Saturday, November 22, 2025
Menu

ಬಾಲಕಿ ಹೊಟ್ಟೆಯಲ್ಲಿತ್ತು ಮೂರು ಕೆಜಿ ಕೂದಲು

ಬೆಂಗಳೂರಿನಲ್ಲಿ ವೈದ್ಯರೇ ಅಚ್ಚರಿಪಡುವಂತೆ ಎಂಟು ವರ್ಷದ ಬಾಲಕಿಯ ಹೊಟ್ಟೆಯೊಳಗೆ ಮೂರು ಕೆಜಿ ಕೂದಲು ಪತ್ತೆಯಾಗಿದೆ. ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್‌ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಮೂರು ಕೆಜಿ ತೂಕದ ಕೂದಲು ಗಂಟನ್ನು ಹೊರ ತೆಗೆದಿದ್ದಾರೆ. ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದು, ಇದು ಬಹು ಅಪರೂಪದ ಕಾಯಿಲೆ

ಬೀದಿನಾಯಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ

ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ರೂ., ಮೃತಪಟ್ಟವರ ಕುಟುಂಬಕ್ಕೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗುವ ನಾಗರಿಕರ ಪರಿಶೀಲನಾ ಮತ್ತು ಪರಿಹಾರಧನ ವಿತರಣೆ ಸಮಿತಿಯನ್ನು

ಹಾವೇರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು ಆರೋಪ

ಹಾವೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯ ವೈದ್ಯರು ಮತ್ತು ನರ್ಸ್​ಗಳ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎನ್ನಲಾಗುತ್ತಿದೆ. ಮಹಿಳೆ ಆಸ್ಪತ್ರೆಯ ಶೌಚಾಲಯಕ್ಕೆ ಹೋಗುತ್ತಿರುವಾಗಲೇ ಹೆರಿಗೆಯಾಗಿದ್ದು, ನವಜಾತ ಶಿಶುವಿಗೆ ಪೆಟ್ಟಾಗಿ ಮೃತಪಟ್ಟಿದೆ.

ಕಲಬುರಗಿಯಲ್ಲಿ ನಾಲ್ಕು ದಿನ ತೀವ್ರ ಶೀತ ಗಾಳಿ ಎಚ್ಚರಿಕೆ

ಕಲಬುರಗಿಯಲ್ಲಿ ಇಂದಿನಿಂದ ನಾಲ್ಕು ದಿನ ತೀವ್ರ ಶೀತದ ಗಾಳಿ ಬೀಸಲಿದೆ. ಸಾಮಾನ್ಯಕ್ಕಿಂತ 04- 06 ಡಿಗ್ರಿ ಕಡಿಮೆ ತಾಪಮಾನ ದಾಖಲಾಗುವುದು ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಮಾಹಿತಿ ನೀಡಿದ್ದಾರೆ. ಆರೋಗ್ಯದ ಬಗ್ಗೆ ನಿಗಾ ವಹಿಸಿ ಈ ಪರಿಸ್ಥಿತಿಯಲ್ಲಿ ಜನರು ಅನಗತ್ಯವಾಗಿ ಹೊರಗೆ

ಮೆದುಳು ತಿನ್ನುವ ಸೋಂಕು ಹೆಚ್ಚಳ: ಶಬರಿಮಲೆ ಯಾತ್ರಿಗಳು ಮೂಗಿಗೆ ನೀರು ತಾಗದಂತೆ ಎಚ್ಚರ ವಹಿಸಿ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿದ್ದು, ಆತಂಕ ಸೃಷ್ಟಿಯಾಗಿದೆ. ಶಬರಿಮಲೆಯಾತ್ರೆ ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಕದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇರಳ ಸರ್ಕಾರವು ಬಿಡುಗಡೆ ಮಾಡಿರುವ ಆರೋಗ್ಯ ಮಾರ್ಗದರ್ಶಿಯಲ್ಲಿ ಎಚ್ಚರಿಕೆ ನೀಡಿದೆ. ಯಾತ್ರಿಕರು ನದಿಯಲ್ಲಿ ಸ್ನಾನ

