ಅಪರಾಧ
ನಾಳೆ ಇರ್ತಿನೋ ಇಲ್ವೋ… ರೀಲ್ಸ್ ಮಾಡಿದ್ದ ಸ್ವಾಮೀಜಿ ಗಂಗಾವತಿಯಲ್ಲಿ ನೀರಲ್ಲಿ ಮುಳುಗಿ ಸಾವು
ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಾಳೆ ಇರ್ತಿನೋ ಇಲ್ವೋ, ಏನ್ ಮಾಡ್ತಿನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ಮೃತಪಟ್ಟಿದ್ದಾರೆ. ಭಾನುವಾರ ರೀಲ್ಸ್ ಮಾಡಿದ್ದ ಸ್ವಾಮೀಜಿ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ವಾಮೀಜಿ ಮುಳುಗಿ ಚೀರಾಡುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಇರದ ಕಾರಣ ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಕರೆದುಕೊಂಡು ಹೋಗುತ್ತಿರುವಾಗ ಡೋ
ಚಿಂತಾಮಣಿಯಲ್ಲಿ ವಿವಾದ ಸೃಷ್ಟಿಸಿದ ಪ್ಯಾಲೆಸ್ತೀನ್ ಧ್ವಜ
ಕೇಂದ್ರ ಸರ್ಕಾರವೇ ಪ್ಯಾಲೆಸ್ತೀನ್ ಪರ ಎಂದು ಹೇಳಿದರೂ ಕಲಬುರಗಿ ಬಳಿಕ ಚಿಕ್ಕಬಳ್ಳಾಪುರದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಟ ವಿವಾದ ಭುಗಿಲೆದ್ದಿದೆ. ಚಿಂತಾಮಣಿ ತಾಲೂಕಿನ ಮುರುಗಮಲ್ಲ ದರ್ಗಾ ಉರುಸ್ ವೇಳೆ ಸರ್ಕಾರಿ ಗಂಧೋತ್ಸವ ವೇಳೆ ಪ್ಯಾಲೆಸ್ತೀನ್ ಧ್ವಜ ಹಾರಾಟ ಮಾಡಿದ್ದ ಪುಂಡರು ಪ್ಯಾಲೆಸ್ಟೈನ್ ಧ್ವಜ
ಗಣೇಶ ವಿಸರ್ಜನೆ: ಮದ್ದೂರಲ್ಲಿ ಕಲ್ಲು ತೂರಾಟ, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ
ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ ನಡೆದಿದ್ದು, ಇಂದು ಮದ್ದೂರು ಬಂದ್ ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ರಾಮ್ ರಹೀಂ ನಗರ ಉದ್ವಿಗ್ನಗೊಂಡಿದು, ಮುನ್ನೆಚ್ಚರಿಕೆ ಕ್ರಮವಾಗಿ ಮದ್ದೂರು ಪಟ್ಟಣದಲ್ಲಿ ಬಿಗಿ
ಜಮಖಂಡಿಯಲ್ಲಿ ಕುಡುಕ ಯುವಕನ ಹಿಂಸೆ ತಾಳದೆ ತಂದೆ, ತಾಯಿ, ಅಣ್ಣನಿಂದಲೇ ಕೊಲೆ
ನಿತ್ಯ ಕುಡಿದು ಬಂದು ಪೋಷಕರೊಂದಿಗೆ ಜಗಳವಾಡಿ ಹೊಡೆದು ಬಡಿಯುತ್ತಿದ್ದ ಯುವಕನನ್ನು ಹಿಂಸೆ ತಾಳಲಾಗದೆ ತಂದೆ,ತಾಯಿ, ಅಣ್ಣ ಸೇರಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ. ಅನಿಲ್ ಪರಪ್ಪ ಕಾನಟ್ಟಿ (32) ಕೊಲೆಯಾದ ಯುವಕ, ತಂದೆ
ಬಾಪೂಜಿನಗರದಲ್ಲಿ ಅಪರಿಚಿತರಿಂದ ಕಾರು ಚಾಲಕನ ಕೊಲೆ
ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೈಸೂರು ರಸ್ತೆಯ ಬಾಪೂಜಿನಗರದಲ್ಲಿಕಾರು ಚಾಲಕರೊಬ್ಬರನ್ನು ಬಿಯರ್ ಬಾಟಲ್, ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವುದು ಪತ್ತೆಯಾಗಿದೆ. ಕೌಶಿಕ್ (25 ) ಕೊಲೆಯಾದವರು, ಅಪರಿಚಿತರು ಕೊಲೆ ಮಾಡಿರಬುದೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬ್ಯಾಟರಾಯನಪುರದಲ್ಲಿ ಕುಡಿದು ಸ್ನೇಹಿತನ ಮೇಲೆ ಬಾಟಲಿಯಿಂದ ಹಲ್ಲೆಗೈದು ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಿಷಿ ತೇಜ್ ಎಂಬ ಯುವಕನ ಮೇಲೆ ಸ್ನೇಹಿತ ದಿವ್ಯ ತೇಜ್ ಎಂಬಾತ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ
ನೋಟಿಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಖಾರದಪುಡಿ ಎರಚಿದ ಮಂಡ್ಯ ಮಹಿಳೆ
ಮಂಡ್ಯದ ಕೆ.ಆರ್.ಪೇಟೆಯ ಕಾಳೇನಹಳ್ಳಿ ಗ್ರಾಮದಲ್ಲಿ ನೋಟಿಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಮಹಿಳೆ ಖಾರದಪುಡಿ ಎರಚಿದ ಘಟನೆ ನಡೆದಿದೆ. ಅಪಘಾತ ಪ್ರಕರಣ ಸಂಬಂಧ ನೋಟೀಸ್ ಕೊಡಲು ಹೋಗಿದ್ದ ಕೋರ್ಟ್ ಸಿಬ್ಬಂದಿಗೆ ಮಹಿಳೆ ಖಾರದ ಪುಡಿ ಎರಚಿರುವ ವೀಡಿಯೊ ಮೊಬೈಲ್ ನಲ್ಲಿ
ಸಂಸದ ಸುಧಾಕರ್ ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ
ಸಂಸದ ಸುಧಾಕರ್ ಗೆ ಸೇರಿದ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಕಿಟಕಿ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳ ಮೂಲದ ವಿದ್ಯಾರ್ಥಿ ಮಹಮದ್ ಶಬೀರ್ (26) ಆತ್ಮಹತ್ಯೆ ಮಾಡಿಕೊಂಡವ. ಸಂಸದ ಸುಧಾಕರ್ ಗೆ ಸೇರಿದ ಶಾಂತ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನಲಿ ಈ
ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್‌ನಿಂದ ಎರಡು ಲಕ್ಷ ರೂ. ದಂಡ
ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ. ಎರಡು ವಾರದಲ್ಲಿ ದಂಡ ಕಟ್ಟದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಪೊಲೀಸರ ಮೇಲಿನ ಕೋಪಕ್ಕೆ ಬೆಂಗಳೂರಿನ ಇಂದಿರಾನಗರ ನಿವಾಸಿ
ಆನೇಕಲ್ ತೈಲ ಕಾರ್ಖಾನೆಯೊಂದರಲ್ಲಿ ಬೆಂಕಿ ದುರಂತ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿರುವ ವಿಶಾಲ್ ಟ್ರೈಬೊಟೆಕ್ ತೈಲ ಕಾರ್ಖಾನೆಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕಾರ್ಖಾನೆಯ ಒಳಗಿನ ಆಯಿಲ್ ಬ್ಯಾರೆಲ್‌ಗಳು ಧಗಧಗನೆ ಉರಿದಿವೆ. ಯಾವುದೇ ಪ್ರಾಣಹಾನಿ ಆಗಿಲ್ಲ, ಸ್ಥಳಕ್ಕೆ ತಕ್ಷಣವೇ ಧಾವಿಸಿದ