Menu

ನೆಲಮಂಗಲದಲ್ಲಿ 24ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ನೆಲಮಂಗಲದ ಅಪಾರ್ಟ್ಮೆಂಟ್‌ವೊಂದರ 24ನೇ ಮಹಡಿಯಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಲಸೂರು ಮೂಲದ ಲೋಕೇಶ್ ಪವನ್ ಕೃಷ್ಣ (26) ಆತ್ಮಹತ್ಯೆ ಮಾಡಿಕೊಂಡವರು. ಲೋಕೇಶ್‌ನ ಅಕ್ಕ ಹಾಗೂ ಭಾವ ಇದೇ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಭಾವ ಕೆಲಸದ ಮೇಲೆ ಹೊರಗೆ ಹೋಗಿದ್ದರು. ಅಕ್ಕ ಗರ್ಭಿಣಿಯಾಗಿದ್ದರಿಂದ ತವರು ಮನೆಗೆ ಬಂದಿದ್ದರು. ಲೋಕೇಶ್ ಅಕ್ಕನ ಮನೆಯ ಕೀ ತೆಗೆದುಕೊಂಡು ಅಪಾರ್ಟ್ಮೆಂಟ್‌ಗೆ ಬಂದಿದ್ದ. ಎರಡು ದಿನ ಮನೆಯಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದ ಕಾರಣಕ್ಕೆ ಆತ್ಮಹತ್ಯೆ

ರಾಯಚೂರಿನಲ್ಲಿ 120ಕ್ಕೂ ಹೆಚ್ಚು ನಕಲಿ ವೈದ್ಯರ ಕ್ಲಿನಿಕ್‌ ಬಂದ್‌

ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ಒಟ್ಟು 120ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಮಾಡಿರುವ ಆರೋಗ್ಯ ಇಲಾಖೆ,  ಅವರ ಕ್ಲಿನಿಕ್‌ಗಳನ್ನು ಬಂದ್‌ ಮಾಡಿದೆ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಆರ್​​ಎಂಪಿ ವೈದ್ಯರ ವಿರುದ್ಧ ಎಂಎಲ್​ಸಿ ಶರಣಗೌಡ ಬಯ್ಯಾಪುರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೆ

ಅಕ್ರಮ ಸಂಬಂಧ ಬಯಲು: ಅತ್ತೆ ಮೇಲೆ ಹಲ್ಲೆಗೈದ ಸೊಸೆ ಮತ್ತು ಪ್ರಿಯಕರ ಅರೆಸ್ಟ್‌

ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಗುಮ್ಮಲಪಲ್ಲಿ ಗ್ರಾಮದಲ್ಲಿ ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.  ಸೊಸೆ ಹಾಗೂ ಪ್ರಿಯಕರ ಶಶಿಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಅತ್ತೆ ರಮಣಮ್ಮರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮ್ಮಲಪಲ್ಲಿ ಗ್ರಾಮದ

ಮಾವನೊಂದಿಗೆ ಅನೈತಿಕ ಸಂಬಂಧ ಮಾಡೆಂದು ಸೊಸೆಗೆ ಕಿರುಕುಳ ನೀಡಿದ ಅತ್ತೆ

ಮಾವನ ಜೊತೆಗೆ ಅನೈತಿಕ ದೈಹಿಕ ಸಂಬಂಧ ಹೊಂದುವಂತೆ ಸೊಸೆಗೆ ಅತ್ತೆಯೇ ಕಿರುಕುಳ ನೀಡಿರುವ ಆರೋಪದಡಿ ಅತ್ತೆ-ಮಾವನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಯಾಸೀನ್ ಪಾಷಾ ಮತ್ತು ಪತ್ನಿ ಶಾಸೀಯಾ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಬಿಎಸ್‌ಎನ್‌ ಸೆಕ್ಷನ್‌ 351(2),

ಹೊಸಕೋಟೆಯಲ್ಲಿ ನಾಲ್ವರ ಆತ್ಮಹತ್ಯೆ ಯತ್ನ, ತಾಯಿ ಪಾರು

ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ಗಂಡ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಗಂಡ ಶಿವು (32) ಮಗಳು ಚಂದ್ರಕಲಾ (11) ಮಗ ಉದಯ್ ಸೂರ್ಯ (7)

