ಮೈಸೂರಿನಲ್ಲಿ ಮತ್ತೊಂದು ಹುಲಿ ಹೆಜ್ಜೆ ಗುರುತು ನೋಡಿ ಬೆಚ್ಚಿದ ಜನ!
ನರಭಕ್ಷಕ ಹುಲಿಯನ್ನು ಇತ್ತೀಚೆಗಷ್ಟೇ ಬಂಧಿಸಿದ ಬೆನ್ನಲ್ಲೇ ಮತ್ತೊಂದು ಹುಲಿ ಮೈಸೂರಿನ ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಪ್ರತ್ಯಕ್ಷಗೊಂಡು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಹನಗೋಡು ಹೋಬಳಿಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಹಿಂಡಗುಡ್ಲು, ಹನಗೋಡು, ಶೆಟ್ಟಹಳ್ಳಿ, ಕಚುವಿನಹಳ್ಳಿ, ದಾಸನಪುರ, ಕಲ್ಲೂರಪ್ಪನಬೆಟ್ಟ, ಕೊಳುವಿಗೆ, ನೇಗತ್ತೂರು, ಬಿ ಆರ್ ಕಾವಲು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೋಟ, ಲಕ್ಷ್ಮಣತೀರ್ಥ ಹೊಳೆ ಬಯಲು ಭಾಗದಲ್ಲಿ ಹುಲಿ ಅಡ್ಡಾಡುತ್ತಿರುವುದನ್ನು ಜನತೆ ಕಣ್ಣಾರೆ ಕಂಡು ಭಯ ಭೀತರಾಗಿದ್ದಾರೆ. ಕಳೆದೆರಡು
ಆನೇಕಲ್ ಸ್ಕ್ಯಾನಿಂಗ್ ಸೆಂಟರ್ ರೇಡಿಯಾಲಜಿಸ್ಟ್ ವಿರುದ್ಧ ಲೈಂಗಿಕ ಕಿರುಕುಳ ದೂರು
ಆನೇಕಲ್ ಪಟ್ಟಣದ ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗೆ ಬರುವ ಮಹಿಳೆಯರ ಮೇಲೆ ರೇಡಿಯಾಲಜಿಸ್ಟ್ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಕ್ಯಾನಿಂಗ್ ಸೆಂಟರ್ನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಜಯಕುಮಾರ್ ವಿರುದ್ಧ ದೂರು ದಾಖಲಾಗಿದ್ದು, ಆತ ಸ್ಕ್ಯಾನಿಂಗ್ ನೆಪದಲ್ಲಿ ಮಹಿಳೆಯ ಖಾಸಗಿ ಅಂಗ
ತುಮಕೂರಿನಲ್ಲಿ ಕಾಂಗ್ರೆಸ್ ವೈಟ್ ವಾಶ್ ಆದ್ರೂ ಆಗಬಹುದು: ಕೆಎನ್ ರಾಜಣ್ಣ
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ವೈಟ್ ವಾಶ್ ಆದ್ರೂ ಆಗಬಹುದು ಎಂದು ಮಾಜಿ ಸಚಿವ ರಾಜಣ್ಣ ಸ್ವಪಕ್ಷ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ. ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾ.ಪಂನಲ್ಲಿ ತಾಲೂಕು ಆಡಳಿತ ಹಾಗೂ ಗ್ರಾ.ಪಂ ವತಿಯಿಂದ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಈ ಹೇಳಿಕೆ
ದೆಹಲಿ ಕಾರು ಬಾಂಬರ್ ಡಾ.ಉಮರ್ ನಬಿ: ಡಿಎನ್‌ಎ ಪರೀಕ್ಷೆಯಿಂದ ದೃಢ
ದೆಹಲಿ ಕಾರು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದು ಡಾಕ್ಟರ್ ಉಮರ್ ನಬಿ ಎಂಬುದು ದೇಹದ ಡಿಎನ್ಎ ಪರೀಕ್ಷೆಯಿಂದ ಖಚಿತವಾಗಿದೆ. ಸ್ಫೋಟಕ್ಕೆ ಬಳಸಲಾದ i20 ಕಾರಿನಲ್ಲಿ ಕಂಡುಬಂದ ದೇಹದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಯನ್ನು ಡಾ. ಉಮರ್ ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಯೊಂದಿಗೆ ಪರಿಶೀಲಿಸಿದಾಗ
ತಂತ್ರಜ್ಞಾನದ ಓಟದಲ್ಲಿ ಓದುವ ಸಂಸ್ಕೃತಿ ಹೋಗಿ ನೋಡುವ ಸಂಸ್ಕೃತಿ ಹೆಚ್ಚಾಗಿದೆ
