ಅನಿಲ್ ಅಂಬಾನಿಯ 3,000 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಡೆಯುತ್ತಿರುವ ತನಿಖೆಯ ಹಿನ್ನೆಲೆಯಲ್ಲಿ ಇಡಿ 3,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಗಳು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಶನ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಸಂಬಂಧಿತ ಘಟಕಗಳ ಹೆಸರಲ್ಲಿ ಇವೆ. ಮುಂಬೈ, ದೆಹಲಿ, ನೋಯ್ಡಾ, ಗೋವಾ, ಪುಣೆ, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿರುವ ಫ್ಲಾಟ್‌ಗಳು, ಕಚೇರಿಗಳು ಮತ್ತು ಪ್ಲಾಟ್‌ಗಳು ಇದರಲ್ಲಿ
ದಿನೇಶ್ ಬೀಡಿ ಮಾಲೀಕನ ಕೊಲೆಗೈದು ಮಗ ಆತ್ಮಹತ್ಯೆ
ಮಥುರಾದ ವೃಂದಾವನ ಸಮೀಪದ ಕಾಲೊನಿಯಲ್ಲಿ ಭಾರತದ ಪ್ರಮುಖ ಬ್ರ್ಯಾಂಡ್ ದಿನೇಶ್ 555 ಬೀಡಿಯ ಮಾಲೀಕ ಹಾಗೂ ತಂದೆ ಸುರೇಶ್ ಚಂದ್ ಅವರನ್ನು ಮಗ ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಿತದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.
ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿದ್ದರಾಮಯ್ಯ
ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ದೇವರಾಜ ಅರಸು ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವುದು ಪ್ರತಿಯೊಬ್ಬ ರಾಜಕಾರಣಿಯ ಹೊಣೆಗಾರಿಕೆ ಆಗಬೇಕು. ಅರಸು
ಭಕ್ತಿ, ಕಷ್ಟ ಸುಖ, ದುಃಖ ದುಮ್ಮಾನ ವಿನಿಮಯ ಸ್ಥಳವೇ ದೇವಾಲಯ: ಡಿಸಿಎಂ
“ಭಕ್ತ ಹಾಗೂ ಭಗವಂತನ ನಡುವೆ ಭಕ್ತಿ ಸೇರಿದಂತೆ ನಮ್ಮ ಕಷ್ಟ ಸುಖ, ದುಃಖ ದುಮ್ಮಾನಗಳು ವಿನಿಮಯವಾಗುವ ಸ್ಥಳವೇ ದೇವಾಲಯ. ನಾವೆಲ್ಲರೂ ಪ್ರಾರ್ಥಿಸುವುದಕ್ಕೆ ದೇವಾಲಯಗಳಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಚಿಕ್ಕಬಾಣಾವರದ ರಾಮಚಂದ್ರ ದೇಗುಲ ಜೀರ್ಣೋದ್ದಾರ ಪುನಃ ಪ್ರತಿಷ್ಟಾಪನೆ ಹಾಗೂ
ಸುರಂಗ ರಸ್ತೆ ಯೋಜನೆಯಿಂದ ಆರ್ಥಿಕ ಸ್ಥಿತಿ ಪಾತಾಳಕ್ಕೆ: ಆರ್ ಅಶೋಕ ಆಕ್ರೋಶ
ಸುರಂಗ ರಸ್ತೆ ಯೋಜನೆಯ ಮೂಲಕ ಸಸ್ಯಕಾಶಿ ಲಾಲ್‌ಬಾಗ್‌ಗೆ ಕಾಂಗ್ರೆಸ್ ಸರ್ಕಾರ ಗುಂಡಿ ತೋಡುತ್ತಿದೆ. ಈ ಯೋಜನೆಯಿಂದ ನಗರದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಹೋಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಲಾಲ್‌ಬಾಗ್‌ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನ
ವಿದ್ಯಾರ್ಥಿನಿ ಗರ್ಭಿಣಿಯಾಗಲು ನಾನು ಕಾರಣನಲ್ಲ: ವಾಯ್ಸ್ ನೋಟ್ ಮಾಡಿಟ್ಟು ಪಿರಿಯಾಪಟ್ಟಣದಲ್ಲಿ ಯುವಕ ಆತ್ಮಹತ್ಯೆ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನೆಂಬ ಆರೋಪ ಎದುರಿಸುತ್ತಿದ್ದ ರಾಮು ಎಂಬ 27 ವರ್ಷದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ಆತ ವಾಯ್ಸ್ ನೋಟ್ ರೆಕಾರ್ಡ್ ಮಾಡಿಟ್ಟಿದ್ದು, ತನ್ನ ಮೇಲಿನ ಆರೋಪ ಸುಳ್ಳು.