ನಾಯಿ ಕಡಿತ: ಚಿಕಿತ್ಸೆ ಪಡೆಯದ ಯುವಕ ಮೂರು ತಿಂಗಳ ಬಳಿಕ ರೇಬಿಸ್‌ಗೆ ಬಲಿ

ನಾಯಿ ಕಚ್ಚಿ ಮೂರು ತಿಂಗಳಾದ ಬಳಿಕ ಯುವಕನೊಬ್ಬ ರೇಬಿಸ್‌ಗೆ ಬಲಿಯಾಗಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. 31 ವರ್ಷದ ಅಯ್ಯಪ್ಪನ್ ಮೃತಪಟ್ಟ ಯುವಕ. ಮೂರು ತಿಂಗಳ ಆತನಿಗೆ ನಾಯಿ ಕಚ್ಚಿತ್ತು. ಆದರೆ ನಿರ್ಲಕ್ಷಿಸಿದ ಆತ ಚಿಕಿತ್ಸೆ ಪಡೆದಿರಲಿಲ್ಲ. ನಾಯಿ ಕಚ್ಚಿದ

ಔತಣಕೂಟದಲ್ಲಿ ತಿನ್ನುತ್ತಿದ್ದಾಗ ಮಾಂಸ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ತೆಲಂಗಾಣದ ನಾಗರ್ಕುರ್ನೂಲ್ ಜಿಲ್ಲೆಯ ಬೊಂಡಲಪಲ್ಲಿ ಗ್ರಾಮದಲ್ಲಿ ಕುರಿಮಾಂಸದ ಕರಿ ತಿನ್ನುವಾಗ ಗಂಟಲಲ್ಲಿ ಮಾಂಸದ ತುಂಡು ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಒಬ್ಬರು ಹೊಸ ಮನೆ ಕಟ್ಟಿದ್ದು, ಆ ಸಂತೋಷಕ್ಕೆ ಭೋಜನ ಕೂಟ ಏರ್ಪಡಿಸಿದ್ದರು. ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಶ್ರಮಿಸಿದ ಕೆಲಸಗಾರರು

ಧಾತ್ರಿ ಮದರ್ ಮಿಲ್ಕ್‌ ಬ್ಯಾಂಕ್‍ಗೆ ಸಚಿವ ಎಂಬಿ ಪಾಟೀಲ್‌ ಚಾಲನೆ 

ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗಿದ್ದು, ಅವಧಿ ಪೂರ್ವ ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಹಾಗೂ ಮಕ್ಕಳ ಆರೋಗ್ಯ ವೃದ್ದಿಗೆ ಈ ಕೇಂದ್ರ ಅತ್ಯಂತ ಸಹಕಾರಿಯಾಗಲಿದೆ ಎಂದು

ಮನೆಯಲ್ಲಿದ್ದ ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ

ಮನೆಯಲ್ಲಿದ್ದ ಇರುವೆಗಳಿಗೆ ಹೆದರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಬಾಲ್ಯದಿಂದಲೂ ಇರುವೆಗಳನ್ನು ಕಂಡರೆ ಭಯಭೀತರಾಗುತ್ತಿದ್ದ 25 ವರ್ಷದ ಮಹಿಳೆ ಮೂರು ವರ್ಷದ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟುಬಂದಿದ್ದರು. ಸಂಜೆ ಅವರ ಪತಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಮುಚ್ಚಿತ್ತು,

ಭುಜನೋವೆಂದು ಕ್ಲಿನಿಕ್‌ನಲ್ಲಿ ಇಂಜೆಕ್ಷನ್‌: ಕೊಡಗಿನಲ್ಲಿ ಯುವಕ ಸಾವು

ಕೊಡಗಿನ ಸುಂಟಿಕೊಪ್ಪದಲ್ಲಿ ಭುಜ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋಗಿ ಇಂಜೆಕ್ಷನ್‌ ಪಡೆದುಕೊಂಡ ಯುವಕ ಮೃತಪಟ್ಟಿದ್ದಾನೆ. ವಿನೋದ್ (34) ಮೃತಪಟ್ಟ ಯುವಕ. ವಿನೋದ್ ಭುಜ ನೋವು ಬಾಧಿಸುತ್ತಿದೆಯೆಂದು ಸಂಜೆ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಅಲ್ಲಿ ವೈದ್ಯರು ಅವರಿಗೆ