ಮದ್ದೂರು: ಗಂಡ ಬರಬೇಕೆಂದು ಆಗ್ರಹಿಸಿ ಮನೆ ಮುಂದೆ ಪತ್ನಿಯ ಶವವಿಟ್ಟು ಪ್ರತಿಭಟನೆ

ಮದ್ದೂರಿನ ಹೆಮ್ಮನಹಳ್ಳಿಯ ಮನೆಯಲ್ಲಿ ಹರ್ಷಿತಾ ಎಂಬ ಮಹಿಳೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪತಿಯ ಮನೆ ಮುಂದೆ ಶವ ಇಟ್ಟು ಪೋಷಕರು ಧರಣಿ ನಡೆಸುತ್ತಿದ್ದಾರೆ. ಹರ್ಷಿತಾ ಶವವಾಗಿ ಪತ್ತೆಯಾದ ಬಳಿಕ ಆಕೆಯ ಪತಿ ಮತ್ತು ಕುಟುಂಬದವರು

ಪತ್ನಿ, ಮಕ್ಕಳು ತೊರೆದಿರುವ ನೋವು: ಮಾಂಜ್ರಾ ನದಿಗೆ ಹಾರಿದ ವ್ಯಕ್ತಿ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಕೆಲವು ವರ್ಷದ ಹಿಂದೆ ಮಕ್ಕಳು ಮತ್ತು ಹೆಂಡತಿ ಬಿಟ್ಟು ಹೋಗಿದ್ದಕ್ಕೆ ನೊಂದಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದು, ಬ್ರಿಡ್ಜ್‌ ಮೇಲಿಂದ ಮಾಂಜ್ರಾ ನದಿಗೆ ಹಾರಿದ್ದಾನೆ. ವ್ಯಕ್ತಿಯು ಬ್ರಿಡ್ಜ್‌ ಮೇಲಿಂದ ಮಾಂಜ್ರಾ ನದಿಗೆ

ವರದಕ್ಷಿಣೆ ಕಿರುಕುಳ ದೂರು: ಎಸ್‌. ನಾರಾಯಣ್‌ ಕುಟುಂಬಕ್ಕೆ ಪೊಲೀಸ್‌ ನೋಟಿಸ್‌

ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಡಿ ಸೊಸೆ ಪ್ರಕರಣ ದಾಖಲಿಸಿರುವ ಹಿನ್ನೆಲೆ ಸಿನಿಮಾ ನಿರ್ದೇಶಕ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು

ಹಾಸನದಲ್ಲಿ ಪತ್ನಿಯನ್ನು ತವರಿಗೆ ಕರೆದೊಯ್ದ ಅತ್ತೆಯ ಕೊಲೆ ಮಾಡಿದ ಅಳಿಯ

ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಪತ್ನಿಯನ್ನು ತವರುಮನೆಗೆ ಕರೆದುಕೊಂಡು ಹೋದ ಕಾರಣಕ್ಕೆ ಸಿಟ್ಟಿಗೆದ್ದ ಅಳಿಯನೊಬ್ಬ ಅತ್ತೆಯನ್ನು ಹತ್ಯೆ ಮಾಡಿದ್ದಾನೆ. ಫೈರೋಜಾ (58) ಕೊಲೆಯಾದ ಅತ್ತೆ. ರಸೂಲ್‌ ಕೊಲೆಗಾರ ಅಳಿಯ. ರಾಮನಾಥಪುರ ನಿವಾಸಿ ಫೈರೋಜಾ ತನ್ನ ಮಗಳು ಶೆಮಿನಾ ಬಾನು ಎಂಬಾಕೆಯನ್ನು ರಸೂಲ್‌ಗೆ ಮದುವೆ

ಹುಣಸೂರಿನಲ್ಲಿ ಪರಿಹಾರ ಹಣಕ್ಕಾಗಿ ಪತಿಯ ಹತ್ಯೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿದ್ದ ಪತ್ನಿ ಅರೆಸ್ಟ್‌

ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರಿನಲ್ಲಿ ಪತಿಯನ್ನು ಹತ್ಯೆ ಮಾಡಿ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ನಂಬಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಲಾಪುರಿ ಎಂಬಾಕೆ ವಿಷ ಹಾಕಿ ಪತಿ ವೆಂಕಟಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ನಾಟಕವಾಡಿದ್ದಾಳೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಪರಿಹಾರ