಕ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಚಾಟನೆ ಮಾಡೋ ಧಮ್ ಇದೆಯಾ ಡಿಕೆ ಶಿವಕುಮಾರ್ ಅವರೇ? “ಉತ್ತರನ ಪೌರುಷ ಒಲೆಯ ಮುಂದೆ” ಎನ್ನುವ ಹಾಗೆ ನಿಮ್ಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆಯೋದಕ್ಕೆ ಮಾತ್ರ

ಪಾಕ್‌ ವಿರುದ್ಧ ವಿಶ್ವ ಸಂಸ್ಥೆಯಲ್ಲಿ ಭಾರತ ಕಿಡಿಕಿಡಿ

ಪಹಲ್ಗಾಂನಲ್ಲಿ ಉಗ್ರರ ದಾಳಿಯ ಬಳಿಕ ಭಾರತ-ಪಾಕಿಸ್ತಾನದ ಸಂಬಂಧ  ಹದಗೆಡುತ್ತಿದ್ದು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಕಿಡಿ ಕಾರಿದೆ. ಪಾಕಿಸ್ತಾನವನ್ನು ಜಾಗತಿಕ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿರುವ ಧೂರ್ತ ದೇಶ ಎಂದು ಹೇಳಿದೆ. ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯ ‘ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್

ಬಸವಣ್ಣ ಸ್ಮರಣೆ ಪ್ರತಿಯೊಬ್ಬ ಕನ್ನಡಿಗ ಹಾಗೂ ಭಾರತೀಯನ ಕರ್ತವ್ಯ: ಸಿಎಂ

ಬಸವಣ್ಣನಂಥವರನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು.  ಬೆಂಗಳೂರಿನಲ್ಲಿ ಬಸವ ಸಮಿತಿ  ಆಯೋಜಿಸಿದ್ದ ವಿಶ್ವ ಗುರು ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಸಾಂಸ್ಕೃತಿಕ ನಾಯಕ ಎಂದು

ಜೆನೆರಿಕ್‌ ಮೆಡಿಸಿನ್‌ ಪೂರೈಕೆ ಬಂದ್‌ ಮಾಡಿದ ಭಾರತ: ಹೈರಾಣಾದ ಪಾಕ್‌ ವೈದ್ಯ ವಲಯ

ಇಸ್ಲಾಮಾಬಾದ್‌: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತವು ಪಾಕಿಸ್ತಾನದೊಂದಿಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ ಬಳಿಕ ಪಾಕ್‌ ವಿರುದ್ಧ ಪ್ರತೀಕಾರಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಸಶಸ್ತ್ರ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿರುವ ಮಧ್ಯೆಯೇ ಆ ದೇಶದಲ್ಲಿ ಅಗತ್ಯ ಔಷಧ ಬಿಕ್ಕಟ್ಟು ತೀವ್ರಗೊಂಡಿದೆ.