ಅಪರಾಧ
ಪುಟ್ಟ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಿಸಿದ ಪಣಂಬೂರು ಪೊಲೀಸ್
ಮಂಗಳೂರಿನ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ಕುಟುಂಬ ಕಲಹ ಕಾರಣ ಪುಟ್ಟ ಮಗಳೊಂದಿಗೆ ಆತ್ಮಹತ್ಯೆ ಗೆ ಯತ್ನಿಸಿದ್ದ ರಾಜೇಶ್ ಎಂಬವರನ್ನು ಪಣಂಬೂರು ಪೊಲೀಸರು ರಕ್ಷಿಸಿದ್ದಾರೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಒಳನುಗ್ಗಿದ ಪೊಲೀಸರು ಮಗು ಹಾಗೂ ರಾಜೇಶ್‌ರನ್ನು ರಕ್ಷಿಸುಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ತಣ್ಣಿರುಬಾವಿ ಕಡಲ ಕಿನಾರೆಗೆ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದ ರಾಜೇಶ್, ಮೊಬೈಲ್‌ನಲ್ಲಿ ವೀಡಿಯೊ ಮಾಡಿಕೊಂಡು ಅಕ್ಕ ಮತ್ತು ಇತರ ಸಂಬಂಧಿಕರಿಗೆ ಕಳಿಸಿದ್ದರು. ವೀಡಿಯೊ
ಗಾಣಗಾಪುರ ದೇಗುಲಕ್ಕೆ ತೆರಳುತ್ತಿದ್ದ ಮೂವರು ಅಪಘಾತಕ್ಕೆ ಬಲಿ
ಬೀದರ್‌ನ ಭಾಲ್ಕಿ ನೀಲಮ್ಮನಳ್ಳಿ ತಾಂಡಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಕಾರು ಮತ್ತು ಕೊರಿಯರ್ ವಾಹನ ಡಿಕ್ಕಿಯಾಗಿ ಕಾರಿನ ಚಾಲಕ ಮತ್ತು ಅದರಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ
ನೋಟಿನ ಮಳೆ ಸುರಿಸುವ ನಂಬಿಸಿ ವಂಚಿಸುತ್ತಿದ್ದ ಜಾಲ ಪತ್ತೆ
ಬೆಂಗಳೂರು: ನೋಟಿನ ಮಳೆ ಸುರಿಸುವುದಾಗಿ ಅಮಾಯಕರನ್ನು ವಂಚಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿರುವ ಹಲಸೂರು ಗೇಟ್ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಚಲಾವಣೆಯಿಂದ ಹಿಂಪಡೆಯಲಾದ 2 ಸಾವಿರ ರೂ. ಮುಖಬೆಲೆಯ ಅಸಲಿ ನೋಟುಗಳ ಸೀರೀಸ್ ನಂಬರ್ ತಿರುಚಿರುವ ನಕಲಿ ನೋಟುಗಳ ಕುರಿತು
ನಟಿಗೆ ಅಶ್ಲೀಲ ಫೋಟೊ, ಸಂದೇಶ ಕಳುಹಿಸಿದ ಕಾಮುಕ ಅರೆಸ್ಟ್
ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಟಿಸಿರುವ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಅಂಗಗಳ ಫೋಟೊ ಕಳುಹಿಸಿದ್ದ ಕಾಮುಕನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಟೆಂಪ್ಲೆಟನ್ ಅಂಡ್ ಪಾರ್ಟನ್ ಕಂಪನಿಯಲ್ಲಿ ಡೆಲಿವರಿ ಮ್ಯಾನೇಜರ್
ಶೂನ್ಯ ಬಡ್ಡಿ ಆಮಿಷ: ಅಡಮಾನ ಚಿನ್ನದೊಂದಿಗೆ ಕಂಪೆನಿಯವರು ಪರಾರಿ