ವೈದ್ಯೆ ಕೃತಿಕಾ ರೆಡ್ಡಿ ಕೊಲೆ: ಮಹೇಂದ್ರ ರೆಡ್ಡಿಗಿತ್ತು ಹಲವು ಯುವತಿಯರ ಸಂಪರ್ಕ
ಇತ್ತೀಚೆಗೆ ಗಂಡ ಮಹೇಂದ್ರ ರೆಡ್ಡಿಯಿಂದಲೇ ಕೊಲೆಯಾಗಿರುವ ವೈದ್ಯೆ ಕೃತಿಕಾ ರೆಡ್ಡಿ ಪ್ರಕರಣದ ವಿಚಾರಣೆಯಲ್ಲಿ ಮಾರತ್ತಹಳ್ಳಿ ಪೊಲೀಸರು ಮಹತ್ವದ ವಿಚಾರವನ್ನು ಬಯಲಿಗೆಳೆದಿದ್ದಾರೆ. ಆರೋಪಿಗೆ ಹಲವು ಯುವತಿಯರ ಜೊತೆ ಸಂಪರ್ಕ ಇರುವುದು ಪತ್ತೆಯಾಗಿದೆ. 2023 ರಲ್ಲಿ ಮುಂಬೈ ಮೂಲದ ಯುವತಿಯ ಹಿಂದೆ ಬಿದ್ದದ್ದ ಮಹೇಂದ್ರ
ರಾಯಚೂರಿನಲ್ಲಿ ವ್ಯಾಪಾರಿ ಯುವಕನ ಬರ್ಬರ ಹತ್ಯೆ
ರಾಯಚೂರಿನ ಸಿಂಧನೂರು ನಗರದ ಇಂದಿರಾನಗರದಲ್ಲಿ ಪ್ರಾವಿಷನಲ್ ಸ್ಟೋರ್ ಹೋಲ್ ಸೇಲ್ ವ್ಯಾಪಾರಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಾಪತ್ತೆಯಾಗಿದ್ದ ವ್ಯಾಪಾರಿ ಹೆಣವಾಗಿ ಪತ್ತೆಯಾಗಿದ್ದು, ವ್ಯಾಪಾರಿ ಕೈಗಳಿಗೆ ಬೈಡಿಂಗ್ ವೈರ್ ನಿಂದ ಕಟ್ಟಿ ಕಲ್ಲುಗಳಿಂದ ಮುಖ, ಬೆನ್ನಿಗೆ ಜಜ್ಜಿ ಕೊಲೆಗೈಯಲಾಗಿದೆ. ಪ್ರವೀರ್ ಸರ್ದಾರ್(32)
ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತಿ ಮುಖ್ಯ, ಸರ್ಕಾರದಿಂದ ಸದಾ ಪ್ರೋತ್ಸಾಹ : ಮುಖ್ಯಮಂತ್ರಿ
ನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ನಿಮ್ಮ ಉತ್ಸಾಹಕ್ಕೆ ತಕ್ಕಂತೆ ನಮ್ಮ ಪ್ರೋತ್ಸಾಹ ಸದಾ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಮತ್ತು ರಾಜ್ಯ ಒಲಂಪಿಕ್ ಅಸೋಸಿಯೇಷನ್ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ
ತೆಲಂಗಾಣದಲ್ಲಿ ಬಸ್‌ಗೆ ಲಾರಿ ಡಿಕ್ಕಿ: 20 ಮಂದಿ ಬಲಿ
ಬಸ್‌ಗೆ ಲಾರಿ ಡಿಕ್ಕಿ ಹೊಡೆದು ಕನಿಷ್ಠ 20 ಜನರು ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿಯ ಮಿರ್ಜಗುಡದ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಅಪಘಾತದಲ್ಲಿ 24 ಜನ ಗಾಯಗೊಂಡಿದ್ದಾರೆ. ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ




