Menu

ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಮೂಲಕ ಸೇನೆಗೆ ಬೆಂಬಲ

ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರಿನ ಕೆ ಆರ್ ಸರ್ಕಲ್ ನಿಂದ ಮಿನ್ಸ್ಕ್ ಚೌಕದವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ತಿರಂಗಾ ಯಾತ್ರೆ ನಡೆಯಿತು. ಸಚಿವರಾದ ಎಚ್ ಕೆ ಪಾಟೀಲ್, ಪರಮೇಶ್ವರ್, ಕೆ ಎಚ್ ಮುನಿಯಪ್ಪ, ಮಹದೇವಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಡಾ ಎಂ ಸಿ ಸುಧಾಕರ್, ಬೋಸರಾಜು, ವಿಧಾನ

ಭಾರತ- ಪಾಕ್‌ ಯುದ್ಧ ಛಾಯೆ: ಬೆಂಗಳೂರು ಹೆಚ್‌ಎಎಲ್‌ ಸಿಬ್ಬಂದಿಯ ರಜೆ ರದ್ದು, ಹೈ ಅಲರ್ಟ್‌

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಛಾಯೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಹೈ ಅಲರ್ಟ್ ಘೋಷಿಸ ಲಾಗಿದೆ. ಸಿಬ್ಬಂದಿಯ ರಜೆಗಳನ್ನು ರದ್ದು ಮಾಡಲಾಗಿದ್ದು, ಓವರ್ ಟೈಂ ಕೆಲಸಕ್ಕೆ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹೆಚ್‌ಎಎಲ್

ಪಾಕ್‌ನಿಂದ ಸ್ವತಂತ್ರವೆಂದು ಘೋಷಿಸಿಕೊಂಡ ಬಲೂಚಿಸ್ತಾನ್‌

ಭಾರತ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ ಮರುದಿನವೇ ಪಾಕಿಸ್ತಾನದ ವಿರುದ್ಧ ಬಲೂಚಿಸ್ತಾನ್‌ ಬಂಡೆದ್ದು, ತಾನು ಸ್ವತಂತ್ರವೆಂದು ಘೋಷಿಸಿ ಕೊಂಡಿದೆ. ಬಲೂಚಿಸ್ತಾನ್‌ ಗುರುವಾರ ಬಾಂಬ್ ದಾಳಿ ನಡೆಸಿ ಪಾಕಿಸ್ತಾನದ 14 ಯೋಧರ ಬಲಿ ಪಡೆದಿತ್ತು. ಇಂದು ಬಲೂಚಿಸ್ತಾನ್ ನಾಯಕರು ಪಾಕಿಸ್ತಾನದಿಂದ ಬೇರೆ

ಪೋಪ್‌ ಪಟ್ಟಕ್ಕೆ ಅಮೆರಿಕದ ರಾಬರ್ಟ್‌ ಪ್ರೆವೋಸ್ಟ್‌ ಆಯ್ಕೆ

ಪೋಪ್‌ ಫ್ರಾನ್ಸಿಸ್‌ ಅವರ ನಿಧನದಿಂದ ತೆರವಾಗಿದ್ದ ಕ್ರೈಸ್ತರ ಧರ್ಮೀಯರ ಪರಮೋಚ್ಚ ಗುರುಪಟ್ಟಕ್ಕೆ ಅಮೆರಿಕದ ರಾಬರ್ಟ್‌ ಪ್ರೆವೋಸ್ಟ್‌ ಆಯ್ಕೆಯಾಗಿದ್ದಾರೆ. ಪೋಪ್‌ ಪಟ್ಟಕ್ಕೆ ಆಯ್ಕೆಯಾದ ಮೊದಲ ಅಮೆರಿಕನ್‌ ಇವರು. ಇವರ ಪೋಪ್‌ ಪಟ್ಟದ ಹೆಸರು 14ನೇ ಪೋಪ್‌ ಲಿಯೋ, ಇವರು 267ನೇ ಪೋಪ್‌ ಆಗಿದ್ದಾರೆ.

ಭಾರತ-ಪಾಕ್‌: ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮದ ಎಚ್ಚರಿಕೆಯಿತ್ತ ಪೊಲೀಸ್ ಕಮಿಷನರ್​ ದಯಾನಂದ್

ಉಗ್ರರ ದಾಳಿಗೆ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಮೂಲಕ ಸಮರ್ಥವಾಗಿಯೇ  ಪ್ರತೀಕಾರ ತೀರಿಸಿದೆ. ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಎದುರಾಗಿದ್ದು, ಗಡಿ ಪ್ರದೇಶಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕರ್ನಾಟದಲ್ಲೂ ಪೊಲೀಸ್​ ಇಲಾಖೆ ಅಲರ್ಟ್ ಆಗಿದ್ದು, ಸುಳ್ಳು ಸುದ್ದಿಗಳನ್ನು ಹರಡುವವರ

ಜಮ್ಮುವಿನಿಂದ ಹತ್ತು ಸಾವಿರ ನಿವಾಸಿಗಳ ಸ್ಥಳಾಂತರ, ನಾಗರಿಕರನ್ನು ಗುರಿಯಾಗಿಸಿ ಪಾಕ್‌ ಶೆಲ್‌ ದಾಳಿ

ಭಾರತೀಯ ಸೇನಾ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ಜಮ್ಮುವಿನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಭಾರತದ ಸೈನ್ಯದ ಜೊತೆ ಹೋರಾಡುವ ಶಕ್ತಿ ಇಲ್ಲ, ಅದಕ್ಕೆ ನಾಗರಿಕರ ಮೇಲೆ ದಾಳಿ ಮಾಡುತ್ತಿದೆ, ಇಂದು ಬೆಳಗ್ಗೆ ಹಲವು ಬಾರಿ ಸ್ಫೋಟದ ಸದ್ದು ಕೇಳಿದೆ

ಕಲಬುರಗಿಯಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ಫಲಿತಾಂಶ ಸುಧಾರಣೆಗೆ ನೀಲನಕ್ಷೆ : ಸಚಿವ ಪ್ರಿಯಾಂಕ್ ಖರ್ಗೆ

ಈ ಬಾರಿಯ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು ಶೈಕ್ಷಣಿಕವಾಗಿ ಕಲಬುರಗಿ ಜಿಲ್ಲೆ ಬಹಳಷ್ಟು ಸುಧಾರಣೆಗೊಳ್ಳಬೇಕಾಗಿದೆ ಎಂಬು ದನ್ನು ತೋರಿಸುತ್ತಿದೆ, ಶಿಕ್ಷಣ ಸಮಾಜದ ಸ್ಥಿತಿಗತಿಗಳನ್ನು ಅಳೆಯುವ ಮಾನದಂಡವಾಗಿದ್ದು ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳೂ ಸಹ ಶೈಕ್ಷಣಿಕ ಗುಣಮಟ್ಟದ

ಭಾರತ-ಪಾಕ್‌ ಹೆಚ್ಚಿದ ಉದ್ವಿಗ್ನತೆ: ದೇಶದ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತ

ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತವು ತನ್ನ 24 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ವರದಿಗಳು ತಿಳಿಸಿವೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ಪ್ರಯಾಣದ ಯೋಜನೆಯನ್ನು ಪ್ಲ್ಯಾನ್‌ ಮಾಡಿಕೊಳ್ಳುವಂತೆ ಸೂಚಿಸಿವೆ. ದೇಶಾದ್ಯಂತ

ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದೊಂದಿಗೆ ರಾಜ್ಯ ಒಪ್ಪಂದ

ನ್ಯೂಸ್ಪೇಸ್ ಆರ್ಥಿಕತೆಗೆ ಗಮನಾರ್ಹವಾದ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ ದೊಂದಿಗೆ (IN-SPACe) ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಐಎಎಸ್ ಮತ್ತು ಐಎನ್-ಸ್ಪೇಸ್

ಬಯಲು ಸೀಮೆ ಜಿಲ್ಲೆಗಳಿಗೆ ಶೀಘ್ರದಲ್ಲೇ ಎತ್ತಿನಹೊಳೆ ನೀರು: ಡಿ.ಕೆ ಶಿವಕುಮಾರ್ 

ರಾಜ್ಯದ ಮಹಾ ಜನತೆ 136 ಸೀಟುಗಳನ್ನು ಕೊಟ್ಟು ನಮ್ಮ ಸರ್ಕಾರವನ್ನು ಗೆಲ್ಲಿಸಿದ್ದೀರಿ ನಿಮಗೆ ಧನ್ಯವಾದಗಳು. ವೃಷಭಾವತಿ ನೀರನ್ನು ಬಹಳ ಹಿಂದೆಯೇ ಸಂಸ್ಕರಣ ಮಾಡಿ ಹರಿಯಲು ಬಿಡಬೇಕು ಎಂದು ಅಂದುಕೊಂಡಿದ್ದೇವು. ರೈತರ ಬದುಕಿಗೆ ಏನಾದರೂ ಸಹಾಯ ಮಾಡಬೇಕು, ರೈತರಿಗೆ ಸಂಬಳವಾಗಲಿ, ಪೆನ್ಷನ್, ಪಿಂಚಣಿಯ