ಶಿವಮೊಗ್ಗ: ಲಾಡ್ಜ್ನಲ್ಲಿ ಬೆಂಕಿ ಹಚ್ಚಿಕೊಂಡ ಅನೈತಿಕ ಸಂಬಂಧದಲ್ಲಿದ್ದ ವಿವಾಹಿತ ಜೋಡಿ
ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಜೋಡಿಯೊಂದು ಜಗಳವಾಡಿ ಬೆಂಕಿ ಹಚ್ಚಿಕೊಂಡು ಮೈಕೈ ಸುಟ್ಟುಕೊಂಡು ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ನಗರದ ಖಾಸಗಿ ಲಾಡ್ಜ್ನಲ್ಲಿ ನಡೆದಿದೆ. ಗೀತಾ ಮತ್ತು ಗಿರೀಶ್ ಬೆಂಕಿಯಿಂದ ಮೈಕೈ ಸುಟ್ಟು ಆಸ್ಪತ್ರೆಗೆ ದಾಖಲಾದವರು. ದಾವಣಗೆರೆಯವರಾದ ವಿವಾಹಿತೆ ಗೀತಾ ಹಾಗೂ ವಿವಾಹಿತ ಗಿರೀಶ್ ಪರಸ್ಪರ ಅನೈತಿಕ ಸಂಬಂಧ ಹೊಂದಿರುವವರು. ಗೀತಾಗೆ ಇಬ್ಬರು ಮಕ್ಕಳಿದ್ದರೆ, ಗಿರೀಶ್ಗೂ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ನಗರದ ಖಾಸಗಿ ಲಾಡ್ಜ್ನಲ್ಲಿ ಕೊಠಡಿ
ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್: ವ್ಯಕ್ತಿಯಿಂದ 42 ಲಕ್ಷ ರೂ. ದೋಚಿದ ಸೈಬರ್ ವಂಚಕ
ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಹೆಸರಲ್ಲಿ ಸೈಬರ್ ವಂಚಕ ಬೆಂಗಳೂರಿನ ವ್ಯಕ್ತಿಯೊಬ್ಬರಿಂದ 42 ಲಕ್ಷ ರೂ. ದೋಚಿಕೊಂಡಿದ್ದಾನೆ. ಅಪರಿಚಿತ ವ್ಯಕ್ತಿ ಅಧಿಕ ಲಾಭದ ಆಮಿಷ ಒಡ್ಡಿದ್ದನ್ನು ನಂಬಿ ಹಣ ಹೂಡಿಕೆ ಮಾಡಿದ್ದ ವ್ಯಕ್ತಿ ಈಗ ಇದ್ದ ಹಣವೆಲ್ಲ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾಗಿರುವ ಬಗ್ಗೆ
ಬೆಳಗಾವಿ: ಚಳಿಗೆ ಇದ್ದಿಲು ಬೆಂಕಿ ಹಾಕಿ ಮಲಗಿದ್ದ ಮೂವರು ಯುವಕರ ಸಾವು
ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲೆಂದು ಯುವಕರು ಕೊಠಡಿಯಲ್ಲಿ ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದವರು ಹೆಣವಾಗಿ ಹೋದ ಹೃದಯವಿದ್ರಾವಕ ಘಟನೆಯೊಂದು ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ಕೊರೆಯುವ ಚಳಿ ಹಾಗೂ ಸೊಳ್ಳೆಗಳ ಕಾಟದಿಂದ ಪಾರಾಗಲು ಯುವಕರು ಇದ್ದಿಲು ಬೆಂಕಿ ಹಾಕಿಕೊಂಡು ಮಲಗಿದ್ದರು. ರಾತ್ರಿ ದಟ್ಟ
ಬೆಂಗಳೂರಿನ ಮಹಿಳೆಗೆ ಇಂದೋರ್ ವ್ಯಕ್ತಿಗಳಿಂದ ಜೀವಬೆದರಿಕೆ
ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ವಾಸಿಸುವ ಪ್ರಿಯಾಂಕ ರಾಯ್ ಅವರಿಗೆ ಇಂದೋರ್ ಮೂಲದ ವ್ಯಕ್ತಿಗಳು ಲೈಂಗಿಕ ಕಿರುಕುಳ ಮತ್ತು ಅಪಹರಣದ ಬೆದರಿಕೆ ಹಾಗೂ ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ವಾಟ್ಸಾಪ್ನಲ್ಲಿ ಶಾರ್ಪ್ಶೂಟರ್ ಪೋಟೊ ಕಳುಹಿಸಿ ಹಣ ಕೊಡದಿದ್ದರೆ ಮೂರು
ಹಾವೇರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು ಆರೋಪ
ಹಾವೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎನ್ನಲಾಗುತ್ತಿದೆ. ಮಹಿಳೆ ಆಸ್ಪತ್ರೆಯ ಶೌಚಾಲಯಕ್ಕೆ ಹೋಗುತ್ತಿರುವಾಗಲೇ ಹೆರಿಗೆಯಾಗಿದ್ದು, ನವಜಾತ ಶಿಶುವಿಗೆ ಪೆಟ್ಟಾಗಿ ಮೃತಪಟ್ಟಿದೆ.
ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ಮುಂಚೂಣಿಯಲ್ಲಿದೆ. ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತುಮಕೂರಿನ ಬಾಲ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು,
ಮೇಕೆದಾಟು ಯೋಜನೆಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ: ಡಿಕೆ ಶಿವಕುಮಾರ್
“ಮೇಕೆದಾಟು ಯೋಜನೆಗೆ ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಶಿವಕುಮಾರ್ ಮಾಧ್ಯಮಗಳ
ಮೈಸೂರಿನಲ್ಲಿ ಹೆಣ್ಣು ಹುಲಿ, 3 ಮರಿ ಸೆರೆ: 15ಕ್ಕೇರಿದ ಹುಲಿಗಳ ಸೆರೆ ಸಂಖ್ಯೆ
ರೈತನ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ ಹಾಗೂ ಅದರ ಮೂರು ಮರಿಗಳನ್ನು ಮೈಸೂರಿನಲ್ಲಿ ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲಿ ಮೈಸೂರು ಭಾಗದಲ್ಲಿ ಸೆರೆಹಿಡಿಯಲಾದ ಹುಲಿಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇತ್ತೀಚಿಗೆ ಮುಳ್ಳೂರು ತಾಲೂಕಿನ ರೈತರ ಮೇಲೆ
ಬಿಎಸ್ ಯಡಿಯೂರಪ್ಪಗೆ ಸಂಕಷ್ಟ: ಡಿ. 2ರಂದು ಖುದ್ದು ಹಾಜರಾತಿಗೆ ಸಮನ್ಸ್ ಜಾರಿ!
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳಿಗೆ ಫೋಕ್ಸೊ ಪ್ರಕರಣದ ವಿಚಾರಣೆಗಾಗಿ ಖುದ್ದು ಹಾಜರಾತಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಬಾಲಕಿ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಆರೋಪದಡಿ ಫೋಕ್ಸೊ ಕಾಯ್ದೆಯಡಿ ಬಿಎಸ್ ಯಡಿಯೂರಪ್ಪ ಹಾಗೂ ನಾಲ್ವರ ವಿಚಾರಣೆ ನೀಡಿದ್ದ
ವಿಚ್ಚೇದಿತ ಪತ್ನಿಗೆ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣ ಸ್ಫೋಟ: ಬೆದರಿಕೆ ಆರೋಪಿ ಬಂಧನ
ಬೆಂಗಳೂರು: ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ” ಎಂದು ಬಿಎಂಆರ್ಸಿಎಲ್ ಅಧಿಕೃತ ಖಾತೆಗೆ ಇ ಮೇಲ್ ನಲ್ಲಿ ಬೆದರಿಕೆ ಹಾಕಿದ್ದ ಮಾನಸಿಕ ಅಸ್ವಸ್ಥನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. rajivsettyptp@gmail.com ಹೆಸರಿನ ಖಾತೆಯಿಂದ ನವೆಂಬರ್ 13ರಂದು