ಬೆಂಗಳೂರಿನಲ್ಲಿ ಶೂನ್ಯ ಬಡ್ಡಿ ಆಸೆ ತೋರಿಸಿ ಗ್ರಾಹಕರಿಗೆ ಚಿನ್ನ ಅಡಮಾನ ಸಾಲ ನೀಡಿದ ನಕಲಿ ಕಂಪನಿಯು ಅಡಮಾನವಿಟ್ಟಿದ್ದ ಚಿನ್ನದ ಸಮೇತ ನಾಪತ್ತೆಯಾಗಿದೆ. ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನ, ಬೆಳ್ಳಿಯೊಂದಿಗೆ ನಕಲಿ ಕಂಪನಿಯವರು ಪರಾರಿಯಾಗಿದ್ದು, ಅಪರಾಧ ಪತ್ತೆ ದಳ ವಿಭಾಗದ ಪೊಲೀಸರು ಇಬ್ಬರು
ಸ್ನೇಹಿತನೊಂದಿಗಿದ್ದ ಯುವತಿಯ ಎಳೆದೊಯ್ದು ಗ್ಯಾಂಗ್ ರೇಪ್
ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಯ್‌ಫ್ರೆಂಡ್ ಜೊತೆಗಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಕಾರಿನಲ್ಲಿ ಗೆಳೆಯನ ಜೊತೆ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಡ್ಯಾನ್ಸರ್ ಸುಧೀಂದ್ರ ಸಾವು
ನೆಲಮಂಗಲ ತಾಲೂಕಿನ ಪೆಮ್ಮನಹಳ್ಳಿ ಬಳಿ ಕೆಟ್ಟು ನಿಂತಿದ್ದ ಕಾರನ್ನು ಪರಿಶೀಲಿಸುತ್ತಿದ್ದಾಗ ವೇಗವಾಗಿ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಡ್ಯಾನ್ಸರ್ ಸುಧೀಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್ ಚಾಲಕ ಸ್ಥಳದಲ್ಲೇ ವಾಹನ ನಿಲ್ಲಿಸಿ ಪರಾರಿಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಪಘಾತದ ಒಂದು ದಿನ
ರೇಣುಕಾಸ್ವಾಮಿ ಕೊಲೆ: ಸುಪ್ರೀಂ ಆದೇಶ ಮರುಪರಿಶೀಲನೆಗೆ ಪವಿತ್ರಾ ಗೌಡ ಅರ್ಜಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಪುನರ್ ಪರಿಶೀಲಿಸುವಂತೆ ಆರೋಪಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ರಾಜ್ಯ ಸರ್ಕಾರದ ಪರ ವಕೀಲ ಅನಿಲ್ ನಿಶಾನಿ ಪ್ರತಿಕ್ರಿಯೆ ನೀಡಿದ್ದು, ಪವಿತ್ರ
ದಾವಣಗೆರೆಯಲ್ಲಿ ಸರ್ಕಾರಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚನೆ ಆರೋಪಿ ಅರೆಸ್ಟ್
ದಾವಣಗೆರೆಯಲ್ಲಿ ಜನರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಶ್ರೀನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಶ್ರೀನಾಥ್ ರಾಜಕೀಯ ನಾಯಕನ ಸೋಗಿನಲ್ಲಿ ಕೆಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಡಿ
ಆನ್ಲೈನ್ ವಂಚನೆ: 1.09 ಕೋಟಿ ರೂ. ಕಳೆದುಕೊಂಡ ಬಾಗಲಕೋಟೆ ವ್ಯಾಪಾರಿ
ಆನ್ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಸಿಲುಕಿದ ಬಾಗಲಕೋಟೆಯ ವ್ಯಾಪಾರಿಯೊಬ್ಬರು 1.09 ಕೋಟಿ ರೂ. ಕಳೆದುಕೊಂಡಿರುವುದು ಬಹಿರಂಗಗೊಂಡಿದೆ. ಆಸ್ತಾ ಟ್ರೇಡ್ 903 ಸ್ಟ್ರಾಟಜಿ ಹಬ್ ಎಂಬ ಹೆಸರಿನ ನಕಲಿ ಆನ್ಲೈನ್ ಗ್ರೂಪ್ ಮೂಲಕ ಅಂತಾರಾಜ್ಯ ಆನ್‌ಲೈನ್ ವಂಚಕರು ವ್ಯಾಪಾರಿಗೆ ಹೂಡಿಕೆ ಮಾಡಿದರೆ ಹೆಚ್ಚಿನ