ಭಾಷೆ ಬಳಸುವುದರಿಂದ ಬೆಳೆಯುತ್ತದೆ. ಆದರೆ, ಈಗ ತಂತ್ರಜ್ಞಾನದ ಓಟದಲ್ಲಿ ನಮ್ಮಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಾ ಕೇವಲ ನೋಡುವ ಸಂಸ್ಕೃತಿ ಬೆಳೆಯುತ್ತಿರುವುದು ಬೇಸರದ ಸಂಗತಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್ ಅಭಿಪ್ರಾಯಪಟ್ಟರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು
ಕರ್ನಾಟಕದಲ್ಲಿ ವ್ಯಾಪಾರ, ಬಂಡವಾಳ ಹೂಡಿಕೆಗೆ ಸಿಂಗಾಪುರ ಉತ್ಸುಕ: ಡಿಸಿಎಂ
“ಬೆಂಗಳೂರಿನಲ್ಲಿ ಸಿಂಗಪುರ ದೇಶವು ವ್ಯಾಪಾರ ವಹಿವಾಟು ನಡೆಸಲು ಹೆಚ್ಚು ಉತ್ಸುಕವಾಗಿದೆ. ತಂತ್ರಜ್ಞಾನ ಹಂಚಿಕೊಳ್ಳುವಿಕೆ ಸೇರಿದಂತೆ ಕೈಗಾರಿಕಾ ಪಾರ್ಕ್ ಆರಂಭಿಸುವ ಬಗ್ಗೆ ಸಿಂಗಾಪುರ ವಿದೇಶಾಂಗ ಸಚಿವರು ಚರ್ಚೆ ನಡೆಸಿದರು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿಂಗಾಪುರ ವಿದೇಶಾಂಗ, ವಾಣಿಜ್ಯ ಮತ್ತು ಕೈಗಾರಿಕೆ
ಬಾಂಬ್ ಸ್ಫೋಟದ ಬಗ್ಗೆ ರಾಜಕೀಯ ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ: ಬಸವರಾಜ ಬೊಮ್ಮಾಯಿ
ದೆಹಲಿಯಲ್ಲಿ ನಡೆದ ಭಯೋತ್ಪಾದನಾ ಕೃತ್ಯದಿಂದ ಇಡೀ ದೇಶ ಆತಂಕಗೊಂಡಿದೆ. ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡುವ ವಿಚಾರ ಇಟ್ಟುಕೊಂಡು ಹೋಗುವಾಗ ಬ್ಲಾಸ್ಟ್ ಆಗಿದೆ. ಈಗ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಂಕುಚಿತ ಭಾವನೆ ಮಾಡುವುದು ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಸಂಸದ ಬಸವರಾಜ
ಮುಂದಿನ ಚುನಾವಣೆ ಹೊತ್ತಿಗೆ ಮಹಿಳಾ ಮೀಸಲಾತಿ; ಡಿಕೆ ಶಿವಕುಮಾರ್
“ಭವಿಷ್ಯದಲ್ಲಿ ಮಹಿಳಾ ಮೀಸಲಾತಿಯನ್ನು ಯಾರೂ ಸಹ ತಪ್ಪಿಸಲು ಆಗುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಶೇ. 33 ರಷ್ಟು ಮಹಿಳಾ ಮೀಸಲಾತಿಗೆ ಎರಡು ಮೂರು ಪಕ್ಷಗಳು ಅಂಕಿತ ಹಾಕಿವೆ. ಮಹಿಳಾ ನಾಯಕರ ಅವಶ್ಯಕತೆಯಿದೆ. ಈಗಾಗಲೇ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಮುಂದಿನ
ಸಾರ್ವಭೌಮತ್ವ ಉಳಿಸಿಕೊಳ್ಳಲು ಸ್ವದೇಶಿ ಆಂದೋಲನ ಅಗತ್ಯ: ಬಸವರಾಜ ಬೊಮ್ಮಾಯಿ
ಚಿತ್ರದುರ್ಗ: ಸ್ವಾತಂತ್ರ್ಯ ಹೋರಾಟದಲ್ಲಿ ಸ್ವದೇಶಿ ಆಂದೋಲನ ಬ್ರಿಟೀಷರನ್ನು ಓಡಿಸಲು ದೊಡ್ಡ ಕೆಲಸ ಮಾಡಿದೆ. ಈಗ ಆಧುನಿಕ ಜಗತ್ತಿನಲ್ಲಿ ನಮ್ಮ ಭಾರತದ ಆರ್ಥಿಕ ಸ್ವಾತಂತ್ರ್ಯ, ಸಾರ್ವಭೌಮತ್ತ ಮತ್ತು ನಮ್ಮತನ ಉಳಿಸಿಕೊಳ್ಳಲು ಮತ್ತೆ ಸ್ವದೇಶಿ ಆಂದೋಲನ ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ
ಆಸ್ತಿಗಾಗಿ ತಾಯಿಯನ್ನೇ ಕೊಂದು ಹೃದಯಾಘಾತದ ಕತೆ ಕಟ್ಟಿದ ಸಾಕು ಮಗಳು!
ಆಸ್ತಿ ಮೇಲಿನ ಆಸೆಗಾಗಿ ಸ್ವಂತ ಮಗಳಂತೆ ಪಾಲನೆ ಪೋಷಣೆ ಮಾಡಿದ್ದ ಸಾಕು ತಾಯಿಯನ್ನೇ ಕೊಲೆಗೈದಿದ್ದ ಪಾಪಿ ಸಾಕು ಮಗಳನ್ನು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ. ಎನ್ ಆರ್ ಪುರ ತಾಲೂಕಿನ ಬಂಡಿಮಠ ಗ್ರಾಮದ ಕುಸುಮ (62) ಅವರನ್ನು ಕೊಲೆಗೈದ 35




